ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ವೈದ್ಯರೊಬ್ಬರಿಗೆ ಕಿಡ್ನಿ ದಾನ ಮಾಡುವಂತೆ ಹೈಕೋರ್ಟ್ ಅವಕಾಶ ನೀಡಿ ಆದೇಶಿಸಿದೆ.
ಆಸ್ಪತ್ರೆಯೊಂದು ವೈದ್ಯರೊಬ್ಬರಿಗೆ ಕಿಡ್ನಿ ದಾನ ಮಾಡಲು ಅವಕಾಶ ನೀಡಿರಲಿಲ್ಲ ಇದನ್ನ ಪ್ರಶ್ನಿಸಿ ವೈದ್ಯರು ಹೈಕೋರ್ಟ್ ಮೆಟ್ಟಿಲೇರಿದ್ದರು. ಈಗ ಹೈಕೋರ್ಟ್ ಅನುಮತಿ ನೀಡುವ ಮೂಲಕ ಪ್ರಕರಣ ಸುಖಾಂತ್ಯ ಕಂಡಿದೆ.
ಇದೊಂದು ಅಪರೂಪ ಪ್ರಕರಣವಾಗಿದ್ದು, ಕೋರ್ಟ್ ಅವರಿಗೆ ಕಿಡ್ನಿ ದಾನ ಮಾಡಲು ಅವಕಾಶ ನೀಡಿದೆ. ಈ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಕರ್ನಾಟಕ ಹೈಕೋರ್ಟ್ ವೈದ್ಯೆಯ ಮನವಿ ಪುರಸ್ಕರಿ, ಕಿಡ್ನಿ ದಾನಕ್ಕೆ ಅರ್ಹತೆ ಪಡೆದಿದ್ದಾರೆ ಅವಕಾಶ ನೀಡಿ ಎಂದು ಹೇಳಿದೆ.
ನ್ಯಾ.ಸೂರಜ್ ಗೋವಿಂದರಾಜ್ ಅವರಿದ್ದ ಹೈಕೋರ್ಟ್ ಪೀಠ ಈ ಸೂಚನೆ ನೀಡಿ ಆದೇಶಿಸಿದೆ. ಆಸ್ಪತ್ರೆ ಕೆಲವು ಕಾರಣಗಳನ್ನು ನೀಡಿ, ಅವರಿಗೆ ಕಿಡ್ನಿ ದಾನ ಮಾಡಲು ಅವಕಾಶ ನೀಡಿರಲಿಲ್ಲ, ಇದೀಗ ವೈದ್ಯೆಯ ಮನವಿಗೆ ಅವಕಾಶ ನೀಡಿದೆ.
ವೈದ್ಯೆಯು ಯಾವುದೇ ಪರಿಹಾರ ಬಯಸದೇ ಅಂದರೆ ತಾವು ಮಾಡಿದ ಕಿಡ್ನಿ ದಾನಕ್ಕೆ ಯಾವುದೇ ಪ್ರತಿಫಲ ಇಲ್ಲದೆ, ಉಚಿತವಾಗಿ ದಾನ ಮಾಡಲು ಮುಂದಾಗಿದ್ದರು. ತನ್ನ ಕಿಡ್ನಿಯನ್ನು ಯಾವುದೇ ರೀತಿಯಲ್ಲಿ ಹಣ ಪಡೆಯದೇ ಉಚಿತವಾಗಿ ದಾನ ಮಾಡುವೆ ಎಂಬ ಮನವಿಯನ್ನು ಅಂಗಾಗ ಕಸಿ ಸಮಿತಿ ಒಪ್ಪಿರಲಿಲ್ಲ. ಹೀಗಾಗಿ ವೈದ್ಯೆ ಹೈಕೋರ್ಟ್ ಮೊರೆ ಹೋಗಿದ್ದರು. 58 ವರ್ಷದ ಈ ವೈದ್ಯೆ ತನ್ನ ಕಿಡ್ನಿಗೆ ಸರಿಹೊಂದುವ ಮಣಿಪಾಲ್ ಆಸ್ಪತ್ರೆಯ ರೋಗಿಗೆ ದಾನ ಮಾಡುತ್ತೇನೆ ಎಂದು ಹೇಳಿದ್ದರು. ಆದರೆ ಇದಕ್ಕೆ ಅಂಗಾಗ ಕಸಿ ಸಮಿತಿ ಒಪ್ಪಿಗೆ ನೀಡರಲಿಲ್ಲ.
ಹೈಕೋರ್ಟ್ ವೈದ್ಯೆ ಮನವಿ ಮಾಡಿದ ಅರ್ಜಿಯನ್ನು ವಿಚಾರಣೆ ನಡೆಸಿದೆ. ಈ ಬಗ್ಗೆ ಹೈಕೋರ್ಟ್ ಅಂಗಾಗ ಕಸಿ ಸಮಿತಿಗೆ ಒಂದು ಮಹತ್ವದ ಸೂಚನೆ ನೀಡಿದೆ. ಕಿಡ್ನಿ ದಾನ ಪಡೆಯಲು ಅರ್ಹರಿದ್ದಾರೆಯೇ ಎಂದು ಮೊದಲು ಪರಿಶೀಲನೆ ನಡೆಸಿ ಎಂದು ಹೇಳಿದೆ. ಇದಕ್ಕೆ ಸಮಿತಿ ಅವರು ವೈದ್ಯೆ ಅರ್ಹತೆಯನ್ನು ಪಡೆದಿದ್ದಾರೆ.
ಇದೀಗ ಕಿಡ್ನಿ ಕಸಿ ಮಾಡಲು ಐವರು ರೋಗಿಗಳಿದ್ದಾರೆಂದು ಹೇಳಿದೆ. ಸೂಕ್ತ ತಪಾಸಣೆ ನಡೆಸಿ ಕಿಡ್ನಿ ದಾನ ಪಡೆಯುವ ವ್ಯಕ್ತಿಯನ್ನು ಆಯ್ಕೆ ಮಾಡಿ. ಬಳಿಕ ವೈದ್ಯೆಯ ಅರ್ಜಿಯನ್ನು ಪರಿಗಣಿಸುವಂತೆ ಅಂಗಾಂಗ ಕಸಿ ಸಮಿತಿಗೆ ಹೈಕೋರ್ಟ್ ಸೂಚನೆ ನೀಡಿ ಆದೇಶಿಸಿದೆ.

