ಕಮಲ್‌ ಹಾಸನ್‌ಗೆ ಹೈಕೋರ್ಟ್‌ ತೀವ್ರ ತರಾಟೆ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕನ್ನಡ ಭಾಷೆಯ ವಿಚಾರದಲ್ಲಿ ಕನ್ನಡಿಗರ ಭಾವನೆಗೆ ಧಕ್ಕೆ ತಂದಿರುವ ನಟ ಕಮಲ್‌ ಹಾಸನ್‌ಗೆ ಹೈಕೋರ್ಟ್‌ ತೀವ್ರ ತರಾಟೆಗೆ ತೆಗೆದುಕೊಂಡಿದೆ ಎಂದು ಜೆಡಿಎಸ್ ತಿಳಿಸಿದೆ. ಮೊದಲು ಕನ್ನಡಿಗರ ಕ್ಷಮೆಯಾಚಿಸಿ ಎಂದು ತಾಕೀತು ಮಾಡಿದ ನ್ಯಾಯಾಧೀಶರು.

- Advertisement - 

ಥಗ್ ಲೈಫ್ ಸಿನಿಮಾ ಬಿಡುಗಡೆಗೆ ಕರ್ನಾಟಕದಲ್ಲಿ ತಡೆಯೊಡ್ಡಿರುವ ಹಿನ್ನೆಲೆಯಲ್ಲಿ ಹೈಕೋರ್ಟ್‌ʼನಲ್ಲಿ ಅರ್ಜಿ ವಿಚಾರಣೆ ವೇಳೆ ನ್ಯಾಯಾಧೀಶರುಕಮಲ್ ಹಾಸನ್ ಕ್ಷಮೆ ಕೇಳಿದರೆ ಮಾತ್ರ ಅರ್ಜಿ ಪರಿಗಣಿಸುತ್ತೇವೆ. ಯಾವುದೋ ಭಾಷೆಯಿಂದ ಇನ್ನೊಂದು ಭಾಷೆ ಹುಟ್ಟಿದೆ ಅಂದ್ರೆ ಹೇಗೆ ? ಅವರೇನು ಇತಿಹಾಸಕಾರರಾ ?

- Advertisement - 

ಈ ಹಿಂದೆ ತಮಿಳುನಾಡಿನ ರಾಜಗೋಪಾಲಚಾರಿ ಕೂಡ ಕ್ಷಮೆಯನ್ನು ಕೇಳಿದ್ದರು. ಇವತ್ತಿನ ಪರಿಸ್ಥಿತಿ ನಿರ್ಮಾಣಕ್ಕೆ ನೀವೇ ಕಾರಣ, ಈ ರೀತಿ ಹೇಳಿಕೆ ನೀಡಬಾರದು. ಕಮಲ್ ಹಾಸನ್ ಮೊದಲು ಕ್ಷಮೆ ಕೇಳಲಿ ಎಂದು ಕರ್ನಾಟಕ ಹೈಕೋರ್ಟ್‌ ತಾಕೀತು ಮಾಡಿದೆ ಎಂದು ಜೆಡಿಎಸ್ ತಿಳಿಸಿದೆ.

 

- Advertisement - 

 

Share This Article
error: Content is protected !!
";