ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಹಿರಿಯೂರು ನಗರಸಭೆಯ 2019-20ನೇ ಸಾಲಿನಿಂದ 2024-25ನೇ ಸಾಲಿನ ನಗರಸಭೆ ನಿಧಿ ಹಾಗೂ ಎಸ್.ಎಫ್.ಸಿ ಯೋಜನೆಯಡಿ ಶೇ.24.10, ಶೇ.7.25 ಹಾಗೂ ಶೇ.5ರ ಅನುದಾನದಲ್ಲಿ ಮೀಸಲಿರಿಸಿರುವ ಯೋಜನೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
ಯೋಜನೆಗಳಡಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಜನಾಂಗದ ವಿದ್ಯಾರ್ಥಿಗಳಿಗೆ ವಿಶೇಷ ಆರ್ಥಿಕ ನೆರವು, ಕುಡಿಯುವ ನೀರಿನ ಸಂಪರ್ಕ ಶುಲ್ಕ ವೆಚ್ಚ ಭರಿಸುವುದು. ಇತರೆ ಜನಾಂಗದ ಎಲ್.ಎಲ್.ಬಿ ಪದವಿ ಹೊಂದಿರುವ ವೃತ್ತಿ ನಿರತ ವಕೀಲರುಗಳಿಗೆ ಪುಸ್ತಕ ಖರೀದಿಸಲು ಸಹಾಯ ಧನ ನೀಡಲಾಗುವುದು.
ಇತರೆ ಜನಾಂಗದ ಸಣ್ಣ ಉದ್ದಿಮೆದಾರರಿಗೆ ಸಹಾಯ, ದಿವ್ಯಾಂಗ ವಿಶೇಷ ಚೇತನರಿಗೆ ವೀಲ್ ಚೇರ್ ಖರೀದಿಸಿ ನೀಡಲಾಗುವುದು. ಡಿ.6 ವರಗೆ ಅರ್ಜಿ ಸಲ್ಲಿಸಲು ಅವಕಾಶವಿದ್ದು ನಗರದ ನಾಗರಿಕರು ಈ ಸೌಲಭ್ಯಗಳ ಸದುಪಯೋಗ ಪಡೆದುಕೊಳ್ಳುವಂತೆ ಪೌರಾಯುಕ್ತ ಎ.ವಾಸೀಂ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

