ಚಂದ್ರವಳ್ಳಿ ನ್ಯೂಸ್, ಶ್ರೀ ವಿಜಯಪುರಂ:
ಹೆಲಿಕಾಪ್ಟರ್ ಮಂಗಳವಾರ ಬೆಳಗ್ಗೆ ಉತ್ತರ ಮತ್ತು ಮಧ್ಯ ಅಂಡಮಾನ್ ಜಿಲ್ಲೆಯ ರಂಗತ್‌ನಿಂದ ಟೇಕ್‌ಆಫ್ ಆದ ಕೆಲ ಹೊತ್ತಲ್ಲಿ ಸಮುದ್ರದಲ್ಲಿ ಪತನಗೊಂಡಿದೆ. ಅದೃಷ್ಟವಶಾತ್ ಎಲ್ಲ ಪ್ರಯಾಣಿಕನ್ನೂ ಸಮುದ್ರದಿಂದ ರಕ್ಷಿಸಲಾಗಿದೆ.
ಇಬ್ಬರು ಸಿಬ್ಬಂದಿ ಸೇರಿ ಏಳು ಪ್ರಯಾಣಿಕರಿದ್ದ ಪವನ್ ಹನ್ಸ್ ಹೆಲಿಕಾಪ್ಟರ್ ಮಾಯಾ ಬಂದರ್‌ನಲ್ಲಿ ನಿಗದಿತ ಸಮಯಕ್ಕೆ ಇಳಿಯುವ ಮುನ್ನ, ಬೆಳಗ್ಗೆ 9.30ರ ಸುಮಾರಿಗೆ ಅಪಘಾತ ಸಂಭವಿಸಿದೆ. ಸಮುದ್ರದಿಂದ ರಕ್ಷಿಸಿರುವ ಎಲ್ಲಾ ಐವರು ಪ್ರಯಾಣಿಕರು ಮತ್ತು ಇಬ್ಬರು ಸಿಬ್ಬಂದಿಯನ್ನು ಆಸ್ಪತ್ರೆಗೆ ಸೇರಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಬೆಳಿಗ್ಗೆ 9.30ರ ವೇಳೆಗೆ ಹೆಲಿಕಾಪ್ಟರ್ ಸಮುದ್ರದಲ್ಲಿ ಪತನಗೊಂಡಿದೆ. ಹೆಲಿಕಾಪ್ಟರ್‌ನಲ್ಲಿ ಕೆಲವು ತಾಂತ್ರಿಕ ದೋಷಗಳಿತ್ತು ಎಂಬುದು ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದೆ. ಹಾಗಾಗಿ, ಪೈಲಟ್ ಸಮುದ್ರದಲ್ಲಿ ಕ್ರ್ಯಾಶ್ ಲ್ಯಾಂಡಿಂಗ್ ಮಾಡಿದ್ದಾರೆ. ತನಿಖೆ ನಡೆಯುತ್ತಿದೆ ಎಂದು ಹಿರಿಯ ನಾಗರಿಕ ವಿಮಾನಯಾನ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಹೆಲಿಕಾಪ್ಟರ್ ಬೆಳಗ್ಗೆ 8.30ರ ಸುಮಾರಿಗೆ ಪೋರ್ಟ್ ಬ್ಲೇರ್‌ನಿಂದ ರಂಗತ್‌ಗೆ ಹೊರಟಿತ್ತು. 9.30ಕ್ಕೆ ಲ್ಯಾಂಡಿಂಗ್ ಆಗಬೇಕಿತ್ತು. ಆದರೆ, ರನ್ ವೇಗಿಂತ 300 ಮೀಟರ್ ದೂರದಲ್ಲಿ ಸಮುದ್ರಕ್ಕೆ ಬಿದ್ದಿದೆ. ವಿಮಾನದಲ್ಲಿ ಐವರು ಪ್ರಯಾಣಿಕರು ಮತ್ತು ಇಬ್ಬರು ಸಿಬ್ಬಂದಿ ಇದ್ದರು. ಎಲ್ಲರನ್ನೂ ರಕ್ಷಿಸಲಾಗಿದ್ದು, ಸುರಕ್ಷಿತವಾಗಿದ್ದಾರೆ ಎಂದು ಪವನ್ ಹನ್ಸ್ ವಕ್ತಾರರು ಹೇಳಿದರು.
