ಚಂದ್ರವಳ್ಳಿ ನ್ಯೂಸ್, ಉಡುಪಿ:
ಹೋಂ ಡಾಕ್ಟರ್ ಫೌಂಡೇಶನ್ ಅಸಹಾಯಕರ ಮನೆ ನಿರ್ಮಾಣ ಕಾನ್ಸೆಪ್ಟ್ ಅಡಿಯಲ್ಲಿ ನಿರ್ಮಾಣವಾದ 15ನೆಯ ಮನೆ ಅರೂರು ಬೆಲ್ಮಾರು ಬಳಿ ‘ ರಂಜಿತ್ ನಿವಾಸ‘ ಹಸ್ತಾಂತರ ಕಾರ್ಯಕ್ರಮ ಜ.18 ರಂದು ಆದಿತ್ಯವಾರ ನಡೆಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಹೋo ಡಾಕ್ಟರ್ ಫೌಂಡೇಶನ್ ನ ಮುಖ್ಯಸ್ಥರಾದ ಡಾ.ಶಶಿಕಿರಣ್ ಶೆಟ್ಟಿ ಮುಂದಿನ ದಿನಗಳಲ್ಲಿ ಫೌಂಡೇಶನ್ ನ ವತಿಯಿಂದ ಸುಮಾರು 500 ಅಸಹಾಯಕರಿಗೆ ನೆರವಾಗುವ ನಿಟ್ಟಿನಲ್ಲಿ ಸ್ವರ್ಗ ಆಶ್ರಮ ತನ್ನ ಸ್ವಂತ ಕಟ್ಟಡದಲ್ಲಿ ನಿರ್ಮಾಣವಾಗುವ ಯೋಜನೆ ಇದೆ ಇದಕ್ಕೆ ಎಲ್ಲರ ಸಹಕಾರ ಅಗತ್ಯವಿದೆ ಎಂದರು.
ನಮ್ಮ ನಿಸ್ವಾರ್ಥದಾನಿಗಳು ನೀಡಿದ ಸಹಕಾರದಿಂದ ಸಂಸ್ಥೆ ವತಿಯಿಂದ ಹಲವಾರು ಸಮಾಜಮುಖಿ ಕಾರ್ಯಕ್ರಮಗಳು ನಿರಂತರವಾಗಿ ನಡೆಯುತ್ತಿವೆ ಎಂದರು.
ಕಾರ್ಯಕ್ರಮದಲ್ಲಿ ಉಪ್ಪೂರು ವ್ಯವಸಾಯ ಸೇವಾ ಸಹಕಾರಿ ಸಂಘ ಅಧ್ಯಕ್ಷ ರಮೇಶ್ ಶೆಟ್ಟಿ ಸಂಸ್ಥೆಯು ಜಿಲ್ಲೆಯಲ್ಲಿ ಅತ್ಯುತ್ತಮ ಸಂಸ್ಥೆಯಾಗಿ ಮೂಡಿ ಬಂದಿದೆ ಮುಂದಿನ ಯೋಜನೆಗಳಿಗೆ ಸಹಕಾರ ನೀಡುದಾಗಿ ತಿಳಿಸಿದರು.
ವೇದಿಕೆಯಲ್ಲಿ ಖ್ಯಾತ ಸಮಾಜ ಸೇವಕ ವಿಶು ಶೆಟ್ಟಿ ಅಂಬಲಪಾಡಿ ಶುಭ ಹಾರೈಸಿದರು.ಬಿಲ್ಲವ ಸಂಘದ ದೋಗು ಪೂಜಾರಿ, ನಿವೃತ್ತ ಶಿಕ್ಷಕ ಸುಂದರ್ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ರವಿ, ಶಕುಂತಳ ರಿಗೆ ಕೀಲಿ ಕೈ ಹಸ್ತಾಂತರಿಸಲಾಯಿತು. ಕಾರ್ಯಕ್ರಮದಲ್ಲಿ ಸದಸ್ಯರಾದ ಡಾ.ಸುಮಾ ಎಸ್ ಶೆಟ್ಟಿ, ಬಂಗಾರಪ್ಪ, ವಾಣಿಶ್ರೀ ಗೋವಿಂದ ಭಂಡಾರಿ, ಪ್ರದೀಪ್ ಕೋಟ್ಯಾನ್, ರಮೇಶ್, ಉದಯ್ ನಾಯ್ಕ್, ಜಯಕರ್ ದಾಸ್, ಗುಣಕರ, ರಾಘವೇಂದ್ರ ಪ್ರಭು ಕರ್ವಾಲು, ಸಯ್ಯದ್ ಮುಂತಾದವರು ಭಾಗವಹಿಸಿದ್ದರು. ಸುರೇಂದ್ರ ಪೂಜಾರಿ ಕಾರ್ಯಕ್ರಮ ನಿರೂಪಿಸಿದರು.

