ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ದೊಡ್ಡಬಳ್ಳಾಪುರ ತಾಲೂಕಿನ ಕಂಚಿನಾಳ ಗ್ರಾಮದ ಗೌರಮ್ಮ ಅವರು ಕ್ಯಾನ್ಸರ್ ಸಮಸ್ಯೆಯಿಂದ ಬಳಲುತ್ತಿದ್ದು ಇವರಿಗೆ ಧರ್ಮಸ್ಥಳ ವತಿಯಿಂದ ಚಿಕಿತ್ಸೆಗೆ ಕ್ರಿಟಿಕಲ್ ಇಲ್ ನೆಸ್ ಫಂಡ್ ಕಾರ್ಯಕ್ರಮದಡಿಯಲ್ಲಿ 25,000 ಮೊತ್ತ ಮಂಜೂರಾಗಿದ್ದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜಿಲ್ಲಾ ನಿರ್ದೇಶಕ ಉಮಾರಬ್ಬ ರವರು ವಿತರಣೆ ಮಾಡಿದರು.
ಈ ಸಂದರ್ಭದಲ್ಲಿ ತಾಲೂಕಿನ ಯೋಜನಾಧಿಕಾರಿ ದಿನೇಶ್, ಗ್ರಾಮ ಪಂಚಾಯತಿ ಸದಸ್ಯ ಮಧು, ವಲಯದ ಮೇಲ್ವಿಚಾರಕ ರಘು, ಸೇವಾ ಪ್ರತಿನಿಧಿ ಸರ್ವೇಶ್ ಸಂಘದ ಸದಸ್ಯರು ಊರಿನ ಗಣ್ಯರು ಉಪಸ್ಥಿತರಿದ್ದರು.