ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಭದ್ರಾವತಿವಿಧಾನಸಭಾ ಕ್ಷೇತ್ರದ ಬಿಜೆಪಿ ಮುಖಂಡರೂ, ಹಿಂದೂ ಮಹಾಸಭಾ, ಹಿಂದೂ ರಾಷ್ಟ್ರ ಸೇನಾ ಅಧ್ಯಕ್ಷರಾಗಿದ್ದ ನಗರಸಭಾ ಸದಸ್ಯ ವಿ.ಕದಿರೇಶಿ ಅವರು ಹಿಂದೂ ರಾಷ್ಟ್ರ ಸೇನೆ ಮತ್ತು ಹಿಂದೂ ಮಹಾಸಭಾ ತೊರೆದು ಶಾಸಕರಾದ ಬಿ.ಕೆ.ಸಂಗಮೇಶ್ ನೇತೃತ್ವದಲ್ಲಿ ಕಾಂಗ್ರೆಸ್ ಸೇರ್ಪಡೆಗೊಂಡರು.
ಇವರ ಜೊತೆಗೆ ಪುತ್ರ BJP ಹಿಂದುಳಿದ ವರ್ಗ ಘಟಕದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ಮಂಜುನಾಥ್, ಹಾಲಿ ಬಿಜೆಪಿ ನಗರಸಭಾ ಸದಸ್ಯರಾದ ಅನಿತಾ ಮಲ್ಲೇಶ್, ಶಶಿಕಲಾ ನಾರಾಯಣಪ್ಪ ಅವರೂ ಮುಖ್ಯಮಂತ್ರಿ ಸಿದ್ದರಾಮಯ್ಯ ಸಮ್ಮುಖದಲ್ಲಿ ಕಾಂಗ್ರೆಸ್ ಸೇರ್ಪಡೆಗೊಂಡರು.