ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಮಾಜಿ ನಗರಸಭೆ ಅಧ್ಯಕ್ಷರು ಹಾಗೂ ಅರ್ಬನ್ ಬ್ಯಾಂಕ್ ಇತರೆ ಸಂಘ ಸಂಸ್ಥೆಗಳ ಸೇವೆ ಸಲ್ಲಿಸಿದ ಕೆ.ಆರ್ ವೆಂಕಟೇಶ್ ನಿಧನರಾಗಿದ್ದಾರೆ.
ಮೃತರು ಪತ್ನಿ ಸೇರಿದಂತೆ ಅಪಾರ ಬಂದು ಮಿತ್ರರನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆ ಬುಧವಾರ ಸಂಜೆ 4 ಗಂಟೆಗೆ ನಗರದ ಆರ್ಯ ವೈಶ್ಯ ರುದ್ರಭೂಮಿ ನಡೆಯಲಿದೆ ಎಂದು ಕುಟುಂಬ ಸದಸ್ಯರು ತಿಳಿಸಿದ್ದಾರೆ.
ಕೆಆರ್ ವಿ-
ಮೃತ ಕೆ.ಆರ್.ವೆಂಕಟೇಶ್ ಅವರು ಯೋಧರಾಗಿ ಸೇವೆ ಸಲ್ಲಿಸಿ ಬಂದ ನಂತರ ಪತ್ರಿಕಾ ಏಜೆಂಟರು, ಪತ್ರಕರ್ತರಾಗಿ ಸಾಕಷ್ಟು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು. ಜಿಲ್ಲೆಯಲ್ಲಿ ನಿವೃತ್ತ ಸೈನಿಕರ ಸಂಘವನ್ನು ಮೊದಲಿಗೆ ಸ್ಥಾಪನೆ ಮಾಡಿ ಗಮನ ಸೆಳೆದ ಕೀರ್ತಿ ಇವರಿಗೆ ಸಲ್ಲುತ್ತದೆ.
ಎರಡು ಬಾರಿ ಹಿರಿಯೂರು ನಗರಸಭೆ ಅಧ್ಯಕ್ಷರಾಗಿ ಉತ್ತಮ ಆಡಳಿತ ನೀಡಿದ್ದಲ್ಲದೆ ಎಲ್ಲರು ಇವರನ್ನ ಕೆಆರ್ ವಿ ಎಂದು ಸಂಬೋಧನೆ ಮಾಡುತ್ತಿದ್ದರು.
ಆರ್ಯವೈಶ್ಯ ಮಂಡಳಿಯ ಗೌರವಾಧ್ಯಕ್ಷರಾಗಿ, ಅರ್ಬನ್ ಬ್ಯಾಂಕ್ ಅಧ್ಯಕ್ಷರಾಗಿ ಸಾಕಷ್ಟು ಸೇವೆಯನ್ನು ಮಾಡಿದ್ದಾರೆ. ಕೆ.ಆರ್.ವೆಂಕಟೇಶ್ ಅವರ ಸಾವಿಗೆ ಸಂಘ ಸಂಸ್ಥೆಗಳು, ಆರ್ಯವೈಶ್ಯ ಮಂಡಳಿ, ಪತ್ರಕರ್ತರ ಸಂಘ ಸೇರಿದಂತೆ ಮತ್ತಿತರರು ಸಂತಾಪ ಸೂಚಿಸಿ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.