ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಜ್ಯದ ಇತಿಹಾಸದಲ್ಲೆ ಪ್ರಥಮ ಬಾರಿಗೆ ಗ್ರಾಮೀಣ ಭಾಗದ ಪತ್ರಕರ್ತರಿಗೆ “ಉಚಿತ ಬಸ್ ಪಾಸ್” ಸೌಲಭ್ಯ ಹಾಗೂ ಎಲ್ಲಾ ಪತ್ರಕರ್ತರಿಗೆ 5 ಲಕ್ಷದವರೆಗೆ ಚಿಕಿತ್ಸೆಯ ವೆಚ್ಚ ಭರಿಸುವ “ಆರೋಗ್ಯ ಸಂಜೀವಿನಿ” ಯೋಜನೆಗೆ ಚಾಲನೆ ನೀಡಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಸಮಾಜದ ಧ್ವನಿಯಂತೆ ಕೆಲಸ ಮಾಡುವ ಪತ್ರಕರ್ತರಿಗೆ ಆರ್ಥಿಕ ಭದ್ರತೆ ಒದಗಿಸಿ, ಅವರ ಧ್ವನಿಯನ್ನು ಮತ್ತಷ್ಟು ನಿರ್ಭೀತಗೊಳಿಸಿದ ಕೀರ್ತಿ ನಮ್ಮ ಸರ್ಕಾರದ್ದು.
ಸ್ವಾಭಿಮಾನ, ಸ್ವಾವಲಂಬನೆ ಹಾಗೂ ಘನತೆಯ ಬದುಕು ಸ್ವಾತಂತ್ರ್ಯದ ನೈಜ ಆಶಯ. ಈ ಆಶಯದ ಈಡೇರಿಕೆಗೆ ನಾವು ಪ್ರಾಮಾಣಿಕ ಶ್ರಮಿಸುತ್ತಿದ್ದೇವೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.

