ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಗ್ರಾಮೀಣ ಬಾಗದಲ್ಲಿ ರೈತರ ಬೆಳೆಗಳಿಗೆ ನೀರಿಗಾಗಿ ಕೊಳವೆ ಬಾವಿಗಳಿಗೆ ಪಂಪ್ ಸೆಟ್ ಗಳಿಗೆ ವಿದ್ಯುತ್ ಕಡಿತ ಮಾಡಿರುವುದನ್ನು ಖಂಡಿಸಿ ರಸ್ತೆ ತಡೆ ನಡೆಸಿ ಬೆಸ್ಕಾಂ ಅಧಿಕಾರಿಗಳ ವಿರುದ್ದ ಆಕ್ರೋಶ ವ್ಯಕ್ತ ಪಡಿಸಿದರು.
ರಾಜ್ಯ ರೈತ ಸಂಘದಿಂದ ಬೆಂಗಳೂರು ಹಿಂದೂಪುರ ರಾಜ್ಯ ಹೆದ್ದಾರಿ ಪ್ರವಾಸಿ ಮಂದಿರ ಮುಂದಿನ ಡಾ. ಬಿ ಅರ್ ಅಂಬೇಡ್ಕರ್ ರಸ್ತೆಯಲ್ಲಿ ತಡೆದು ಪ್ರತಿಭಟನೆ ನೆಡಸಲಾಯಿತು.
ಗ್ರಾಮೀಣ ಬಾಗದಲ್ಲಿ ಸುಮಾರು ಒಂದೂವರೆ ತಿಂಗಳಿನಿಂದ ಕೃಷಿ ಪಂಪ್ ಸೆಟ್ ಗಳಿಗೆ ವಿದ್ಯುತ್ ಕಡಿತದಿಂದಾಗಿ ಸಾಲ ಮಾಡಿ ಬೆಳೆದಿರುವ ಬೆಳೆಗಳು ನೀರಿಲ್ಲದೆ ಬಾಡಿ ಹೋಗುತ್ತಿವೆ ಎಂದು ಆಕ್ರೋಶ ವ್ಯಕ್ತ ಪಡಿಸಿದರು.
ವಿದ್ಯುತ್ ಪ್ರಸರಣಾ ನಿಗಮಕ್ಕೆ ಹಲವು ಬಾರಿ ಮನವಿ ಸಲ್ಲಿಸಿದರು ಕ್ರಮ ಕೈಗೊಂಡಿಲ್ಲ ಅದರೆ ಅಧಿಕಾರಿಗಳ ರೈತರನ್ನು ನಿರ್ಲಕ್ಷ್ಯ ದಿಂದ ಕಾಣುತ್ತಿದ್ದಾರೆ.ಎಂದು ಆರೋಪಿಸಿದರು.
ರೈತರು ಹೆದ್ದಾರಿ ತಡೆ ಮಾಡಿದ್ದರಿಂದ ಟ್ರಾಪಿಕ್ ಜಾಮ್ ಆಗಿ ವಾಹನ ಸವಾರರು ಪರುದಾಡುವಂತಾಗಿತ್ತು. ಬೆಸ್ಕಾಂ ಅಧಿಕಾರಿಗಳು ಸ್ಥಳಕ್ಕೆ ಬಂದು ಸಮಸ್ಯೆ ಬಗೆಹಿಸುವರೆವಿಗೂ ಸ್ಥಳ ಬಿಟ್ಟು ಕದಲುವುದಿಲ್ಲ ಎಂದು ರೈತರು ಪಟ್ಟು ಹಿಡಿದ ಕಾರಣ ಬೆಸ್ಕಾಂ ಅಧಿಕಾರಿ ಬಂದು ರೈತರ ಸಮ್ಮುಖದಲ್ಲಿ ಪೊಲೀಸರು ಸೇರಿ ಸಮಸ್ಯೆಗೆ ಒಂದು ದಿನ ಅವಕಾಶ ಕೊಡಿ ವಿದ್ಯುತ್ ಸರಬರಾಜು ಮಾಡಲಾಗುವುದು ಎಂದ ಕಾರಣ ಧರಣಿ ಕೈಬಿಡಲಾಯಿತು.
