ಚಂದ್ರವಳ್ಳಿ ನ್ಯೂಸ್, ಬೆಂಗಳೂರು :
ಬಿಗ್‌ಬಾಸ್‌ಕನ್ನಡ ಸೀಸನ್-11 ಆರಂಭಕ್ಕೆ ಮುಹೂರ್ತ ಫಿಕ್ಸ್‌ಆಗಿದೆ. ಕಳೆದ 10 ಸೀಸನ್‌ಗಳನ್ನು ನಿರೂಪಣೆ ಮಾಡುತ್ತಾ ಬಂದಿರುವ ಕಿಚ್ಚ ಸುದೀಪ್‌ಅವರೇ ಈ ಬಾರಿಯೂ ಬಿಗ್‌ಬಾಸ್‌ಗೆ ʼಕಿಂಗ್ʼ ಆಗಲಿದ್ದಾರೆ. ಕಾರ್ಯಕ್ರಮದ ಪ್ರೋಮೊ ರಿಲೀಸ್‌ಆದ ಬೆನ್ನಲ್ಲೇ ಸಂಭಾವ್ಯ ಸ್ಪರ್ಧಿಗಳ ಪಟ್ಟಿಯೂ ಜೋರಾಗಿ ಸೋಶಿಯಲ್‌ಮೀಡಿಯಾದಲ್ಲಿ ಹರಿದಾಡುತ್ತಿದೆ.
ಪ್ರತಿಬಾರಿಯಂತೆ ಈ ಬಾರಿಯೂ ಒಂದಷ್ಟು ಸ್ಪರ್ಧಿಗಳ ಹೆಸರು ಕೇಳಿ ಬರುತ್ತಿದೆ. ನಾನಾ ಕ್ಷೇತ್ರದಲ್ಲಿ ಸಾಧನೆಗೈದ ವ್ಯಕ್ತಿಗಳು ಈ ಪಟ್ಟಿಯಲ್ಲಿದ್ದಾರೆ. ಯಾರೆಲ್ಲಾ ಆ ಸಂಭಾವ್ಯ ಸ್ಪರ್ಧಿಗಳು ಇಲ್ಲಿದೆ ವಿವರ..
ಹುಲಿ ಕಾರ್ತಿಕ್:
ʼಗಿಚ್ಚಿ ಗಿಲಿ ಗಿಲಿ-3ʼ ಮೂಲಕ ಪ್ರೇಕ್ಷಕರ ಮನೆಮನವನ್ನು ಗೆದ್ದು, ಕಾರ್ಯಕ್ರಮ ವಿಜೇತರಾಗಿರುವ ಹುಲಿ ಕಾರ್ತಿಕ್‌ಅವರು ಈ ಬಾರಿ ಬಿಗ್‌ಬಾಸ್‌ಮನೆಗೆ ಬರಲಿದ್ದಾರೆ ಎನ್ನಲಾಗುತ್ತಿದೆ. ಈಗಾಗಲೇ ಅವರಿಗೆ ಬಿಗ್‌ಬಾಸ್‌ಕಡೆಯಿಂದ ಆಫರ್‌ಬಂದಿದೆ ಎಂದು ಹೇಳಲಾಗುತ್ತಿದೆ.
ಗೌರವ್‌ಶೆಟ್ಟಿ:
ಅಮೃತಾಂಜನ್ʼ ಸೇರಿದಂತೆ ಹತ್ತಾರು ಶಾರ್ಟ್‌ಮೂವೀಸ್‌ಹಾಗೂ ಕಾಮಿಡಿ ವಿಡಿಯೋಗಳಲ್ಲಿ ಕಾಣಿಸಿಕೊಂಡು, ಯೂಟ್ಯೂಬ್‌ನಲ್ಲಿ ಮಿಂಚಿರುವ ಗೌರವ್‌ಶೆಟ್ಟಿ (ಅವರಿಗೆ ಬಿಗ್‌ಬಾಸ್‌ಮನೆಗೆ ಆಹ್ವಾನ ನೀಡಲಾಗಿದೆ ಎನ್ನಲಾಗುತ್ತಿದೆ.
