ಹಿರಿಯೂರು : ಡಿಪ್ಲೋಮಾ ಪ್ರವೇಶಾತಿ ಪ್ರಾರಂಭ

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಪ್ರಸಕ್ತ ಶೈಕ್ಷಣಿಕ ಸಾಲಿಗೆ ಹಿರಿಯೂರು ಸರ್ಕಾರಿ ಪಾಲಿಟೆಕ್ನಿಕ್ ಸಂಸ್ಥೆಯಲ್ಲಿ ಪ್ರಥಮ ವರ್ಷದ ಡಿಪ್ಲೋಮಾ ಸೀಟುಗಳಿಗೆ ಆಫ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

       ಈ ಹಿಂದೆ ಆನ್‍ಲೈನ್ ಮೂಲಕ ಸೀಟು ಹಂಚಿಕೆಯಾಗಿ ನಂತರ ಭರ್ತಿಯಾಗದೇ ಉಳಿದಿರುವ ಸೀಟುಗಳನ್ನು ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ಪ್ರಾಂಶುಪಾಲರ ಸಮ್ಮುಖದಲ್ಲಿ ಆಫ್‍ಲೈನ್ ಮೂಲಕ ಅಭ್ಯರ್ಥಿಗಳಿಗೆ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದೆ.

      ಪಾಲಿಟೆಕ್ನಿಕ್‍ನಲ್ಲಿ ಡಿಪ್ಲೋಮಾ ಪ್ರವೇಶ ಬಯಸುವ ಆಸಕ್ತ ಅಭ್ಯರ್ಥಿಗಳು ಎಸ್.ಎಸ್.ಎಲ್.ಸಿ ಮೂಲ ಅಂಕಪಟ್ಟಿ, ಮೂಲ ವರ್ಗಾವಣೆ ಪತ್ರ, ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಕನ್ನಡ ಮಾಧ್ಯಮ ವ್ಯಾಸಂಗ, ಗ್ರಾಮೀಣ ಮಾಧ್ಯಮ ಪ್ರಮಾಣ ಪತ್ರ ಹಾಗೂ ವ್ಯಾಸಂಗ ಪ್ರಮಾಣ ಪತ್ರಗಳ ಜೊತೆಗೆ, ಅಭ್ಯರ್ಥಿಯು ನೇರವಾಗಿ ಕಾಲೇಜಿಗೆ ಖುದ್ದು ಹಾಜರಾಗಿ ಪ್ರವೇಶಾತಿ ಪಡೆಯಬೇಕು. ಅರ್ಜಿ ಸಲ್ಲಿಕೆಗೆ ಜೂನ್ 30 ಕೊನೆಯ ದಿನವಾಗಿರುತ್ತದೆ.

       ಹೆಚ್ಚಿನ ಮಾಹಿತಿಗಾಗಿ ಕಛೇರಿ ದೂರವಾಣಿ ಸಂಖ್ಯೆ: 9900337587 ಅಥವಾ 9482787542 ಕ್ಕೆ ಸಂಪರ್ಕಿಸಬೇಕೆಂದು ಹಿರಿಯೂರು ಸರ್ಕಾರಿ ಪಾಲಿಟೆಕ್ನಿಕ್ ಪ್ರಾಂಶುಪಾಲರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

Share This Article
error: Content is protected !!
";