ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಜ್ಯದ ಜನಸಮಾನ್ಯರಿಗೆ ದರ ಏರಿಕೆಯ ಬರೆ ಎಳೆಯುತ್ತಿರುವ ಕರ್ನಾಟಕ ಕಾಂಗ್ರೆಸ್ ಸರ್ಕಾರಕ್ಕೆ ಹೈಕೋರ್ಟ್ ಮತ್ತೊಮ್ಮೆ ಛೀಮಾರಿ ಹಾಕಿದೆ ಎಂದು ಜೆಡಿಎಸ್ ದೂರಿದೆ.
ಅನ್ಯ ರಾಜ್ಯಗಳಲ್ಲಿ ದರ ಕಡಿಮೆ ಇದ್ದರೂ, ಕರ್ನಾಟಕದಲ್ಲಿ “ಸ್ಮಾರ್ಟ್ ಮೀಟರ್” ಹೆಸರಲ್ಲಿ ದುಬಾರಿ ದರ ವಿಧಿಸಿ ಸುಲಿಗೆ ಮಾಡಲಾಗುತ್ತಿದೆ.
“ಜನಸಾಮಾನ್ಯರನ್ನು ನರಳುವಂತೆ ಮಾಡಬೇಡಿ” ಎಂದು ಹೈಕೋರ್ಟ್ ತರಾಟೆಗೆ ತೆಗೆದುಕೊಂಡು, ಸಿದ್ದರಾಮಯ್ಯ ಸರ್ಕಾರಕ್ಕೆ ಚಾಟಿ ಬೀಸಿದೆ ಜೆಡಿಎಸ್ ಟೀಕಿಸಿದೆ.