ಜೀವ ಪಣಕ್ಕಿಟ್ಟು ಹೋರಾಡಿದ ವೀರವನಿತೆ ಒನಕೆ ಓಬವ್ವ

News Desk

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ತಾಲ್ಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯ ವತಿಯಿಂದ ವೀರವನಿತೆ ಒನಕೆ ಓಬವ್ವ ಜಯಂತಿ ಆಚರಣೆ ಮಾಡಲಾಯಿತು.

ತಾಲ್ಲೂಕು ಕಛೇರಿ ಸಭಾಂಗಣದಲ್ಲಿ ವೀರವನಿತೆ ವನಿಕೆ ಓಬವ್ವ ಭಾವಚಿತ್ರಕ್ಕೆ ಪುಷ್ಷ ನಮನ ಅರ್ಪಿಸಿದ ತಾಲ್ಲೂಕು ದಂಡಾಧಿಕಾರಿ   ಶ್ರೀ.ವಿದ್ಯಾ ವಿಭಾ  ರಾಥೋಡ್ ಮಾತನಾಡಿ ಚಿತ್ರದುರ್ಗದ ಕೋಟೆಯಲ್ಲಿ ಸಾಮಾನ್ಯ ಮಹಿಳೆಯಾಗಿದ್ದ ಓಬವ್ವ, ತನ್ನ ನಾಡಿನ ರಕ್ಷಣೆಗೆ ಏಕಾಂಗಿಯಾಗಿ ಹೋರಾಡಿದ ಇತಿಹಾಸ ಸ್ಮರಣೀಯವಾಗಿದೆ. ಒನಕೆ ಓಬವ್ವ ನಾಡಿನ ಮಹಿಳೆಯ ಧೈರ್ಯ, ಸಂಕಲ್ಪ ಶಕ್ತಿ ಹಾಗೂ ದೇಶಪ್ರೇಮದ ಜೀವಂತ ಪ್ರತೀಕಎಂದು  ಸ್ಮರಿಸಿದರು.

- Advertisement - 

ನಂತರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ  ನಿಕಟ ಪೂರ್ವ ಅಧ್ಯಕ್ಷೆ ಪ್ರಮೀಳಾ ಮಹಾದೇವ್ ಮಾತನಾಡಿಒನಕೆ ಓಬವ್ವ 18 ನೆಯ ಶತಮಾನದ ಚಿತ್ರದುರ್ಗದ ಕೋಟೆಯ ಪಾಳೆಗಾರನಾಗಿದ್ದ ಮದಕರಿ ನಾಯಕನ ಕೋಟೆಯ ಕಾವಲುಗಾರ ಕಹಳೆ ಮದ್ದಹನುಮಪ್ಪನ ಹೆಂಡತಿ.ಓನಿಕೆ ಓಬವ್ವ ನಾಡಿನ ರಕ್ಷಣೆಗಾಗಿ

ತನ್ನ ಜೀವ ಪಣಕ್ಕಿಟ್ಟು ಹೋರಾಡಿ ಇವರನ್ನು ಕನ್ನಡ ನಾಡಿನ ವೀರ ವನಿತೆಯರಾದ ಕಿತ್ತೂರು ಚೆನ್ನಮ್ಮ,ರಾಣಿ ಅಬ್ಬಕ್ಕರ ಸಾಲಿನಲ್ಲಿ ಪರಿಗಣಿಸಲಾಗುತ್ತದೆ.

- Advertisement - 

ಒಬ್ಬ ಸಾಮಾನ್ಯ ಮಹಿಳೆ ತನ್ನ ನಾಡಿಗಾಗಿ ಪ್ರಾಣ ತ್ಯಾಗ ಮಾಡಿದ ಇತಿಹಾಸ ಓಬವ್ವ ಅವರದು. ಆದರೆ ಅವರ ಸಾವಿನ ಕುರಿತು ಇತಿಹಾಸದಲ್ಲಿ ಸ್ಪಷ್ಟತೆ ಇಲ್ಲ. ಓಬವ್ವ ಯುದ್ಧದಲ್ಲಿ ಮರಣ ಹೊಂದಿಲ್ಲ ಎನ್ನುವ ಉಲ್ಲೇಖಗಳೂ ಕಂಡು ಬರುತ್ತವೆ. ಇತಿಹಾಸದ ನೈಜತೆಯನ್ನು ಹೊಸ ಪೀಳಿಗೆಗೆ ಪರಿಚಯಿಸುವುದು  ಅಗತ್ಯಎಂದು ಹೇಳಿದರು.

ಈ ಸಂದಭರ್ದಲ್ಲಿ  ಛಲವಾದಿ ಮಹಾಸಭಾದ ತಾಲ್ಲೂಕು ಅಧ್ಯಕ್ಷ ಗುರುರಾಜಪ್ಪ, ನಗರಸಭೆ ನಾಮನಿರ್ದೇಶಿತ ಸದಸ್ಯ ಕಾಂತರಾಜು,ಕನ್ನಡ ಜಾಗೃತಿ ವೇದಿಕೆ ಜಿಲ್ಲಾಧ್ಯಕ್ಷ ನಾಗರಾಜ್ ಕೋಡಿಗೆಹಳ್ಳಿ ಗ್ರಾ.ಪಂ. ಸದಸ್ಯೆ ನಾಗರತ್ನಮ್ಮ, ತಾಲ್ಲೂಕು ದೈಹಿಕ ಶಿಕ್ಷಣ ಅಧಿಕಾರಿ ನಾಗರಾಜ್ ಮತ್ತಿತರರು ಉಪಸ್ಥಿತರಿದ್ದರು.

 

Share This Article
error: Content is protected !!
";