ಗ್ರಾಮ ಸಹಾಯಕರ ಸಂಘದ ರಾಜ್ಯ ಪ್ರತಿನಿಧಿಯಾಗಿ ಹಿರಿಯೂರು ನಾಗರಾಜ್ ಆಯ್ಕೆ

News Desk

ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಚಿತ್ರದುರ್ಗ ನಗರದ ಸರ್ಕಾರಿ ನೌಕರರ ಭವನದಲ್ಲಿ ಕಂದಾಯ ಇಲಾಖೆ ಗ್ರಾಮ ಸಹಾಯಕ ಡಿ ದರ್ಜೆ ಹೋರಾಟ ಸಮಿತಿ ನೂತನ ರಾಜ್ಯಾಧ್ಯಕ್ಷರಾದ ಪ್ರತಾಪ್ ಮದಕರಿರವರ ಅಧ್ಯಕ್ಷತೆಯಲ್ಲಿ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಮಾಲತೇಶ್ ಮುದ್ದಜ್ಜಿರವರ ಸಮ್ಮುಖದಲ್ಲಿ ಜಿಲ್ಲೆಯ ಸಮಸ್ತ ಗ್ರಾಮ ಸಹಾಯಕರು ತಾಲ್ಲೂಕ ಅಧ್ಯಕ್ಷರುಗಳು ಹಾಗೂ ಪದಾಧಿಕಾರಿಗಳು ಹಾಗೂ ಸಮಸ್ತ ಗ್ರಾಮ ಸಹಾಯಕರ ಸಮ್ಮುಖದಲ್ಲಿ ಕರ್ನಾಟಕ ರಾಜ್ಯ ಕಂದಾಯ ಇಲಾಖೆ ಗ್ರಾಮ ಸಹಾಯಕರ ಸಂಘಕ್ಕೆ ರಾಜ್ಯ ಸಂಘದ ಪ್ರತಿನಿಧಿಯಾಗಿ ಹಿರಿಯೂರು ಆರ್. ನಾಗರಾಜ್ ರವರನ್ನು ಸರ್ವ ಸದಸ್ಯರ ಒಮ್ಮತದಿಂದ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ.

- Advertisement - 

 ಕರ್ನಾಟಕ ರಾಜ್ಯ ಗ್ರಾಮ ಸಹಾಯಕರ ಹಲವು ಸಮಸ್ಯೆಗಳ ಪರಿಹಾರಕ್ಕೆ ಹಾಗೂ ಸಂವಿಧಾನ ಬದ್ದವಾದ ಬೇಡಿಕೆಗಳಿಗಾಗಿ ಹೋರಾಡಲು ಚಿತ್ರದುರ್ಗ ಜಿಲ್ಲೆಯ ಸಮಸ್ತ ಗ್ರಾಮ ಸಹಾಯಕ ಸಹಕಾರದೊಂದಿಗೆ ಸಮಸ್ತ ಕರ್ನಾಟಕ ರಾಜ್ಯದ ಗ್ರಾಮ ಸಹಾಯಕರ ಸಮಸ್ಯೆಗಳನ್ನು ಪರಿಹರಿಸಿಕೊಂಡು ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಹಿರಿಯೂರು ಆರ್. ನಾಗರಾಜ್ ತಿಳಿಸಿದರು.

- Advertisement - 

ಈ ಸಂದರ್ಭದಲ್ಲಿ ರಾಜ್ಯ ಸಂಘದ ಮುಖಂಡ ತುಮಕೂರು ನಾರಾಯಣ್, ಹಾಸನ ಅರುಣ್, ಚಿತ್ರದುರ್ಗ ಜಿಲ್ಲ್ಲಾ ಮುಖಂಡ ಎನ್ ನಾಗರಾಜ್ ಚಿಕ್ಕೇನಹಳ್ಳಿ ಹಾಗೂ ಚಳ್ಳಕೆರೆ ತಾಲ್ಲೂಕು ಅಧ್ಯಕ್ಷ ಸೂರ್ಯಪ್ರಕಾಶ್, ಚಿತ್ರದುರ್ಗ ತಾಲ್ಲೂಕು ಅಧ್ಯಕ್ಷ ಓಬಳೇಶ್, ಹಿರಿಯೂರು ತಾಲ್ಲೂಕು ಅಧ್ಯಕ್ಷ ಬಿ.ಎನ್.ಗಂಗಾಧರ್, ಹೊಳಲ್ಕೆರೆ ತಾಲ್ಲೂಕು ಅಧ್ಯಕ್ಷ ನಾಗರಾಜ್, ಹೊಸದುರ್ಗ ತಾಲ್ಲೂಕು ಅಧ್ಯಕ್ಷ ಮೋಹನ್, ಮೊಳಕಾಲ್ಮೂರು ತಾಲ್ಲೂಕು ಅಧ್ಯಕ್ಷ ನಾಗರಾಜ್ ಹಾಗೂ ಜಿಲ್ಲೆಯ ಎಲ್ಲ ಗ್ರಾಮ ಸಹಾಯಕರು ಸಭೆಯಲ್ಲಿ ಪಾಲ್ಗೊಂಡಿದ್ದರು.

- Advertisement - 
Share This Article
error: Content is protected !!
";