ಕೈ-ಮೈ ಮೇಲೆ ಹಚ್ಚೆ ಹಾಕಿಸುವುದರಿಂದ ಎಚ್ಐವಿ-ಸುಭಾನ್

News Desk
- Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಮಕ್ಕಳ ಕೈ-ಮೈ ಮೇಲೆ, ಯುವಕರ-ಯುವತಿಯರು ಹಿಂದೆ ಮುಂದೆ ಯೋಚಿಸದೆ         ಹಚ್ಚೆ ಹಾಕಿಸುವುದರಿಂದ ಎಚ್ ಐ ವಿ ಬರುವ ಸಾದ್ಯತೆ ಹೆಚ್ಚಾಗಿದೆ ಎಂದು ಹೆಲ್ಪ್ ಲೈನ್ ಸುಭಾನ್ ಎಚ್ಚರಿಸಿದರು.
ಚಿತ್ರದುರ್ಗದ ಎಸ್ ಜೆಎಂ ಕೈಗಾರಿಕ ತರಬೇತಿ ಸಂಸ್ಥೆಯಲ್ಲಿ ನಡೆದ ಜೀವರಕ್ಷಣೆ ಕೌಶಲ್ಯ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಇತ್ತೀಚಿನ ಒಂದು ವರದಿ ಪ್ರಕಾರ ಹಚ್ಚೆ ಹಾಕಿಸುವುದರಿಂದ ಎಚ್ ಐ ವಿ ಹರಡುತ್ತಿದೆ ಎಂದು ತಿಳಿಸಿದರು.
ಹದಿಹರೆಯದ ಯುವಕರು ತಮ್ಮ ಪ್ರೀತಿ ಪಾತ್ರರ ಹೆಸರುಗಳನ್ನು ತಮ್ಮ ದೇಹದ ಮೇಲೆ ಹಚ್ಚೆ ಹಾಕಿಸುದರ ಮುಖಾಂತರ ತಮ್ಮ ಅಭಿಮಾನ ತೋರಿಸುತ್ತಾರೆ. ಇದರಿಂದ ತಮ್ಮ ಜೀವನ ಹಾಳು ಮಾಡಿಕೊಳ್ಳುತ್ತಿದ್ದಾರೆ.

- Advertisement - 

ಕೇಂದ್ರ ಸರ್ಕಾರದ ಭೂಸೇನೆ, ವಾಯು ಸೇನೆ, ನೌಕಾದಳ ಸೇರಿದಂತೆ ಇನ್ನೂ ಹಲವಾರು ಸರ್ಕಾರಿ ಸಂಸ್ಥೆಗಳಲ್ಲಿ ಹಚ್ಚೆ ಹಾಕಿಸಿಕೊಂಡವರು ಉದ್ಯೋಗಾವಕಾಶಗಳಿಂದ ವಂಚಿತರಾಗುತ್ತಾರೆ ಎಂದು ಅವರು ಎಚ್ಚರಿಸಿದರು.

ಈಗಾಗಲೇ ಕರ್ನಾಟಕದಾದ್ಯಂತ  ಜಾತ್ರೆಗಳು ನಡೆಯುತ್ತಿವೆ. ಜಾತ್ರೆಗಳಲ್ಲಿ ಪುಟ್ಟ ಮಕ್ಕಳು, ಮಹಿಳೆಯರು, ಯುವಕರು ಸಾಮೂಹಿಕವಾಗಿ ಹಚ್ಚೆ ಹಾಕಿಸಿಕೊಳ್ಳುತ್ತಾರೆ. ಈ ಸಂದರ್ಭದಲ್ಲಿ ಎಚ್ಚರಿಕೆ ವಹಿಸಬೇಕು.

- Advertisement - 

ಹಚ್ಚೆ ಹಾಕುವವರು ಪ್ರತಿಯೊಬ್ಬರಿಗೂ ಹೊಸ ಹೊಸ ನೀಡಲ್ ಗಳನ್ನು ಬಳಸಿ ಹಚ್ಚೆ ಹಾಕುವುದು ಕಷ್ಟ ಹಾಗೂ ಅದು ದುಬಾರಿ ಕೂಡ ಹೌದು ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಸತೀಶ್, ಕಲ್ಮೇಶ್, ವಿಶ್ವನಾಥ್, ಕೊಟ್ರೇಶ್, ಕಚೇರಿ ಸಿಬ್ಬಂದಿ ರೇವಣ್ಣ ಉಪಸ್ತಿತರಿದ್ದರು.

 

Share This Article
error: Content is protected !!
";