ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕೃಷ್ಣಾ ಮೇಲ್ದಂಡೆ ಯೋಜನೆ ಹಂತರ-3 ಸಂತ್ರಸ್ತರಿಗೆ ಐತಿಹಾಸಿಕ ಪರಿಹಾರ ಘೋಷಣೆ ಮಾಡಲಾಗಿದೆ ಎಂದು ಬೃಹತ್ ಕೈಗಾರಿಕೆ ಸಚಿವ ಎಂ.ಬಿ ಪಾಟೀಲ್ ತಿಳಿಸಿದ್ದಾರೆ.
ರೈತರು ಹಾಗೂ ಗ್ರಾಮಸ್ಥರಿಂದ ಅಭಿನಂದನಾ ಕಾರ್ಯಕ್ರಮ ಕೃಷ್ಣಾ ಮೇಲ್ದಂಡೆ ಯೋಜನೆ ಹಂತ-3ರ ಸಂತ್ರಸ್ತರಿಗೆ ಕರ್ನಾಟಕ ಸರಕಾರ ಯೋಗ್ಯದರ ನಿಗದಿ ಪಡಿಸಿದ ನಿಮಿತ್ತ ದೇವರಗೆಣ್ಣೂರು ಗ್ರಾಮದಲ್ಲಿ ರೈತರು ಹಾಗೂ ಗ್ರಾಮಸ್ಥರು ಏರ್ಪಡಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಪಾಲ್ಗೊಂಡು ಸಚಿವರು ಸನ್ಮಾನ ಸ್ವೀಕರಿಸಿದರು.
2013-2018ರವರೆಗೆ ನೀರಾವರಿ ಸಚಿವನಾಗಿದ್ದಾಗ, ಆನಂತರವೂ ಸಂತ್ರಸ್ಥರ ಪರವಾಗಿ ಧ್ವನಿ ಎತ್ತುತ್ತಾ, ಸೂಕ್ತ ಮತ್ತು ನ್ಯಾಯಯುತ ಪರಿಹಾರ ದೊರಕಿಸಿಕೊಡುವ ಭರವಸೆ ನೀಡಿದ್ದು ನಮ್ಮೆಲ್ಲ ಜನರಿಗೆ ತಿಳಿದಿದೆ.
2023ರಲ್ಲಿ ಅಂದಿನ ಸರಕಾರ ನೀರಾವರಿ ಜಮೀನು ಪ್ರತಿ ಎಕರೆಗೆ 24 ಲಕ್ಷ, ಒಣ ಭೂಮಿ ಪ್ರತಿ ಎಕರೆಗೆ 20 ಲಕ್ಷ ನೀಡುವುದಾಗಿ ತಿಳಿಸಿ ಅದನ್ನೇ ದೊಡ್ಡ ಸಾಧನೆ ಎಂಬಂತೆ ಬಿಂಬಿಸಿಕೊಂಡಿತ್ತು. ಆದರೆ ಈ ಪರಿಹಾರ ಅಲ್ಪವಾಗಿದೆ ಎಂಬ ಕಾರಣದಿಂದ ರೈತರಿಗೆ ಸ್ವೀಕರಿಸಬಾರದೆಂದು ಎಂ.ಬಿ ಪಾಟೀಲ್ ಅಂದು ಮನವಿ ಮಾಡಿದ್ದರು.
ಕಳೆದವಾರ ನಡೆದ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ಇತಿಹಾಸದಲ್ಲೇ ಅತಿಹೆಚ್ಚಿನ ಪರಿಹಾರ ನೀಡಲು ಒಪ್ಪಿಗೆ ಸೂಚಿಸಿದ್ದು, ನೀರಾವರಿ ಜಮೀನು: ಪ್ರತಿ ಎಕರೆಗೆ 40 ಲಕ್ಷ, ಒಣಭೂಮಿ: ಪ್ರತಿ ಎಕರೆಗೆ 30 ಲಕ್ಷ ಪರಿಹಾರ ದೊರೆಯಲಿದೆ. ಇದು ರೈತರ ಹಕ್ಕಿಗೆ ದೊರೆತ ನಿಜವಾದ ನ್ಯಾಯ ಎಂದು ಸಚಿವ ಪಾಟೀಲ್ ತಿಳಿಸಿದರು.
ಅಭಿನಂದನಾ ಕಾರ್ಯಕ್ರಮದಲ್ಲಿ ಬಬಲಾದಿಮಠದ ಪೂಜ್ಯ ಶ್ರೀ ಅಪ್ಪಯ್ಯ ಸ್ವಾಮೀಜಿ, ಗ್ರಾಮದ ಹಿರಿಯರು, ಸ್ಥಳೀಯ ಜನಪ್ರತಿನಿಧಿಗಳು,ಯುವಕ ಮಿತ್ರರು ಉಪಸ್ಥಿತರಿದ್ದರು.