ನಾಗರಿಕ ವಿಮಾನಯಾನ ನಿರ್ದೇಶಕ ನಿತೇಶ್ ರಾವತ್ ಪ್ರತಿಕ್ರಿಯಿಸಿ, ಪೈಲಟ್ ಸೇರಿ ಒಟ್ಟು ಏಳು ಮಂದಿ ವಿಮಾನದಲ್ಲಿದ್ದರು. ಎಲ್ಲರೂ ಸುರಕ್ಷಿತವಾಗಿದ್ದಾರೆ. ಪೈಲಟ್ ಹೇಳಿಕೆಯನ್ನು ಪಡೆದಿಲ್ಲ. ಗಾಯಾಳುಗಳು ಮಾಯಾಬಂದರ್‌ಡಾ.ರಾಜೇಂದ್ರ ಪ್ರಸಾದ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರನ್ನು ವಿಜಯ ಪುರಂಗೆ ಕರೆತರಲು ನಾವು ಪ್ರಯತ್ನಿಸುತ್ತಿದ್ದೇವೆ ಎಂದು ಹೇಳಿದರು.
ಉತ್ತರ ಮತ್ತು ಮಧ್ಯ ಅಂಡಮಾನ್ ಉಪ ಆಯುಕ್ತ ಸುಶಾಂತ್ ಪಾಧಾ ಅವರು ರಕ್ಷಣಾ ತಂಡ, ಪೊಲೀಸರು ಮತ್ತು ಕೋಸ್ಟ್ ಗಾರ್ಡ್ ತಕ್ಷಣ ಕಾರ್ಯನಿರ್ವಹಿಸಿ ಏಳು ಜನರನ್ನು ರಕ್ಷಿಸಿದ್ದಾರೆ ಎಂದು ತಿಳಿಸಿದರು.
ಹೆಲಿಕಾಪ್ಟರ್‌ನಲ್ಲಿ ರಜಿತಾ ದೇವಿ, ಕಮಲಾ ಚಂದ್ರ ದಾಸ್, ಶಿಪ್ರಾ ಸಹಾ, ನಂಬಿ ಅಮ್ಮ, ಒಂದು ಮಗು ಮತ್ತು ಪೈಲಟ್‌ಗಳಾದ ಕ್ಯಾಪ್ಟನ್ ಅನಿಲ್ ಜಾನು ಮತ್ತು ಕ್ಯಾಪ್ಟನ್ ಟಿಪಿಎಸ್ ಗುಲಿಯಾ ಇದ್ದರು. ಎಲ್ಲರೂ ಸುರಕ್ಷಿತವಾಗಿದ್ದಾರೆ ಎಂದು ಪಾಧಾ ಮಾಹಿತಿ ನೀಡಿದ್ದಾರೆ.
ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಡಿಜಿಪಿ ಹರ್ಗೋಬಿಂದರ್ ಸಿಂಗ್ ಧಲಿವಾಲ್ ಮಾತನಾಡಿ, ಪೊಲೀಸ್ ಮೆರೈನ್ ಫೋರ್ಸ್ ಅವರ ತ್ವರಿತ ಕಾರ್ಯಾಚರಣೆ ಕೈಗೊಂಡು ಸಮುದ್ರದ ಮಧ್ಯದಿಂದ ಎಲ್ಲಾ ಪ್ರಯಾಣಿಕರು ಮತ್ತು ಪೈಲಟ್‌ಗಳನ್ನು ರಕ್ಷಿಸಿದ್ದಾಗಿ ಹೇಳಿದ್ದು, ಮೆಚ್ಚುಗೆ ವ್ಯಕ್ತಪಡಿಸಿದರು. ಪವನ್ ಹನ್ಸ್ ಲಿಮಿಟೆಡ್ ಉತ್ತರ ಪ್ರದೇಶದ ನೋಯ್ಡಾದ ಕೇಂದ್ರ ಸಾರ್ವಜನಿಕ ವಲಯದ ಉದ್ಯಮವಾಗಿದೆ.

