ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕನ್ನಡಿಗರ ಹೆಮ್ಮೆಯ ಬ್ರ್ಯಾಂಡ್ ಹೆಚ್‌ಎಂಟಿ (HMT). ಕನ್ನಡಿಗರ ಹೆಗ್ಗುರುತಾಗಿರುವ #HMT ಕಂಪನಿಯ ಪುನಶ್ಚೇತನಕ್ಕೆ ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವರಾದ ಹೆಚ್.ಡಿ ಕುಮಾರಸ್ವಾಮಿ ಅವರು ಶ್ರಮವಹಿಸುತ್ತಿದ್ದಾರೆ ಎಂದು ಜೆಡಿಎಸ್ ತಿಳಿಸಿದೆ.
ಹೆಚ್‌ಎಂಟಿಯ ಹೊಸ ಸರಣಿಯ ಕೈಗಡಿಯಾರಗಳು ಈಗ ಕನ್ನಡಿಗರ ಮನೆ ಮಾತಾಗುತ್ತಿದೆ. ಕನ್ನಡದ ಅಂಕಿಗಳು ಹಾಗೂ ಕರ್ನಾಟಕದ ಲಾಂಛನ “ಗಂಡಭೇರುಂಡ” ಇರುವ #HMT ಹೊಸ ವಾಚ್‌ಗಳು ಯುವಜನತೆಯನ್ನು ಹೆಚ್ಚು ಆಕರ್ಷಿಸುತ್ತಿದೆ.
ಮಾರುಕಟ್ಟೆಗೆ ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಈ ಆವೃತ್ತಿಯ ವಾಚ್‌ಗಳು ಸಂಪೂರ್ಣ ಖಾಲಿಯಾಗಿದ್ದು ಜನಪ್ರಿಯತೆಯ ಜೊತೆಗೆ ಗ್ರಾಹಕರಿಂದ ಹೆಚ್ಚು ಬೇಡಿಕೆ ಸೃಷ್ಟಿಯಾಗಿರುವುದು ಸಂತೋಷದ ವಿಷಯ ಎಂದು ಜೆಡಿಎಸ್ ತಿಳಿಸಿದೆ.
ಕನ್ನಡಿಗರ ಹೆಮ್ಮೆಯ HMT ವಾಚ್ ಕಟ್ಟೋಣ, HMT ಸಂಸ್ಥೆ ಉಳಿಸೋಣ. ಸಮಸ್ತ ಭಾರತೀಯರ ಹೃದಯ ಬಡಿತವೇ ಆಗಿದ್ದ #HMT ಕೈಗಡಿಯಾರ ಇವತ್ತಿಗೂ ಯಾವತ್ತಿಗೂ ಜನರ ಅಚ್ಚುಮೆಚ್ಚಿನ ಕೈಗಡಿಯಾರವೇ ಆಗಿದೆ. ನಾವಿನ್ಯತೆ ಮತ್ತು ಉತೃಷ್ಟತೆಗೆ ಮತ್ತೊಂದು ಹೆಸರೇ HMT.
ಇತ್ತೀಚೆಗೆ ಕಂಪನಿ ತಯಾರಿಸಿದ್ದ ಕರ್ನಾಟಕದ ರಾಜಲಾಂಛನ ಗಂಡಭೇರುಂಡ ಹಾಗೂ ಕನ್ನಡ ಸಂಖ್ಯೆಗಳುಳ್ಳ ಡಯಲಿನ ಕೈಗಡಿಯಾರಗಳು ಬಹಳಷ್ಟು ಜನಪ್ರಿಯವಾಗಿವೆ. ಗಡಿಯಾರಪ್ರಿಯರು ಅವನ್ನು ಪ್ರೀತಿಯಿಂದ ಖರೀದಿ ಮಾಡುತ್ತಿರುವುದು ಅತ್ಯಂತ ಸಂತೋಷದ ಸಂಗತಿ ಎಂದು ಕೇಂದ್ರ ಸಚಿವ ಕುಮಾರಸ್ವಾಮಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

