ಸೆ. 11ರಂದು ಹಿರಿಯೂರು ಹಿಂದೂ ಮಹಾಗಣಪತಿ ವಿಸರ್ಜನೆ

News Desk

ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಸೆಪ್ಟೆಂಬರ್ 11 ರಂದು ಹಿಂದೂ ಮಹಾಗಣಪತಿಯ ಬೃಹತ್ ಶೋಭಾಯಾತ್ರೆ ಹಾಗೂ ವಿಸರ್ಜನಾ ಮೆರವಣಿಗೆ ಕಾರ್ಯಕ್ರಮ ನಡೆಯಲಿದೆ ಎಂದು ಹಿಂದೂ ಮಹಾಗಣಪತಿ ಸಮಿತಿ ಅಧ್ಯಕ್ಷ ಡಿ. ನಾರಾಯಣ ರೆಡ್ಡಿ ಹಾಗೂ ಗೌರವಾಧ್ಯಕ್ಷ ಅಮರ್ ನಾಥ್ ತಿಳಿಸಿದರು.

ನಗರದ ಜೈನ್ ಟೆಂಪಲ್ ಸಮೀಪದ ಶಂಕರ್ ಮಠ ಬಳಿ ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗದಳದ ವತಿಯಿಂದ ಪ್ರತಿಷ್ಠಾಪಿಸಿರುವ ಹಿಂದೂ ಮಹಾಗಣಪತಿ ವೇದಿಕೆ ಮುಂಭಾಗದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿದರು.

- Advertisement - 

ಸೆಪ್ಟೆಂಬರ್ 10 ರಂದು ಬೆಳಿಗ್ಗೆ 10ಗಂಟೆಗೆ ಬೃಹತ್ ಬೈಕ್ ರ್ಯಾಲಿ ಕಾರ್ಯಕ್ರಮ ನಡೆಯಲಿದೆ. ಬಳಿಕ ಸೆ. 11ರಂದು ವಿಸರ್ಜನಾ ದಿನ ಬೆಳಿಗ್ಗೆ 9 ಗಂಟೆಗೆ ವಿನಾಯಕನಿಗೆ ವಿವಿಧ ಧಾರ್ಮಿಕ ಪೂಜಾ ಕಾರ್ಯಕ್ರಮಗಳು ನೆರವೆರಿಸಿಅಲಂಕರಿಸಿದ ಟ್ರಾಕ್ಟರ್ ನಲ್ಲಿ ಕೂರಿಸಿ ವೇದಿಕೆ ಬಳಿ ಕರೆತರಲಾಗುವುದು. ಬೆಳಿಗ್ಗೆ 11.30ಕ್ಕೆ ಬಿಇಒ ಕಚೇರಿ ಮುಂಭಾಗದಲ್ಲಿ ವೇದಿಕೆ ಕಾರ್ಯಕ್ರಮದಲ್ಲಿ ನಡೆಯಲಿದ್ದು, ಕರ್ನಾಟಕ ದಕ್ಷಿಣ ಪ್ರಾಂತ, ಬಜರಂಗದಳದ ಪ್ರಾಂತ ಸಂಯೋಜಕರು ಶ್ರೀ ಪ್ರಭಂಜನ್ ಸೂರ್ಯ ಅವರು ದಿಕ್ಸೂಚಿ ಭಾಷಣ ಮಾಡಲಿದ್ದಾರೆ.

ನಂತರ  ಮೆರವಣಿಗೆ ಆರಂಭವಾಗಲಿದೆ. ಶೋಭಾಯಾತ್ರೆಯು ಗಾಂಧಿ ಸರ್ಕಲ್, ಹುಳಿಯಾರು ರಸ್ತೆಯ ಮೂಲಕ, ಚರ್ಚೆ ರಸ್ತೆ, ಆಸ್ಪತ್ರೆ ಸರ್ಕಲ್ ನಿಂದ ರಂಜಿತ್ ಹೋಟೆಲ್ ತಲುಪಿ ಅಲ್ಲಿಂದ ಪುನಃ ಗಾಂಧಿ ಸರ್ಕಲ್ ವರೆಗೂ ಬೃಹತ್ ಮೆರವಣಿಗೆ ನಡೆಯಲಿದ್ದು, ರಾತ್ರಿ 9 ಗಂಟೆಗೆ ಬಬ್ಬೂರು ಫಾರಂ ಬಳಿ ಇರುವ ತೋಟಗಾರಿಕಾ ಕಾಲೇಜು ಹಿಂಭಾಗದ ಬಾವಿಯಲ್ಲಿ  ವಿಸರ್ಜನೆ ಕಾರ್ಯಕ್ರಮ ನಡೆಯಲಿದೆ.

- Advertisement - 

ಈ ಶೋಭಾಯಾತ್ರೆಯಲ್ಲಿ ನಾಸಿಕ್ ಡೋಲು, ಚೆಂಡೆ ವಾದ್ಯ ಸೇರಿದಂತೆ ವಿವಿಧ ಕಲಾತಂಡಗಳು ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿವೆ. ತಾಲ್ಲೂಕಿನ ಸಮಸ್ತ ಹಿಂದೂ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು. ಶೋಭಾಯಾತ್ರೆ ಯಶಸ್ವಿಯಾಗಿ ನಡೆಯಲು ಸಾರ್ವಜನಿಕರು ಹಾಗೂ ಪೊಲೀಸ್ ಇಲಾಖೆ ಸಹಕರಿಸಬೇಕು ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ  ವಿಶ್ವ ಹಿಂದೂ ಪರಿಷತ್ ಅಧ್ಯಕ್ಷ ಆರ್.ಟಿ. ಪ್ರಶಾಂತ್, ಉಪಾಧ್ಯಕ್ಷ ಗೋವಿಂದ ಆಚಾರ್, ಕಾರ್ಯದರ್ಶಿ ರಾಘವೇಂದ್ರ, ಸಹಕಾರ್ಯದರ್ಶಿ ಮಂಜುನಾಥೇಶ್ವರ, ಜಗದೀಶ್ ಯಾದವ್, ನವೀನ್ ಕುಮಾರ್ಪ್ರಮೋದ್, ಮಧು, ಚೇತನ್, ಸಂತೋಷ್, ವಿಶ್ವ ಹಿಂದೂ ಪರಿಷತ್ ಜಿಲ್ಲಾ ಸಹ ಕಾರ್ಯದರ್ಶಿ ಜಿ. ವೆಂಕಟೇಶ್, ಬಜರಂಗದಳ ಸಂಯೋಜಕ ಚೇತನ್ ಆಲೂರು, ಸಂತೋಷ್ ಯಾದವ್, ದರ್ಶನ್ಸೇರಿದಂತೆ ಇತರರಿದ್ದರು.

 

Share This Article
error: Content is protected !!
";