ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಸಿಎಂ ಸಿದ್ದರಾಮಯ್ಯ ನವರೇ, ನಿಮ್ಮ so-called secular, ಜಾತ್ಯತೀತ ಸರ್ಕಾರದಲ್ಲಿ ಹಿಂದೂಗಳು ಹೇಗೆ ಎರಡನೇ ದರ್ಜೆ ಪ್ರಜೆಗಳಾಗಿದ್ದಾರೆ ಎನ್ನುವುದನ್ನ ಈ ಹೆಣ್ಣುಮಗಳು ಬಹಳ ಚೆನ್ನಾಗಿ ಹೇಳಿದ್ದಾಳೆ ನೋಡಿ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಹರಿಹಾಯ್ದಿದ್ದಾರೆ.
ಡಿಸಿಎಂ ಡಿ.ಕೆ ಶಿವಕುಮಾರ್ ಅವರೇ, ನಿಮ್ಮ so-called “ಬ್ರದರ್ಸ್” ಗಳು ಹೇಗೆ ಹಿಂದೂಗಳ ಮೇಲೆ ದಬ್ಬಾಳಿಕೆ ಮಾಡುತ್ತಿದ್ದಾರೆ ಎನ್ನುವುದನ್ನು ಕಿವಿಗೊಟ್ಟು ಕೇಳಿ ಸ್ವಾಮಿ. “ನಮಸ್ತೇ ಸದಾ ವತ್ಸಲೇ” ಎಂದು ಹೇಳಿದ್ದಕ್ಕೆ ವಾರ್ನಿಂಗ್ ಬಂದ ಕೂಡಲೇ ಎದ್ದೆನೋ ಬಿದ್ದೆನೋ ಎಂದು ಹೆದರಿಕೊಂಡು
ಸುದ್ದಿಗೋಷ್ಠಿ ಮಾಡಿ ಹೈಕಮಾಂಡ್ ನಾಯಕರಿಗೆ ಕ್ಷಮೆ ಕೇಳಿದರಲ್ಲ, ಈಗ ಗಣೇಶೋತ್ಸವಕ್ಕೆ ಭದ್ರತೆ ಕೊಡಲಾಗದ ತಾವು ಹಿಂದೂಗಳ ಕ್ಷಮೆ ಕೇಳುತ್ತೀರಾ? ನಾಚಿಕೆಯಾಗಬೇಕು ನಿಮ್ಮ ಹಿಂದೂ ವಿರೋಧಿ ಕರ್ನಾಟಕ ಪಕ್ಷಕ್ಕೆ ಎಂದು ಅಶೋಕ್ ಟೀಕಿಸಿದ್ದಾರೆ.

