ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಪಕ್ಕದ ರಾಜ್ಯಗಳಲ್ಲಿ ಕೇವಲ 900 ಕ್ಕೆ ದೊರೆಯುವ ಸ್ಮಾರ್ಟ್ ಎಲೆಕ್ಟ್ರಿಕ್ ಮೀಟರ್‌ಗಳಿಗೆ ಕರ್ನಾಟಕದಲ್ಲೇಕೆ 10 ಸಾವಿರ ಎಂದು ಈಗ ರಾಜ್ಯ ಹೈಕೋರ್ಟ್ ಸಹ ಭ್ರಷ್ಟ ಕರ್ನಾಟಕ ಕಾಂಗ್ರೆಸ್ ಸರ್ಕಾರಕ್ಕೆ ಛೀಮಾರಿ ಹಾಕಿದೆ!! ಎಂದು ಬಿಜೆಪಿ ಟೀಕಿಸಿದೆ.
ಬಡವರ ರಕ್ತ ಹೀರುವುದನ್ನೇ ಫುಲ್ ಟೈಂ ಉದ್ಯೋಗವನ್ನಾಗಿಸಿಕೊಂಡಿರುವ ಲಾಟರಿ ಸಿಎಂ ಸಿದ್ದರಾಮಯ್ಯ ಅವರೆ, ಈಗಲಾದರೂ ಕರ್ನಾಟಕದಲ್ಲಿ ಸ್ಮಾರ್ಟ್ ಮೀಟರ್‌ಗಳಿಗೆ ಏಕೆ 10 ಸಾವಿರ ಕೊಡಬೇಕು ಎಂಬುದನ್ನು ತಿಳಿಸಿ ಎಂದು ಬಿಜೆಪಿ ತಾಕೀತು ಮಾಡಿದೆ.