ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
“ಡಿಜಿಟಲ್ ಮೀಟರ್ ಹೆಸರಲ್ಲಿ ಬಡವರನ್ನು ಹಿಂಡುತ್ತಿದ್ದ ಕೈ ಸರ್ಕಾರಕ್ಕೆ ಹೈಕೋರ್ಟ್ ಛೀಮಾರಿ” ಹಾಕಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ತಿಳಿಸಿದ್ದಾರೆ.
ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹ ಜ್ಯೋತಿಯ ಮೂಲಕ 200 ಯೂನಿಟ್‌ವರೆಗೆ ಎಲ್ಲರಿಗೂ ಉಚಿತ ವಿದ್ಯುತ್‌ನೀಡುತ್ತೇವೆ ಎಂದು ಅವಾಸ್ತವಿಕ ಗ್ಯಾರಂಟಿ ನೀಡಿ ಅದಕ್ಕೂ ಹಲವು ಷರತ್ತುಗಳನ್ನು ವಿಧಿಸಲಾಗಿತ್ತು.
ಆದರೆ ಗ್ಯಾರಂಟಿ ಅನುಷ್ಠಾನದ ಬಳಿಕ ಇಂಧನ ಇಲಾಖೆ ದಿವಾಳಿಯಂಚಿಗೆ ಸಾಗಿದ ಬೆನ್ನಲ್ಲೇ ಗ್ರಾಹಕರ ಮೇಲೆ ಹೊರೆ ಹಾಕಿ ದಿನದಿಂದ ದಿನಕ್ಕೆ ವಿದ್ಯುತ್‌ದರ ಏರಿಸುತ್ತಲೇ ಇದ್ದ ಈ ಸರ್ಕಾರ ಇದೀಗ ಸ್ಮಾರ್ಟ್ ಮೀಟರ್ ಅಳವಡಿಕೆ ಕಡ್ಡಾಯಗೊಳಿಸಿ ಬರೋಬ್ಬರಿ 10,000 ರೂ. ನಿಗಧಿಪಡಿಸಿದ ನಿರ್ಧಾರಕ್ಕೆ ನ್ಯಾಯಾಲಯ ಛೀಮಾರಿ ಹಾಕಿ ತಡೆಯಾಜ್ಞೆ ನೀಡಿದೆ ಎಂದು ವಿಜಯೇಂದ್ರ ತಿಳಿಸಿದ್ದಾರೆ.
2000 ರೂ. ಇದ್ದ ಸ್ಮಾರ್ಟ್ ಮೀಟರ್ ಬೆಲೆಯನ್ನು 10000ಕ್ಕೆ ಏರಿಸಿ ಜನಸಾಮಾನ್ಯರನ್ನು ಸುಲಿಗೆ ಮಾಡುತ್ತಿರುವ ಕರ್ನಾಟಕ ಕಾಂಗ್ರೆಸ್ ಸರ್ಕಾರಕ್ಕೆ ಉಚಿತ ವಿದ್ಯುತ್ ಕೊಡಿ ಎಂದು ಯಾರಾದರೂ ಕೇಳಿದ್ರಾ? ಬಡವರ ಸ್ಥಿತಿ ಏನಾಗಬೇಕು? ಎಂದು ಉಚ್ಛ ನ್ಯಾಯಾಲಯ ಮಂಗಳಾರತಿ ಎತ್ತಿದೆ. ಇನ್ನಾದರೂ ಈ ಸರ್ಕಾರ ಜನಪೀಡಕ ನಿರ್ಧಾರಗಳನ್ನು ಕೈಬಿಟ್ಟು ಜನಪರ ಕಾರ್ಯಕ್ರಮಗಳಿಗೆ ಮುಂದಾಗಲಿ ಎಂದು ವಿಜಯೇಂದ್ರ ಒತ್ತಾಯಿಸಿದ್ದಾರೆ.