ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಸಾಲ ಮಾಡಿ ತುಪ್ಪು ತಿನ್ನಿಸುವುದು ಮುಂದಿನ ಆರ್ಥಿಕ ಬಿಕ್ಕಟ್ಟಿಗೆ ದಾರಿ! ಎಂದು ಜೆಡಿಎಸ್ ಆತಂಕ ವ್ಯಕ್ತ ಪಡಿಸಿದೆ.
ಹಿಮಾಚಲ ಪ್ರದೇಶದ ಕಾಂಗ್ರೆಸ್ ಸರ್ಕಾರ ದಿವಾಳಿಯಾಗಿರುವುದು ಕರ್ನಾಟಕಕ್ಕೆ ಎಚ್ಚರಿಕೆ ಗಂಟೆ! ಆಗಿದೆ ಎಂದು ಜೆಡಿಎಸ್ ಎಚ್ಚರಿಸಿದೆ.
ಗ್ಯಾರಂಟಿಯಿಂದ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಹಿಮಾಚಲ ಸರ್ಕಾರ ವಿದ್ಯುತ್‌ಬಿಲ್‌ಕಟ್ಟಲು ದುಡ್ಡಿಲ್ಲದೇ ಪಾಪರ್‌ಆಗಿದೆ. ಕರ್ನಾಟಕ ಕಾಂಗ್ರೆಸ್ ಪಕ್ಷದ ನಾಯಕರೇ, ಕಾಂಗ್ರೆಸ್ಸಿಗರೇ ಈಗಲೇ ಎಚ್ಚೆತ್ತುಕೊಳ್ಳಿ! ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಎಂದು ಜೆಡಿಎಸ್ ಎಚ್ಚರಿಸಿದೆ.
ದೂರದೃಷ್ಟಿಯ ಕೊರತೆ ದುರಂತಕ್ಕೆ ಕಾರಣವಾಗುತ್ತದೆ. ರಾಜ್ಯದಲ್ಲಿ ಈಗಾಗಲೇ ಇದು ಸ್ಪಷ್ಟವಾಗಿ ಗೋಚರಿಸುತ್ತಿದೆ. ಅವೈಜ್ಞಾನಿಕ ಯೋಜನೆಗಳು ಕರ್ನಾಟಕದಲ್ಲಿಯೂ ಬೊಕ್ಕಸ ಬರಿದು ಮಾಡಿದ್ದು ಆರ್ಥಿಕ ತುರ್ತು ಪರಿಸ್ಥಿತಿಗೆ ತಳ್ಳಿದೆ. ಅಸಮರ್ಥ ಅನುಷ್ಠಾನ, ಸ್ಪಷ್ಟತೆಯ ಕೊರತೆ ಮತ್ತು ದೀರ್ಘಾವಧಿಯ ಯೋಜನೆಗಳಿಲ್ಲದಿರುವುದು ಕಾಂಗ್ರೆಸ್‌ಸರ್ಕಾರದ ಆಡಳಿತದ ವೈಫಲ್ಯವನ್ನು ತೋರಿಸುತ್ತಿದೆ.
ರಾಜ್ಯದ ಆರ್ಥಿಕ ಸ್ಥಿತಿಯನ್ನು ಪಾತಳಕ್ಕೆ ತಳ್ಳಿರುವ ಭ್ರಷ್ಟ ಕರ್ನಾಟಕ ಕಾಂಗ್ರೆಸ್ ಸರ್ಕಾರ ಬಡವರಿಗೆ ಶಾಪವಾಗಿ ಪರಿಣಮಿಸಿದೆ ಎಂದು ಜೆಡಿಎಸ್ ವಾಗ್ದಾಳಿ ಮಾಡಿದೆ.
ಸರ್ಕಾರ ಹಣ ಬಾಕಿ ಉಳಿಸಿಕೊಂಡಿರುವ ಕಾರಣ ಬೆಂಗಳೂರಿನ ಹಲವೆಡೆ ಇಂದಿರಾ ಕ್ಯಾಂಟೀನ್‌ಗಳು ಬಂದ್‌ಆಗಿವೆ. ಊಟ ಪೂರೈಸಲು ಗುತ್ತಿಗೆ ಪಡೆದಿರುವ ಕಂಪನಿಗೆ ಬಿಬಿಎಂಪಿ ಹಣ ಪಾವತಿಸಿಲ್ಲ. ಜೊತೆಗೆ ಕ್ಯಾಂಟೀನ್‌ಸಿಬ್ಬಂದಿಗೂ 6 ತಿಂಗಳಿಂದ ವೇತನ ನೀಡಿಲ್ಲ. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ಸರ್ಕಾರ ದಿವಾಳಿ ಅಂಚಿಗೆ ತಲುಪಿದ್ದು, ಅವೈಜ್ಞಾನಿಕ ಗ್ಯಾರಂಟಿ ಹೊರೆಯಿಂದ ಜನಸಾಮಾನ್ಯರ ಹೊಟ್ಟೆ ಮೇಲೆ ಹೊಡೆಯುತ್ತಿದೆ ಎಂದು ಜೆಡಿಎಸ್ ಟೀಕಿಸಿದೆ.