ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಹೇಮಾವತಿ ಲಿಂಕ್ ಕೆನಾಲ್ ಹೋರಾಟಕ್ಕೆ ಸಂಬಂಧಿಸಿದಂತೆ ಮೇ 31ರಂದು ಏನು ನಡೆದಿದೆ ಅನ್ನೋದನ್ನು ಜಿಲ್ಲಾ ಉಸ್ತುವಾರಿ ಸಚಿವ ಜಿ ಪರಮೇಶ್ವರ್ ವಿವರಿಸಿದರು.
ತುಮಕೂರಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತಾಡಿದ ಕಾಮಗಾರಿ ಶುರುಮಾಡಿದ ಗುತ್ತಿಗೆದಾರರು ಸರ್ಕಾರದ ಸೂಚನೆ ಮೇರೆಗೆ ಕಾಮಗಾರಿ ಮಾಡಿದ್ದರು. ಆದರೆ ಶಾಸಕರಾದ ಬಿ ಸುರೇಶ್ ಗೌಡ, ಜ್ಯೋತಿ ಗಣೇಶ್ ಮತ್ತು ಕೃಷ್ಣಪ್ಪ ಸೇರಿದಂತೆ ಹಲವಾರು ಜನ ಟಿ ರಾಂಪುರ ಎಂಬಲ್ಲಿ ಒಂದುಗೂಡಿ ಧರಣಿ ನಡೆಸಿ ಕೆನಾಲ್ ಕೆಲಸ ನಿಲ್ಲಿಸಿದ್ದಾರೆ.
ಜಿಲ್ಲಾಡಳಿತ, ಕಾನೂನಿಗೆ ವಿರುದ್ಧವಾಗಿ ಹೋಗೋದು ಬೇಡ ಪ್ರತಿಭಟನೆಕಾರರಿಗೆ ಮನವೊಲಿಸುವ ಪ್ರಯತ್ನ ಮಾಡಿದರೂ ಅವರು ಮಾತು ಕೇಳಲಿಲ್ಲ ಎಂದು ಪರಮೇಶ್ವರ್ ಹೇಳಿದರು.
ಹೇಮಾವತಿ ಲಿಂಕ್ ಕೆನಾಲ್ ಕಾಮಗಾರಿಯನ್ನು ಸರ್ಕಾರ ತಾತ್ಕಾಲಿಕಗಾಗಿ ಸ್ಥಗೊತಗೊಳಿಸಿದ್ದರೂ, ರೈತ ಸಮುದಾಯ ಮತ್ತು ಬಿಜೆಪಿ ಶಾಸಕರ ಅಸಮಾಧಾನ ಕಮ್ಮಿಯಾಗಿಲ್ಲ ಎಂದು ಪರಮೇಶ್ವರ ಹೇಳಿದರು.
ಹಲವಾರು ಸಭೆಗಳನ್ನು ನಡೆಸಿ ತಾಂತ್ರಿಕ ಸಮಿತಿಯೊಂದನ್ನು ರಚಿಸಿ ಸಮಿತಿ ನೀಡಿದ ಶಿಫಾರಸ್ಸಿನ ಮೇರೆಗೆ ಕಾಮಗಾರಿ ಆರಂಭಿಸಲಾಗಿತ್ತು. ಆದರೆ ರೈತರು ಮತ್ತು ಶಾಸಕರು ವಿರೋಧಿಸುತ್ತಿದ್ದಾರೆ ಎಂದು ಹೇಳಿದರು.