ಭಾರೀ ಮಳೆ, ಇಂದು ಶಾಲಾ ಕಾಲೇಜ್ ಗಳಿಗೆ ರಜೆ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಬೆಂಗಳೂರಿನಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಜನ ಜೀವನ ಅಸ್ತವ್ಯಸ್ತವಾಗಿದೆ. ಭಾರೀ ಮಳೆಯ ಹಿನ್ನೆಲೆಯಲ್ಲಿ ಬೆಂಗಳೂರಿನ ಖಾಸಗಿ ಹಾಗೂ ಸರ್ಕಾರಿ ಶಾಲಾ-ಕಾಲೇಜುಗಳಿಗೆ ಅಕ್ಟೋಬರ್-16 ರಂದು ಬುಧವಾರ ರಜೆ ಘೋಷಣೆ ಮಾಡಲಾಗಿದೆ.

ಬೆಂಗಳೂರು ನಗರ ಜಿಲ್ಲಾಧಿಕಾರಿ ಜಗದೀಶ್ ಅವರು ಮಳೆ ಸುರಿಯುತ್ತಿರುವುದರಿಂದ ಅ-16 ರಂದು ಶಾಲಾ ಕಾಲೇಜ್ ಗಳಿಗೆ ರಜೆ ಘೋಷಣೆ ಮಾಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಮಳೆಯ ಸ್ಥಿತಿಗತಿ ನೋಡಿಕೊಂಡು ಮುಂದಿನ ತೀರ್ಮಾನ ಮಾಡಲಾಗುವುದು. ರಸ್ತೆಗಳು ಜಲಾವೃತ-

ಬೆಂಗಳೂರಿನಲ್ಲಿ ಸೋಮವಾರ ರಾತ್ರಿ, ಮಂಗಳವಾರ ಬೆಳಿಗ್ಗೆಯಿಂದ ವೈಟ್ ಫೀಲ್ಡ್‌, ಮಾರತಹಳ್ಳಿ, ಸರ್ಜಾಪುರ ಸುತ್ತಮುತ್ತ ಭಾರಿ ಮಳೆಯಾಗುತ್ತಿದ್ದು ನಗರದ ಬಹುತೇಕ ರಸ್ತೆಗಳು ಜಲಾವೃತವಾಗಿವೆ. ಡ್ರೈನೇಜ್ ಪೈಪ್ ಹೊಡೆದು ರಸ್ತೆ ಮಧ್ಯೆ ಮೋರಿ ನೀರು ಹಾರಿಯುತ್ತಿದೆ. ಪರಿಣಾಮ ವಾಹನ ಸಂಚಾರಕ್ಕೆ ತೊಂದರೆ ಉಂಟಾಗಿದೆ.

ಇತ್ತ ಹಲಸೂರು ಸುತ್ತಮುತ್ತ ಧಾರಾಕಾರ ಮಳೆಯಾಗುತ್ತಿದ್ದು, ಗುಪ್ತ ಲೇಔಟ್‌ನಲ್ಲಿ ಮ್ಯಾನ್ ಹೋಲ್ ಉಕ್ಕಿ ಹರಿದಿದೆ. ಭಾರಿ ಮಳೆಗೆ ಬನಶಂಕರಿ ಸಿಂಡಿಕೇಟ್ ಕಾಲೋನಿ ಸಮೀಪ ಮರವೊಂದು ನೆಲಕ್ಕೆ ಉರುಳಿದೆ. ಅದೃಷ್ಟವಶಾತ್‌ಮಳೆ ಕಾರಣಕ್ಕೆ ಜನರ ಓಡಾಟ ಇರಲಿಲ್ಲ ಹೀಗಾಗಿ ಅನಾಹುತ ಸಂಭವಿಸಿಲ್ಲ.ಎಲ್ಲೆಲ್ಲಿ ಎಷ್ಟು ಪ್ರಮಾಣದಲ್ಲಿ ಮಳೆ

ಹಂಪಿ ನಗರ 26 ಮಿ.ಮೀ, ಕೆಂಗೇರಿ 25.5 ಮಿ.ಮೀ, ಮಾರುತಿ ಮಂದಿರ 25 ಮಿ.ಮೀ, ದೊರೆಸಾನಿಪಾಳ್ಯ 21.5 ಮಿ.ಮೀ, ರಾಜರಾಜೇಶ್ವರಿ ನಗರ 19.5 ಮಿ.ಮೀ, ನಾಯಂಡಹಳ್ಳಿ 17 ಮಿ.ಮೀ, ನಂದಿನಿ ಲೇಔಟ್​​ 16.5 ಮಿ.ಮೀ, ಬಿಟಿಎಂ ಲೇಔಟ್​​ 16.5 ಮಿ.ಮೀ ಮಳೆಯಾಗಿದೆ.

ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿರುವ ಹೋಟೆಲ್‌ಗೆ ಮಳೆ ನೀರು ನುಗ್ಗಿದ್ದರೆ, ಗುಟ್ಟಹಳ್ಳಿ ಸರ್ಕಲ್ ಬಳಿ ಚರಂಡಿ ನೀರು ತುಂಬಿ ರಸ್ತೆ ಮೇಲೆ ಹರಿಯುತ್ತಿದೆ. ಮಾನ್ಯತಾ ಟೆಕ್ ಪಾರ್ಕ್ ಸಮೀಪದ ರಸ್ತೆಗಳಲ್ಲಿ ಮಳೆ ನೀರು ಹೊಳೆಯಂತೆ ಹರಿಯುತ್ತಿದೆ. ಟೆಕ್ ಪಾರ್ಕ್‌ನ ರಸ್ತೆಗಳೆಲ್ಲ ಜಲಾವೃತಗೊಂಡಿದೆ. ಕೋಟಿ ಕೋಟಿ ಬೆಲೆ ಬಾಳುವ ಕಾರುಗಳು ನೀರಿನಲ್ಲಿ ಮುಳುಗಡೆಯಾಗಿವೆ. 

- Advertisement -  - Advertisement -  - Advertisement - 
Share This Article
error: Content is protected !!
";