ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
“ಕಾಂಗ್ರೆಸ್ ಸರ್ಕಾರದ ಬೆಲೆ ಏರಿಕೆ ಸಮರಕ್ಕೆ ವಿದ್ಯಾರ್ಥಿಗಳೂ ಹೊರತಲ್ಲ” ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಹೇಳಿದರು.
ನಾಡಿನ ಜನರ ಮೇಲೆ ನಿತ್ಯವೂ ಒಂದಿಲ್ಲೊಂದು ಬೆಲೆ ಏರಿಕೆಯ ಬರೆ ಎಳೆಯುತ್ತಾ ಸುಲಿಗೆ ಮಾಡುತ್ತಿರುವ ಕರ್ನಾಟಕ ಕಾಂಗ್ರೆಸ್ ಸರ್ಕಾರ, ಇದೀಗ ನಾಡಿನ ಮಕ್ಕಳ ಅಕ್ಷರ ದೀವಿಗೆಯನ್ನೂ ಬಿಸಿಯಾಗಿಸಿದೆ.
ಈಗಾಗಲೇ ಕೆಲವು ಪಠ್ಯ ಪುಸ್ತಕಗಳ ಬೆಲೆ 100% ಹೆಚ್ಚಾಗಿದ್ದು, ಇದೀಗ ಮತ್ತೆ ಶೇ. 10% ಏರಿಸಲು ಹೊರಟಿರುವ ನಡೆ ಕಾಂಗ್ರೆಸ್ ಸರ್ಕಾರದ ಶಿಕ್ಷಣ ವಿರೋಧಿ ನಡೆಗೆ ಹಿಡಿದ ಕೈಗನ್ನಡಿಯಾಗಿದೆ.
ಈಗಾಗಲೇ ನಾಡಿನ ಸಾರ್ವಜನಿಕರ ಶಾಪಕ್ಕೆ ಗುರಿಯಾಗಿರುವ ರಾಜ್ಯ ಸರ್ಕಾರ ಈ ಕೂಡಲೇ ಲಕ್ಷಾಂತರ ಪೋಷಕರಿಗೆ ಆರ್ಥಿಕ ಸಂಕಷ್ಟ ತಂದೊಡ್ಡುವ ಪಠ್ಯ ಪುಸ್ತಕಗಳ ದರ ಏರಿಕೆಯ ನಿಲುವು ಹಿಂಪಡೆಯಬೇಕು ಎಂದು ವಿಜಯೇಂದ್ರ ಆಗ್ರಹಿಸಿದ್ದಾರೆ.