ಯಾವುದೇ ಮಾಹಿತಿ ನೀಡದೆ ವಾಸದ ಮನೆ ದ್ವಂಸ

News Desk

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ :
ವಾಸವಿದ್ದ ಮನೆಯನ್ನು ಯಾವುದೇ ಮಾಹಿತಿ ನೀಡದೆ
  ಏಕಾಏಕಿ ಜೆಸಿಪಿಯಿಂದ ಧ್ವಂಸಗೊಳಿಸಿರುವ ಘಟನೆ ತಾಲ್ಲೂಕಿನ ಹೊರವಲಯ ವೀರಾಪುರದಲ್ಲಿ ನಡೆದಿದೆ. 

ವೀರಾಪುರ ಗ್ರಾಮದ ಸರ್ವೇ ನಂಬರ್ 115 ರಲ್ಲಿ ವಿಶ್ವನಾಥ್ ಎಂಬುವರ ಜಮೀನಿನ ಪಕ್ಕದ ಜಮೀನನ್ನು ಖರೀದಿಸಿದ ರಿಯಲ್ ಎಸ್ಟೇಟ್ ವ್ಯಾಪಾರಿಗಳು ತಾವು ಖರೀದಿಸಿದ ಜಮೀನಿನಲ್ಲಿ ರಸ್ತೆ ಹಾದು ಹೋಗಿದೆ ಎಂದು ಕಾರಣ ನೀಡಿ ನಮ್ಮ ಜಮೀನನ್ನು ಒತ್ತುವರಿ ಮಾಡಿಕೊಂಡು ನಿನ್ನೆ ರಾತ್ರಿ ನಾವು ಯಾರೂ ಇಲ್ಲದ ಸಮಯದಲ್ಲಿ ಜೆಸಿಬಿ ಯಿಂದ ನಮ್ಮ ಮನೆಯ ಕೆಲ ಭಾಗವನ್ನು ದ್ವಮ್ಸ ಗೊಳಿಸಿದ್ದಾರೆ.

- Advertisement - 

ಮನೆಯಲ್ಲಿದ್ದ  ವಸ್ತುಗಳು, ಅಡುಗೆ ಪಾತ್ರೆಗಳು ಸಂಪೂರ್ಣ ಹಾಳಾಗಿದ್ದು , ತಾವು ಸಾಕಿದ್ದ ಕೋಳಿಗಳು ಗೋಡೆ ಕೆಳಗೆ ಸಿಲುಕಿ ಸಾವನಪ್ಪಿವೆ. ಗೋಡೆ ಬಿದ್ದ ಪರಿಣಾಮ ಮೇಕೆ ಮರಿಯ ಕಾಲು ಮುರಿದಿದೆ ಎಂದು ಮನೆಯ ಮಾಲೀಕ ವಿಶ್ವನಾಥ್ ಕಣ್ಣೀರು ಹಾಕಿದ್ದಾರೆ. 

ನಿನ್ನೆ ತಡ ರಾತ್ರಿ  ರವಿ, ಚಂದ್ರು , ನಾರಾಯಣಪ್ಪ ,ಮಧು ಹಾಗು ಅವರ ಸಹಚರರು  ಮನೆಯಲ್ಲಿ ಇದ್ದ ವಯಸ್ಸಾದ  ನನ್ನ ತಾಯಿಯನ್ನು ಹೊರದಬ್ಬಿ ಈ ಕೃತ್ಯ ನಡೆಸಿದ್ದಾರೆ .ಈ ಜಾಗದ ವಿಚಾರವಾಗಿ ಹಲವಾರು ಬಾರಿ ಮನವಿ ಮಾಡಿದ್ದೇವೆ. ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಜಂಟಿ ಸರ್ವೇ ಮಾಡಿರುವ ಸಲಹೆ ನೀಡಿದ್ದೆವು. ಆದರೆ ಅವರು ಒಪ್ಪುತ್ತಿಲ್ಲ ,ನೆನ್ನೆ ರಾತ್ರಿ ಮನೆಗೆ ನುಗ್ಗಿ ವಾಸವಿದ್ದ ಮನೆಯನ್ನು ಸಂಪೂರ್ಣ ನೆಲಸಮ ಮಾಡಿದ್ದಾರೆ ಎಂದರು . 

- Advertisement - 

ಈ ಕುರಿತು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು ಆರೋಪಿಗಳ ವಿರುದ್ಧ ಸೂಕ್ತ ಕ್ರಮಕೈಗೊಳ್ಳುವಂತೆ ಮನವಿ ಮಾಡಿದ್ದೇವೆ ಎಂದರು.

 

 

Share This Article
error: Content is protected !!
";