ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಚುನಾವಣೆಗಳನ್ನು ಗೆಲ್ಲಲಾರದ ಅಸಮರ್ಥ, ನಕಲಿ ಗಾಂಧಿ ಕುಟುಂಬದ ಅನುವಂಶಿಕ ಪ್ರಧಾನಿ ಅಭ್ಯರ್ಥಿ, ಪಾರ್ಟ್‌ಟೈಮ್‌ಪೊಲಿಟಿಶಿಯನ್, ಫುಲ್‌ಟೈಮ್‌ಜೋಕರ್, ಭಾರತದ ಪಪ್ಪು, ಕಾಂಗ್ರೆಸ್ಸಿನ ಅತಿ ಹಿರಿಯ ಯುವನಾಯಕ ರಾಹುಲ್ ಗಾಂಧಿ ಅವರಿಗೆ ತನ್ನ ಚುನಾವಣಾ ಸೋಲುಗಳನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಕುಣಿಯಲಾರದವ ನೆಲ ಡೊಂಕು ಎಂದನಂತೆ ಎಂಬ ಗಾದೆ ಮಾತಿಗೆ ರಾಹುಲ್‌ಗಾಂಧಿ ಅನ್ವರ್ಥನಾಮ ಆಗಿದ್ದಾರೆ ಎಂದು ಬಿಜೆಪಿ ವಾಗ್ದಾಳಿ ಮಾಡಿದೆ.
ಕಾಂಗ್ರೆಸ್ಸಿನ ದೇಶ ವಿರೋಧಿ ಮಾನಸಿಕತೆ, ಹಿಂದೂ ವಿರೋಧಿ ಚಿಂತನೆ, ರಾಹುಲ್‌ಗಾಂಧಿಯ ಮತೀಯ ಓಲೈಕೆ ಮುಂತಾದ ಕಾರಣಗಳಿಂದ ಭಾರತೀಯ ಕಾಂಗ್ರೆಸ್ ನೆಲಕಚ್ಚುತ್ತಿದೆ. ಆದರೆ ಇದರ ಅಪವಾದವನ್ನು ಮಾತ್ರ ಚುನಾವಣಾ ಆಯೋಗದ ಮೇಲೆ ಹೊರಿಸಲಾಗುತ್ತಿದೆ. ಇವಿಎಂಗಳನ್ನು ಹ್ಯಾಕ್‌ಮಾಡಿ ತೋರಿಸಿ ಎಂದು ಸವಾಲೆಸೆದರೂ ಮೌನವಾಗಿದ್ದ ಕಾಂಗ್ರೆಸ್‌ಇವಿಎಂ ಮೇಲಿನ ಅನುಮಾನವನ್ನು ಇನ್ನೂ ಹೊರಹಾಕುತ್ತಿದೆ ಎಂದು ಬಿಜೆಪಿ ಅಸಮಾಧಾನ ವ್ಯಕ್ತಪಡಿಸಿದೆ.
ಭಾರತದಲ್ಲಿದ್ದಾಗ ಆರೋಪ ಮಾಡಿದ್ದು ಸಾಲದೆಂಬಂತೆ ವಿದೇಶದ ನೆಲದಲ್ಲೂ ಅದೇ ಆರೋಪ ಮಾಡುತ್ತಿದ್ದಾರೆ. ಇದಕ್ಕಿಂತ ದೊಡ್ಡ ದೇಶದ್ರೋಹದ ಕೆಲಸ ಮತ್ತೊಂದಿಲ್ಲ. ದೇಶದಲ್ಲಿ ನೆಪಮಾತ್ರಕ್ಕೆ ಸಂವಿಧಾನ ಹಿಡಿಯುವ ರಾಹುಲ್‌ಗಾಂಧಿ ಸಂವಿಧಾನ ವಿರೋಧಿ ಕೆಲಸಗಳಲ್ಲೇ ಆತ್ಮತೃಪ್ತಿ ಪಡೆದುಕೊಳ್ಳುವ ವ್ಯಾಧಿಯಿಂದ ಬಳಲುತ್ತಿದ್ದಾರೆಯೋ ಎನ್ನುವ ಅನುಮಾನ ದೇಶದ ಜನರನ್ನು ಕಾಡುತ್ತಿದೆ ಎಂದು ಬಿಜೆಪಿ ತೀವ್ರ ವಾಗ್ದಾಳಿ ಮಾಡಿದೆ.