ಮಾನಸ ಸಂತು:
ಬಿಗ್‌ಬಾಸ್‌ಸೀಸನ್-10ನಲ್ಲಿ ಸ್ಪರ್ಧಿಯಾಗಿದ್ದ ಕಾಮಿಡಿಯನ್‌ತುಕಾಲಿ ಸಂತು ಅವರ ಪತ್ನಿ ಮಾನಸ ಈಗಾಗಲೇ ಪ್ರೇಕ್ಷಕರಿಗೆ ಪರಿಚಯವಿರುವ ಹೆಸರು. ತನ್ನ ಹಾಸ್ಯ ಪ್ರಜ್ಞೆಯಿಂದ ಗಮನ ಸೆಳೆದಿರುವ ಮಾನಸ, ಕಿರುತೆರೆ ಶೋಗಳಲ್ಲೂ ಕಾಣಿಸಿಕೊಂಡಿದ್ದಾರೆ. ಕಳೆದ ಸೀಸನ್‌ನಲ್ಲಿ ಬಿಗ್‌ಬಾಸ್‌ಮನೆಗೆ ಅತಿಥಿಯಾಗಿ ಬಂದು ಗಮನ ಸೆಳೆದಿದ್ದರು. ಈ ಬಾರಿ ಅವರು ಬಿಗ್‌ಬಾಸ್‌ಮನೆಗೆ ಸ್ಪರ್ಧಿಯಾಗಿ ಹೋಗಲಿದ್ದಾರೆ ಎನ್ನಲಾಗುತ್ತಿದೆ.
ನಟಿ ಪ್ರೇಮಾ:
ಕನ್ನಡ ಚಿತ್ರರಂಗದಲ್ಲಿ ಒಂದು ಕಾಲದಲ್ಲಿ ನಮ್ಮೂರ ಮಂದಾರ ಹೂವೆ, ʼಚಂದ್ರಮುಖಿ ಪ್ರಾಣಸಖಿʼ , ʼಉಪೇಂದ್ರʼ ಅಂತಹ ಹಿಟ್‌ಸಿನಿಮಾಗಳಲ್ಲಿ ನಟಿಸಿ, ತೆಲುಗು, ಮಲಯಾಳಂನಲ್ಲೂ ಮಿಂಚಿದ್ದ ನಟಿ ಪ್ರೇಮಾ ಇತ್ತೀಚೆಗಿನ ವರ್ಷದಲ್ಲಿ ನಟನೆ ಬಿಟ್ಟು ಕಿರುತೆರೆ ಶೋಗಳಲ್ಲಿ ತೀರ್ಪುಗಾರರಾಗಿ ಕಾಣಿಸಿಕೊಂಡಿದ್ದಾರೆ. ಬಿಗ್‌ಬಾಸ್‌ಮನೆಗೆ ಪ್ರೇಮಾ ಅವರನ್ನು ಕರೆತರುವ ಪ್ರಯತ್ನ ನಡೆಯುತ್ತಿದೆ ಎನ್ನುವ ಮಾತು ಕೇಳಿ ಬರುತ್ತಿದೆ.