ಸುಮಾರು ನೀರಾವರಿ ಬೆಳೆಗಳು ನೀರಿಲ್ಲದೆ ಒಣಗಿ ರೈತರು ನಷ್ಟದಿಂದ ಕಂಗಾಲಾಗಿದ್ದಾರೆ. ದಿನ ನಿತ್ಯ 6 ರಿಂದ 7 ಘಂಟೆಗಳ ಕಾಲ ವಿದ್ಯುತ್ ನೀಡಲಾಗುತ್ತಿತ್ತು ಅದರೆ ಒಂದೂವರೆ ತಿಂಗಳಿನಿಂದ ದಿನಕ್ಕೆ ಒಂದು ಗಂಟೆಯೂ ಸಹ ಸರಿಯಾದ ಸಮಯಕ್ಕೆ ವಿದ್ಯುತ್ ಕೊಡುತ್ತಿಲ್ಲ. ಬೆಸ್ಕಾಂ ಅಧಿಕಾರಿಗಳನ್ನು ಕೇಳಿದರು ಟ್ರಾನ್ಸ್ ಫಾರ್ಮ್ ಸುಟ್ಟು ಹೋಗಿದೆ ಗುಜರಾತ್ ನಿಂದ ಬರುತ್ತಿದೆ. ಎರಡು ಮೂರು ದಿನಗಳಲ್ಲಿ ಪೂರ್ಣಾವಧಿ ವಿದ್ಯುತ್ ನೀಡಲಾಗುವುದು ಎಂದು ನಮ್ಮನ್ನು ಹಾಗು ರೈತರನ್ನು ದಿಕ್ಕೂ ತಪ್ಪಿಸಿ ತಿರುವುದುದರಿಂದ ಈ ದಿನ ಬೀದಿಗೆ ಇಳಿಯ ಬೇಕಾದ ಪರಿಸ್ಥಿತಿ ಎದುರಾಗಿದೆ. ವಿದ್ಯುತ್ ಸಮಸ್ಯೆ ಹೀಗೆ ಮುಂದುವರೆದರೆ ಎಲ್ಲಾ ರೈತರು ಸೇರಿ ಎಲ್ಲಾ ವಿದ್ಯುತ್ ಲೈನ್ ಗಳನ್ನು ಕಟ್ ಮಾಡಲಾಗುವುದು ಎಂದು ರೈತ ಸಂಘದ ಮುಖಂಡ ಸತೀಶ್ ಎಚ್ಚರಿಕೆ ನೀಡಿದರು.
“ರೈತರ ಬೆಳೆಗಳು ಒಣಗುತ್ತಿವೆ. ಆದ್ದರಿಂದ ಒಂದು ದಿನಕ್ಕೆ ಮೂರು ಘಂಟೆ ವಿದ್ಯುತ್ ಕೊಡುವುದರಿಂದ ರೈತರ ಸಮಸ್ಯೆ ಬಗೆಹರಿಯುವುದಿಲ್ಲ ಎಂದು ಬೆಸ್ಕಾಂ ಅಧಿಕಾರಿಗಳಿಗೆ ಮನವಿ ಮಾಡಿದರು. ಟ್ರಾನ್ಸ್ ಫಾರ್ಮರ್ ಸುಟ್ಟು ಹೋಗಿದೆ. ಸರಿ ಮಾಡಿ ವಿದ್ಯುತ್ ಕೂಡುತ್ತೆವೆ ಎಂದು ಒಂದೂವರೆ ತಿಂಗಳಿಂದ ಹೇಳುತ್ತಾ ಬರುತ್ತಿದ್ದಾರೆ. ಆದರೆ ಸರಿಪಡಿಸದ ಕಾರಣ ರೈತರು ರಸ್ತೆ ತಡೆ ಮಾಡಲಾಗುವ ಪರಿಸ್ಥಿತಿ ಎದುರಾಯಿತು”.
ಪ್ರಸನ್ನ ಕುಮಾರ್, ಬೆಂ ಗ್ರಾ ಜಿಲ್ಲಾಧ್ಯಕ್ಷ, ರಾಜ್ಯ ರೈತ ಸಂಘ.
“ಟ್ರಾನ್ಸ್ ಫಾರ್ಮರ್ ಸುಟ್ಟು ಹೋಗಿ ಒಂದು ಟ್ರಾನ್ಸ್ ಫಾರ್ಮರ್ ನಿಂದ ಎಲ್ಲಾಕಡೆ ಒಂದು ಘಂಟೆ ಯಿಂದ ಮೂರು ಘಂಟೆಗಳ ಕಾಲ ಸರಬರಾಜು ಮಾಡಲಾಗುತ್ತಿದ್ದು. ಹೊಸ ಟ್ರಾನ್ಸ್ ಫಾರ್ಮರ್ ತಂದು ಅದನ್ನು ಕಾರ್ಯ ರೂಪಕ್ಕೆ ತರಬೇಕಾದರೆ ನಾಲ್ಕೈದು ದಿನಗಳು ಬೇಕಾಗಿದೆ ಅದರಿಂದ ನಾಳೆಯಿಂದ ರೈತರಿಗೆ ಯಾವುದೆ ಸಮಸ್ಯೆ ಇಲ್ಲದೆ ವಿದ್ಯುತ್ ಸರಬರಾಜು ಮಾಡಲಾಗುವುದು”.
ಮಂಜುನಾಥ್, ಕಾರ್ಯನಿರ್ವಾಹಕ ಅಧಿಕಾರಿ, ದೊಡ್ಡಬಳ್ಳಾಪುರ.

