ಧಾರ್ಮಿಕ ಸಾಮರಸ್ಯ ಮೆರೆದ ಹಿಂದೂ ಮಹಾಗಣಪತಿ ಶೋಭಾಯಾತ್ರೆ

News Desk

ಚಂದ್ರವಳ್ಳಿ ನ್ಯೂಸ್, ಹಿರಿಯೂರು :
ನಗರದ ಜೈನ್ ಟೆಂಪಲ್ ರಸ್ತೆ ಶಂಕರ ಮಠದ ಪಕ್ಕ ಭವ್ಯ ಮಂಟಪದಲ್ಲಿ ವಿಶ್ವ ಹಿಂದೂ ಪರಿಷತ್ ಮತ್ತು ಭಜರಂಗದಳ ವತಿಯಿಂದ ಪ್ರತಿಷ್ಠಾಪಿಸಿದ್ದ ಹಿಂದೂ ಮಹಾ ಗಣಪತಿಯನ್ನು  ಭಾನುವಾರ ಬೃಹತ್ ಶೋಭಾಯಾತ್ರೆಯೊಂದಿಗೆ ನಗರದ ಪ್ರಮುಖ ಬೀದಿಗಳಲ್ಲಿ ಅದ್ಧೂರಿ ಮೆರವಣಿಗೆ ನಡೆಸಲಾಯಿತು.

ಧಾರ್ಮಿಕ ಸಾಮರಸ್ಯ ಮೆರೆದ ಹಿಂದೂ ಮಹಾಗಣಪತಿ ಶೋಭಾಯಾತ್ರೆ:   ಹಿರಿಯೂರಿನಲ್ಲಿ ಭಾನುವಾರ ನಡೆದ ಹಿಂದೂ ಮಹಾಗಣಪತಿ ಶೋಭಾಯಾತ್ರೆಯಲ್ಲಿ ಧರ್ಮ ಭೇದ ಮರೆತು ಮುಸ್ಲಿಂ ಯುವಕರು ಪಾಲ್ಗೊಂಡ ಹಬ್ಬದೋಪಾದಿಯಲ್ಲಿ ಗಣಪನ ವಿಸರ್ಜನೆ ಮಾಡಿದ್ದಾರೆ.

ಹೌದು ಇದು ಯಾವುದೋ ಗತ ಕಾಲದ ಘಟನೆಯಲ್ಲ, ಇಂದು  ಹಿರಿಯೂರಿನಲ್ಲಿ ನಡೆದ ಹಿಂದೂ ಮಹಾಗಣಪತಿ ಶೋಭಾಯಾತ್ರೆಯಲ್ಲಿ ಧರ್ಮ ಭೇದ ಮರೆತು ಹಿಂದೂ ಮುಸ್ಲಿಂ ಯುವಕರು ಪಾಲ್ಗೊಂಡಿದ್ದು ಗಣಪನನ್ನು ಕಳುಹಿಸಿದ್ದು ವಿಶೇಷವಾಗಿತ್ತು. ಕಾರಣ ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ  ಯೋಜನಾ ಮತ್ತು ಸಾಂಕಿಕ ಇಲಾಖೆ ಸಚಿವ ಡಿ.ಸುಧಾಕರ್ ಪಾಲ್ಗೊಂಡ ಹಿನ್ನೆಲೆಯಲ್ಲಿ ಹಿರಿಯೂರಿನ ಜನತೆ, ಹಿಂದೆಂದೂ ಕಾಣದಷ್ಟು ಸಡಗರ ಸಂಭ್ರಮದಿಂದ ಧರ್ಮಭೇದ ಮರೆತು ಯಾತ್ರೆಯಲ್ಲಿ ಪಾಲ್ಗೊಂಡು ಸಂಭ್ರಮಿಸಿದರು.

ವಕೀಲರ ಸಂಘದ  ಮಾಜಿ ಅಧ್ಯಕ್ಷ ಅನಿಲ್ ಕುಮಾರ್ ರವರು ಪಾಲ್ಗೊಂಡಿದ್ದರು. ಮುಸಲ್ಮಾನ್ ಬಾಂಧವರು ಹಿಂದೂ ಭಕ್ತರಿಗೆ  ತಂಪು ಪಾನೀಯ ಹಂಚುವ ಮೂಲಕ  ಕಾರ್ಯಕ್ರಮಕ್ಕೆ ಮೆರುಗು ನೀಡಿದರು. ರಾಜ್ಯದ ಹಲವು ಭಾಗಗಳಲ್ಲಿ ಗಣೇಶನ ವಿಸರ್ಜನೆ ವೇಳೆ ಗಲಾಟೆ ಆಗುವುದು, ಮುಸ್ಲಿಂ ಸಮುದಾಯದ ಕೆಲ ಕಿಡಿಗೇಡಿಗಳು ಪ್ಯಾಲೆಸ್ಟೈನ್ ಬಾವುಟ ಹಿಡಿದು ಮುಜುಗರ ಪಡುವಂತೆ ಮಾಡುವುದು ನಡೆದಿದೆ.

ಆದರೆ ಹಿರಿಯೂರಿನಲ್ಲಿ ಭಿನ್ನವಾಗಿ ಮುಸ್ಲಿಂ ಸಮುದಾಯದ ಯುವಕರು ಗಣೇಶನ ವಿಸರ್ಜನೆ ಮಾಡುವ ಮೂಲಕ ಮಾದರಿಯಾಗಿದ್ದಾರೆ. ಈ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಯಿತು.

 

- Advertisement -  - Advertisement - 
Share This Article
error: Content is protected !!
";