ಅದ್ಧೂರಿಯಾಗಿ ನಡೆದ ಹಿಂದೂ ಮಹಾ ಗಣಪತಿ ಶೋಭಾಯಾತ್ರೆ

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಕೋಟೆನಾಡು ಚಿತ್ರದುರ್ಗದಲ್ಲಿ ವಿಶ್ವ ಹಿಂದೂ ಪರಿಷತ್‌ ಮತ್ತು ಬಜರಂಗದಳ ಆಯೋಜಿಸಿದ್ದ ಹಿಂದೂ ಮಹಾ ಗಣಪತಿ ವಿಸರ್ಜನೆ ಅಂಗವಾಗಿ ಆಯೋಜಿಸಿದ್ದ ಶೋಭಾಯಾತ್ರೆಯಲ್ಲಿ 4 ಲಕ್ಷಕ್ಕೂ ಹೆಚ್ಚು ಭಕ್ತರು ಪಾಲ್ಗೊಂಡು ದಾಖಲೆ ನಿರ್ಮಿಸಿದರು.

ಆರಂಭದಲ್ಲಿ ಪೊಲೀಸರು ಕೇವಲ ನಾಲ್ಕು ಧ್ವನಿವರ್ಧಕಗಳಿಗೆ ಮಾತ್ರ ಅನುಮತಿ ನೀಡಲಾಗಿದೆ ಎನ್ನುತ್ತಿದ್ದರೂ ಕೊನೆ ಕ್ಷಣದಲ್ಲಿ 4 ಡಿ.ಜೆಗಳನ್ನು ಆಯೋಜಕರು ಅಂಗಳಕ್ಕೆ ತರುತ್ತಿದ್ದಂತೆ ಯುವ ಯುವತಿಯರು ಮಧ್ಯ ವಯಸ್ಕರು ಸಂಭ್ರಮದಿಂದ ಕುಣಿದು ಕುಪ್ಪಳಿಸಿ ಹೆಜ್ಜೆ ಹಾಕಿದರು. ಅಷ್ಟೇ ಅಲ್ಲ ಲಕ್ಷಾಂತರ ಮಂದಿ ಪಾಲ್ಗೊಂಡಿದ್ದರೂ ಅತ್ಯಂತ ಶಾಂತಿಯುತವಾಗಿ ಶೋಭಾಯಾತ್ರೆ ನಡೆಯಿತು.

- Advertisement - 


ಚಿತ್ರದುರ್ಗದಲ್ಲಿ ಹಿಂದೂ ಮಹಾಗಣಪತಿ ಶೋಭಾಯಾತ್ರೆ ಅದ್ಧೂರಿಯಾಗಿ ಜರುಗಿತು. ವಿಶ್ವ ಹಿಂದೂ ಪರಿಷತ್, ಭಜರಂಗದಳ ಸೇರಿ ಪ್ರತಿಷ್ಠಾಪಿಸಿದ ಮಹಾಗಣಪತಿಯ ಮೆರವಣಿಗೆಯಲ್ಲಿ ಸಹಸ್ರ ಸಂಖ್ಯೆಯಲ್ಲಿ ಜನರು ಭಾಗಿಯಾಗಿ, ಭರ್ಜರಿ ಹೆಜ್ಜೆ ಹಾಕಿದರು.

- Advertisement - 

ಚಿತ್ರದುರ್ಗ ನಗರದ ಹಿಂದೂ ಮಹಾಗಣಪತಿ ಶೋಭಾಯಾತ್ರೆ ಆರಂಭಕ್ಕೂ ಮುನ್ನವೇ ಜನಸಾಗರ ಸೇರಿತ್ತು. ಕೈಲಿಯಲ್ಲಿ ಕೇಸರಿ ಧ್ವಜ, ಕೊರಳಿಗೆ ಕೇಸರಿ ಶಾಲು ಧರಿಸಿದ ಯುವಕ ಯುವತಿಯರು ಸಖತ್ ಸ್ಟೆಪ್ ಹಾಕಿದರು. ಇದೇ ವೇಳೆ ದಲಿತ ಸಂಘರ್ಷ ಸಮಿತಿ ಬಳಕೆ ಮಾಡುವ ಧ್ವಜ ಕೂಡಾ ಹಾರಾಡಿದ್ದು ಈ ಶೋಭಾಯಾತ್ರೆಯ ವಿಶೇಷ.
ಶೋಭಾಯಾತ್ರೆ ಹಿನ್ನೆಲೆಯಲ್ಲಿ ಎಲ್ಲೆಡೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.

6 ಲಕ್ಷಕ್ಕೆ ಭಗವಾಧ್ವಜ ಹರಾಜು:
ಚಿತ್ರದುರ್ಗದಲ್ಲಿ ಹಿಂದೂ ಮಹಾಗಣಪತಿ ಶೋಭಾಯಾತ್ರೆಗೂ ಮುನ್ನ ಸಾಂಪ್ರದಾಯಿಕ ಹರಾಜು ಪ್ರಕ್ರಿಯೆ ನಡೆಯಿತು.
ಬಿಜೆಪಿ ಯುವ ನಾಯಕ ಬಿ.ಸಿ ಹನುಮಂತೇಗೌಡ 06 ಲಕ್ಷಕ್ಕೆ ಭಗವಾಧ್ವಜ ಹರಾಜ್ ನಲ್ಲಿ ಪಡೆದುಕೊಂಡರು.
ಉದ್ಯಮಿ ವಜ್ರ ಮಹೇಶ ಎಂಬುವರು 5.25 ಲಕ್ಷಕ್ಕೆ ತಿರುಪತಿ ಮಾದರಿ ಪ್ರತಿಮೆ ಪಡೆದರು.