ಹರೀಶ್ ನಾಗರಾಜ್:
ಪ್ರತಿಬಾರಿ ಬಿಗ್‌ಬಾಸ್‌ಮನೆಗೆ ನಾನಾ ಕ್ಷೇತ್ರದಿಂದ ಸ್ಪರ್ಧಿಗಳು ಬರುತ್ತಾರೆ. ಕಳೆದ ವರ್ಷ ಗೌರೀಶ್‌ಅಕ್ಕಿ ಪತ್ರಿಕೋದ್ಯಮ ಕ್ಷೇತ್ರದಿಂದ ದೊಡ್ಮನೆಗೆ ಹೋಗಿದ್ದರು. ಈ ಬಾರಿ ಕನ್ನಡದ ಸುದ್ದಿ ವಾಹಿನಿಗಳಲ್ಲಿ ಕಳೆದ ಅನೇಕ ವರ್ಷದಿಂದ ನ್ಯೂಸ್ ಆ್ಯಂಕರ್‌ಆಗಿ ಗುರುತಿಸಿಕೊಂಡಿರುವ ಹರೀಶ್ ನಾಗರಾಜ್ ಅವರು ಬಿಗ್‌ಬಾಸ್‌ಮನೆಗೆ ಸ್ಪರ್ಧಿಯಾಗಿ ಎಂಟ್ರಿ ಆಗುತ್ತಾರೆ ಎಂದು ಹೇಳಲಾಗುತ್ತಿದೆ.
ಐಶ್ವರ್ಯಾ ರಂಗರಾಜನ್: ʼಮಗಳು ಜಾನಕಿʼ ಧಾರಾವಾಹಿಯಲ್ಲಿ ನಟಿಸಿ ಜನಪ್ರಿಯತೆಯನ್ನು ಪಡೆದುಕೊಂಡಿರುವ ಗಾಯಕಿ ಐಶ್ವರ್ಯಾ ರಂಗರಾಜನ್ ಬಿಗ್‌ಬಾಸ್‌ಮನೆಗೆ ಸ್ಪರ್ಧಿಯಾಗಿ ಹೋಗುತ್ತಾರೆ ಎನ್ನಲಾಗುತ್ತಿದೆ.
ಅದ್ವಿತಿ ಶೆಟ್ಟಿ ಹಾಗೂ ಅಶ್ವಿತಿ ಶೆಟ್ಟಿ :
ಕನ್ನಡ ಚಿತ್ರರಂಗದಲ್ಲಿ ನಟಿಯರಾಗಿ ಗುರುತಿಸಿಕೊಂಡಿರುವ ಕರಾವಳಿಯ ಅವಳಿ ಸಹೋದರಿಯರು ಅದ್ವಿತಿ ಶೆಟ್ಟಿ ಹಾಗೂ ಅಶ್ವಿತಿ ಶೆಟ್ಟಿ ಬಿಗ್‌ಬಾಸ್‌ಮನೆಗೆ ಸ್ಪರ್ಧಿಗಳಾಗಿ ಎಂಟ್ರಿ ಕೊಡಲಿದ್ದಾರೆ ಎಂದು ಹೇಳಲಾಗುತ್ತಿದೆ.
ಅಮೂಲ್ಯ ಭಾರದ್ವಾಜ್:
ಕಿರುತೆರೆ ನಟಿಯಾಗಿ ಗುರುತಿಸಿಕೊಂಡು, ‘ದಾಸ ಪುರಂದರ’ ಹಾಗೂ ‘ಬೃಂದಾವನ’ಧಾರಾವಾಹಿಗಳಲ್ಲಿ ನಟಿಸಿ ಮನೆ-ಮನದ ಪ್ರೀತಿ ಪ್ರೋತ್ಸಾಹವನ್ನು ಗಳಿಸಿರುವ ನಟಿ ಅಮೂಲ್ಯ ಭಾರದ್ವಾಜ್ ಈ ಬಾರಿ ದೊಡ್ಡನೆ ಆಟಕ್ಕೆ ಸ್ಪರ್ಧಿಯಾಗಿ ಎಂಟ್ರಿ ಕೊಡಲಿದ್ದಾರೆ ಎನ್ನಲಾಗುತ್ತಿದೆ.
