ಮಹಿಳೆಯೊಬ್ಬರ ಬಗ್ಗೆ ಎಲ್ಲಾ ಠಾಣೆಗೂ ಮಾಹಿತಿ ನೀಡಿದ ಹೈಕೋರ್ಟ್

khushihost

ಚಂದ್ರವಳ್ಳಿ ನ್ಯೂಸ್, ಬೆಂಗಳೂರು : ಕೊಡಗಿನ ಮಹಿಳೆಯೊಬ್ಬಳು ಒಂದು ದಶಕದಲ್ಲಿ ಹತ್ತು ಮಂದಿ ವಿರುದ್ದ ಮೋಸದಿಂದ ಮದುವೆಯಾದ ಹಾಗೂ ವರದಕ್ಷಿಣಿ ಕಿರುಕುಳ ಸೇರಿದಂತೆ ಹಲವು ಆರೋಪ ಮಾಡಿ ಪೊಲೀಸರಿಗೆ ದೂರು ಕೊಟ್ಟ ಬಗ್ಗೆ ಸ್ವತಃ ಹೈಕೋರ್ಟ್‌ ಅಚ್ಚರಿ ಪಟ್ಟಿದೆ.

ಅಲ್ಲದೆ ಪುರುಷರ ವಿರುದ್ಧ ಅನಗತ್ಯ ಕ್ರಿಮಿನಲ್‌ ಪ್ರಕರಣಗಳನ್ನು ದಾಖಲಿಸಿರುವ ಕೊಡಗು ಜಿಲ್ಲೆ ಕುಶಾಲಗರ ತಾಲ್ಲೂಕಿನ ಮುಳ್ಳುಸೋಗೆ ನಿವಾಸಿಯಾದ 33 ವರ್ಷದ ದೀಪಿಕಾ ಬಗ್ಗೆ ಸಾರ್ವಜನಿಕರು ಎಚ್ಚರಿಕೆಯಿಂದ ಇರುವಂತೆ ಎಲ್ಲ ಪೊಲೀಸ್‌ ಠಾಣೆಗಳಿಗೆ ನಿರ್ದೇಶನ ನೀಡಿ ರಾಜ್ಯ ಪೊಲೀಸ್‌ ಮಹಾ ನಿರ್ದೇಶಕರಿಗೆ ಆದೇಶಿಸಿದೆ.

ಆರೋಪಿ ದೀಪಿಕಾಳ ಹಲವು ಠಾಣೆಗಳಲ್ಲಿ ಪುರುಷರ ವಿರುದ್ಧ ಲೈಂಗಿಕ ದೌರ್ಜನ್ಯ, ಅತ್ಯಾಚಾರ, ಅಪರಾಧಿಕ ಪಿತೂರಿ ಮತ್ತು ಭಾರತೀಯ ದಂಡ ಸಂಹಿತೆ–1860ರ ಕಲಂ 498ಎ ಅಡಿ 10 ಪ್ರಕರಣಗಳನ್ನು ದಾಖಲಿಸಿದ್ದಾರೆ ಎಂದು ಹೈಕೋರ್ಟ್‌ ಗಮನಕ್ಕೆ ಬಂದಿದೆ. ಅಲ್ಲದೆ ಈ ಸಂಬಂಧ ಎಲ್ಲಾ ಪ್ರಕರಣಗಳ ವಿವರನ್ನ ಹೈಕೋರ್ಟ್‌ ಪಡೆದುಕೊಂಡಿತ್ತು. ಇದನ್ನ ಪರಿಶೀಲಿಸಿದ ಬಳಿಕ ಈ ಆದೇಶ ನೀಡಿದೆ.

- Advertisement -  - Advertisement - 
Share This Article
error: Content is protected !!
";