ಅಲ್ಲದೆ ಹೋಟೆಲ್ ಉದ್ಯಮಿ ಕಿರಣ್ ಕುಮಾರ್ 1ಲಕ್ಷಕ್ಕೆ ಮಹಾಗಣಪತಿ ಫಲಹಾರ ಪುಟ್ಟಿ ಪಡೆದರು. ಉದ್ಯಮಿ ಮಂಜಣ್ಣ ಅವರು 1.05 ಲಕ್ಷಕ್ಕೆ ಹಿಂದೂ ಮಹಾಗಣಪತಿ ಚಿತ್ರಪಟ ಪಡೆದರು. ಚಿತ್ರಹಳ್ಳಿ ಲವಕುಮಾರ್ ಎಂಬುವರು 1ಲಕ್ಷಕ್ಕೆ ಮಹಾಗಣಪತಿ ಹಾರ ಹಾರಾಜಿನಲ್ಲಿ ಪಡೆದರು.

ಚಂದ್ರವಳ್ಳಿಯಲ್ಲಿ ಗಣೇಶ ವಿಸರ್ಜನೆ:
ಬೃಹತ್ ಶೋಭಯಾತ್ರೆ ಮೂಲಕ ಹಿಂದೂ ಮಹಾ ಗಣಪತಿ ನಿಮಜ್ಜನ ಮಾಡಲಾಯಿತು. ಡಿಜೆ ಮಾದರಿಯ ಮ್ಯೂಸಿಕ್​ಗೆ ಯುವಕರು ಮತ್ತು ಯುವತಿಯರು ಹೆಜ್ಜೆ ಹಾಕಿದರು.

ಶೋಭಾಯಾತ್ರೆ ನಗರದ ಮದಕರಿ ವೃತ್ತದ ಮೂಲಕ ಬಿಡಿ ರಸ್ತೆ, ಅಂಬೇಡ್ಕರ್ ವೃತ್ತ, ಸಂಗೋಳಿ ರಾಯಣ್ಣ ವೃತ್ತ, ಚಂದ್ರವಳ್ಳಿ ರಸ್ತೆ ಮೂಲಕ ಮೆರವಣಿಗೆ ಸಾಗಿತು. ಬಳಿಕ ಚಂದ್ರವಳ್ಳಿ ಸಮೀಪದ ಬಾವಿಯಲ್ಲಿ ಗಣೇಶನ ನಿಮಜ್ಜನ ಮಾಡಲಾಯಿತು. ಮೆರವಣಿಗೆಯಲ್ಲಿ ಲಕ್ಷಾಂತರ ಮಂದಿ ಭಕ್ತರು ಭಾಗಿಯಾಗಿ ಭಕ್ತಿ ಸಮರ್ಪಿಸಿದರು.

ಪೊಲೀಸರ ಕಣ್ಗಾವಲು:
ಚಿತ್ರದುರ್ಗದಲ್ಲಿ ಹಿಂದೂ ಮಹಾಗಣಪತಿ ಶೋಭಾಯಾತ್ರೆಯಲ್ಲಿ ಲಕ್ಷಾಂತರ ಜನ ಸೇರುವುದರಿಂದ ಜಿಲ್ಲಾಡಳಿತ
, ಪೊಲೀಸ್ ಇಲಾಖೆ ಕಟ್ಟೆಚ್ಚರ ವಹಿಸಿತ್ತು. ಡಿಸಿ ಟಿ ವೆಂಕಟೇಶ್, ಎಸ್ಪಿ ರಂಜಿತ್ ಬಂಡಾರು ಹೈ ಅಲರ್ಟ್ ಆಗಿದ್ದರು. ಎಸ್ಪಿ ರಂಜಿತ್ ನೇತೃತ್ವದಲ್ಲಿ 9 ಎಎಸ್ಪಿ, 28ಡಿಎಸ್ಪಿ, 78ಪಿಐ, 75 ಪಿಎಸ್ಐ, ಎಎಸ್​ಐ 401, ಪಿಸಿ 2678, ಹೆಚ್​ಜಿ 16, ಕೆಎಸ್​ಆರ್​ಪಿ 16, ಡಿಎಆರ್ 14 ತುಕಡಿ ನಿಯೋಜನೆ ಮಾಡಲಾಗಿತ್ತು.

ಜೊತೆಗೆ 151 ಸಿಸಿ ಕ್ಯಾಮರಾ ಅಳವಡಿಸಿ 26 ವಾಚ್ ಟವರ್ ನಿರ್ಮಾಣ ಮಾಡಲಾಗಿತ್ತು. ಅಲ್ಲದೆ 67 ವಿಡಿಯೋ ಕ್ಯಾಮರಾ ಸಿಬ್ಬಂದಿ ನೇಮಕ ಮಾಡಿ, ದ್ರೋಣ್ ಕ್ಯಾಮರಾಗೆ ನಿರ್ಬಂಧ ಹೇರಲಾಗಿತ್ತು. ಪೂರ್ವ ವಲಯ ಐಜಿಪಿ ರವಿಕಾಂತೇಗೌಡ ಭೇಟಿ ನೀಡಿ ಪರಿಶೀಲನೆ ನಡೆಸಿದರು.

 

 

 

 

Share This Article
error: Content is protected !!
";