ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಹಿರಿಯೂರು ತಾಲ್ಲೂಕು ಕೃಷಿಕ ಸಮಾಜಕ್ಕೆ ೨೦೨೪-೨೫ ರಿಂದ ೨೦೨೯-೩೦ರ ವರಗೆ ಕಾರ್ಯಕಾರಿ ಸಮಿತಿಯ ಚುನಾವಣೆ ಘೋಷಣೆಯಾಗಿದ್ದು, ತಾಲ್ಲೂಕು ಕೃಷಿಕ ಸಮಾಜದ ಕಾರ್ಯಕಾರಿ ಸಮಿತಿಗೆ ೧೫ ಜನ ಸದಸ್ಯರನ್ನು ಚುನಾವಣಾ ಮೂಲಕ ಆಯ್ಕೆ ಮಾಡಬೇಕಾಗಿದೆ.
ತಾಲ್ಲೂಕು ಕೃಷಿಕ ಸಮಾಜದ ಅಜೀವ ಸದಸ್ಯರಿಂದ ೫೩ ಉಮೇದುವಾರಿಕೆ ಪತ್ರಗಳನ್ನು ಸ್ವೀಕರಿಸಲಾಗಿತ್ತು. ಡಿ.೦೭ರಂದು ನಾಮಪತ್ರ ಪರಿಶೀಲಿಸಿ ೧ ನಾಮಪತ್ರವು ತಿರಸ್ಕೃತಗೊಂಡು ೫೨ ಸದಸ್ಯರ ನಾಮಪತ್ರ್ರಗಳು ಅಂಗೀಕರವಾಗಿರುತ್ತದೆ. ಡಿ.೦೯ ೫೨ ಸದಸ್ಯರಲ್ಲಿ ೩೭ ಸದಸ್ಯರು ತಮ್ಮ ನಾಮಪತ್ರಗಳನ್ನು ವಾಪಸ್ಸು ಪಡೆದಿರುತ್ತಾರೆ.
ಅಂತಿಮವಾಗಿ ೧೫ ಜನ ಸದಸ್ಯರು ಚುನಾವಣಾ ಕಣದಲ್ಲಿ ಉಳಿದಿರುತ್ತಾರೆ. ಡಿ.೧೫ರಂದು ಚುನಾವಣೆ ನಡೆಯಬೇಕಾಗಿದ್ದು, ಅಂತಿಮವಾಗಿ ೧೫ ಜನ ಚುನಾವಣಾ ಕಣದಲ್ಲಿ ಉಳಿದಿದ್ದು ಆ ಸದಸ್ಯರುಗಳನ್ನು ೨೦೨೪-೨೫ ರಿಂದ ೨೦೨೯-೩೦ರ ವರಗಿನ ತಾಲ್ಲೂಕು ಕೃಷಿಕ ಸಮಾಜದ ನೂತನ ಕಾರ್ಯಕಾರಿ ಸಮಿತಿಯ ಸದಸ್ಯರೆಂದು ಚುನಾವಣಾಧಿಕಾರಿ ಎಂ.ವಿ ಮಂಜುನಾಥ್ ಘೋಷಣೆ ಮಾಡಿರುತ್ತಾರೆ.
ಕೃಷಿಕ ಸಮಾಜದ ನೂತನ ಕಾರ್ಯಕಾರಿ ಸಮಿತಿಯ ಸದಸ್ಯರಾದ ಜೆ ಮಧುಸೂಧನ್, ಆರ್. ವಿಶ್ವನಾಥ, ಎನ್. ಕಾಮರಾಜ್, ಮಹಮದ್ ಫಕೃದ್ದೀನ್,
ಎಂ.ಎ ಶ್ರೀನಿವಾಸ, ಸಿ.ಹೆಚ್ ಕಾಂತರಾಜ್, ಪಿ.ಎಸ್ ಪಾತಯ್ಯ, ಎಂ.ಡಿ ರವಿ, ನಾಗಮ್ಮ, ಹೆಚ್.ಆರ್ ತಿಮ್ಮಯ್ಯ, ಹೆಚ್. ತಿಪ್ಪೇಸ್ವಾಮಿ, ಕೆ. ಜಗದೀಶ್ ಕಂದಿಕೆರೆ, ಎಂ. ಜಯರಾಮಪ, ಬಿ. ಅನ್ನಪೂರ್ಣ, ಪಿ.ಎಂ ತಿಮ್ಮಯ್ಯ ಆಯ್ಕೆಯಾಗಿದ್ದಾರೆ.