ಭವ್ಯಾ ಗೌಡ:
ಟಿಕ್‌ಟಾಕ್ ನಲ್ಲಿ ಖ್ಯಾತಿಗಳಿಸಿ, ಕಿರುತೆರೆಯ ʼಗೀತಾʼ ಧಾರಾವಾಹಿಯಲ್ಲಿ ಅಭಿನಯಿಸಿ ಗಮನ ಸೆಳೆದಿರುವ ನಟಿ ಭವ್ಯಾ ಗೌಡ ಅವರ ಹೆಸರು ಕೂಡ ಬಿಗ್‌ಬಾಸ್‌ಸ್ಪರ್ಧಿಯ ಲಿಸ್ಟ್‌ನಲ್ಲಿ ಬರುತ್ತಿದೆ.
ದೀಪಕ್‌ಗೌಡ: ʼ
ನಮ್ಮನೆ ಯುವರಾಣಿʼ ಸೀರಿಯಲ್‌ನಲ್ಲಿ ʼಅನಿಕೇತ್ʼ ಆಗಿ ಖ್ಯಾತಿ ಪಡೆದ ದೀಪಕ್‌ಗೌಡ ಬಿಗ್‌ಬಾಸ್‌ಮನೆಗೆ ಎಂಟ್ರಿ ಆಗಲಿದ್ದಾರೆ ಎಂದು ಹೇಳಲಾಗುತ್ತಿದೆ.
ಅಕ್ಷಯ್‌ನಾಯಕ್: ʼ
ಒಲವಿನ ನಿಲ್ದಾಣʼ ಸೀರಿಯಲ್‌ನಲ್ಲಿ ಸಿದ್ಧಾಂತ್ ಪಾತ್ರದ ಮೂಲಕ ಗಮನ ಸೆಳೆದು, ʼಕಸ್ತೂರಿ ನಿವಾಸʼದಲ್ಲೂ ಮಿಂಚಿರುವ ಅಕ್ಷಯ್‌ನಾಯಕ್‌ಬಿಗ್‌ಬಾಸ್‌ಮನೆಗೆ ಬರ್ತಿದ್ದಾರೆ ಎಂಬ ಮಾತುಗಳು ಕೇಳಿ ಬಂದಿವೆ.
ಲೇಖಿ ಗೋಸ್ವಾಮಿ: ʼ
ಲೇಖಿ ರೈಡರ್ʼ ಎಂಬ ಯೂಟ್ಯೂಬ್‌ಚಾನೆಲ್‌ನಿಂದ ಖ್ಯಾತಿ ಗಳಿಸಿರುವ ಲೇಖಿ ಗೋಸ್ವಾಮಿ ಈ ಬಾರಿ ‘ಬಿಗ್ ಬಾಸ್ ʼ ಸ್ಪರ್ಧಿಯಾಗಿ ಎಂಟ್ರಿ ಆಗಲಿದ್ದಾರೆ ಎನ್ನಲಾಗುತ್ತಿದೆ.
ಇತರೆ ಹೆಸರುಗಳು.. ಇವರುಗಳಲ್ಲದೆ ರೀಲ್ಸ್ ರೇಷ್ಮಾ, ಚಂದ್ರಪ್ರಭ, ರಾಘವೇಂದ್ರ, ಜಾಹ್ನವಿ, ಶರ್ಮಿತಾ ಗೌಡ, ನಟ ತ್ರಿವಿಕ್ರಮ್, ನಟಿ ಸುಕೃತಾ ನಾಗ್, ನಟಿ ಗೌತಮಿ ಜಾಧವ್, ಶರತ್ ಕುಮಾರ್ ಹೆಸರುಗಳೂ ಇವೆ ಬಿಗ್‌ಬಾಸ್‌ಸ್ಪರ್ಧಿಗಳ ಪಟ್ಟಿಯಲ್ಲಿ ಕೇಳಿ ಬರುತ್ತಿದೆ. ಇದೇ ಸೆ.29ರಿಂದ ಬಿಗ್‌ಬಾಸ್‌ಗ್ರ್ಯಾಂಡ್‌ಆರಂಭಗೊಳ್ಳಲಿದೆ