ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಶ್ರೀ ಜಗದ್ಗುರು ಸಿದ್ದರಾಮೇಶ್ವರ ಮಹಾಸಂಸ್ಥಾನ, ಭೋವಿ ಗುರುಪೀಠದಿಂದ ಕೊಡಲ್ಪಡುವ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪೋತ್ಸಾಹ ವಿದ್ಯಾನಿಧಿ ಯನ್ನು ಸಮರ್ಪಿಸಲಾಯಿತು.
ರಷ್ಯಾ ದೇಶದಲ್ಲಿ MBBS ಪದವಿ ಅಭ್ಯಾಸ ಮಾಡುತ್ತಿರುವ ದಾವಣಗೆರೆ ಜಿಲ್ಲೆಯ ಹೊನ್ನಳ್ಳಿ ತಾಲ್ಲೂಕಿನ ಹನುಮಂತಪ್ಪ ಮತ್ತು ಆಶಾ ದಂಪತಿಗಳ ಸುಪುತ್ರಿ ದಿವ್ಯಾ ಎಮ್ ಜಿ ಅವರಿಗೆ ವಿಶ್ವವಾಣಿ ಸಂಯೋಗದೊಂದಿಗೆ ರಷ್ಯಾ ದೇಶದ ಮಾಸ್ಕೋ ನಗರದಲ್ಲಿ ಜರುಗಿದ ಸಮಾರಂಭದಲ್ಲಿ
ಜಗದ್ಗುರು ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಹಾಗೂ ವಿಶ್ವೇಶ್ವರ ಭಟ್ ಅವರು ವಿದ್ಯಾರ್ಥಿನಿಗೆ ಸ್ಕಾಲರ್ ಶಿಪ್ ಆಗಿ ಒಂದು ಲಕ್ಷ ರೂಪಾಯಿಗಳ ಕೊಡುಗೆ ನೀಡಿದರು.