ಚಂದ್ರವಳ್ಳಿ ನ್ಯೂಸ್, ಚಳ್ಳಕೆರೆ:
ನಗರದ ಚಿನ್ಮಯ ಪಬ್ಲಿಕ್ ಪ್ರೌಢ ಶಾಲೆಯ ವಿದ್ಯಾರ್ಥಿ ಡಿ.ಕವನ ಎಸ್‌ಎಸ್‌ಎಲ್‌ಸಿ ಪರೀಕ್ಷೆ-೦೧ರಲ್ಲಿ ಕನ್ನಡ ವಿಭಾಗದಲ್ಲಿ ೯೮ ಅಂಕಗಳನ್ನು ಗಳಿಸಿದ್ದು ಮರುಮೌಲ್ಯಮಾಪನ ಮಾಡಿಸಿದಾಗ ಇವರಿಗೆ ಎರಡು ಅಂಕಗಳು ದೊರೆತಿದ್ದು ಕನ್ನಡಲ್ಲಿ ೧೦೦ ಅಂಕ ಪಡೆದಿರುತ್ತಾಳೆ.
ಈ ವಿದ್ಯಾರ್ಥಿನಿ ಮೊದಲು ೬೨೫ಕ್ಕೆ ೬೨೨ ಗಣಿಸಿದ್ದು ಈಗ ೬೨೫ಕ್ಕೆ ೬೨೪ ಅಂಕವನ್ನು ಗಳಿಸುವ ಮೂಲಕ ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದು ಶಾಲೆಗೆ ಕೀರ್ತಿ ತಂದಿದ್ಧಾಳೆಂದು ಮುಖ್ಯೋಪಾಧ್ಯಾಯಿನಿ ತ್ರಿವೇಣಿ ಹರ್ಷ ವ್ಯಕ್ತಪಡಿಸಿದ್ದಾರೆ.
ಎರಡು ಹೆಚ್ಚುವರಿ ಅಂಕ ಪಡೆದು ಫಲಿತಾಂಶದಲ್ಲಿ ಪ್ರಗತಿ ಸಾಧಿಸಿದ ವಿದ್ಯಾರ್ಥಿನಿ ಡಿ.ಕವನಗೆ ಶಾಲೆಯ ಆಡಳಿತ ಮಂಡಳಿ ಅಧ್ಯಕ್ಷ ಬಿ.ಸಿ.ಸಂಜೀವಮೂರ್ತಿ, ಜಂಟಿ ಕಾರ್ಯದರ್ಶಿ ಜಿ.ಎಸ್.ರಶ್ಮಿ ಸತೀಶ್ ಕುಮಾರ್, ಕಾರ್ಯದರ್ಶಿ ಜಿ.ಆರ್.ಶಕುಂತಲ, ಬೋಧಕ ವರ್ಗ ಅಭಿನಂದಿಸಿದೆ.