ಗ್ಯಾರಂಟಿಯಿಂದ ಅಭಿವೃದ್ಧಿ ಕುಂಠಿತ ಎಂದು ಒಪ್ಪಿಕೊಂಡ ಗೃಹ ಸಚಿವ ಡಾ.ಜಿ ಪರಮೇಶ್ವರ್

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಗ್ಯಾರಂಟಿಯಿಂದ ರಾಜ್ಯದ ಅಭಿವೃದ್ಧಿ ಕುಂಠಿತವಾಗಿದೆ ಎಂಬುದನ್ನು ಗೃಹ ಸಚಿವ ಡಾ.ಜಿ ಪರಮೇಶ್ವರ್
ಒಪ್ಪಿಕೊಂಡಿದ್ದಾರೆ ಎಂದು ಜೆಡಿಎಸ್ ತಿಳಿಸಿದೆ.

ಜನರಿಗೆ ಬೇಕಾದ ಮೂಲ ಸೌಲಭ್ಯಗಳನ್ನೇ ಕಲ್ಪಿಸದಿದ್ದರೇ ರಾಜ್ಯದ ಅಭಿವೃದ್ಧಿ ಹೇಗೆ ಸಾಧ್ಯ ? ಕರ್ನಾಟಕ ಕಾಂಗ್ರೆಸ್ಸಿಗರೇ ಎಂದು ಜೆಡಿಎಸ್ ತೀಕ್ಷ್ಣವಾಗಿ ಪ್ರಶ್ನಿಸಿದೆ.

- Advertisement - 

ಉತ್ತಮ ರಸ್ತೆ, ಕುಡಿಯುವ ನೀರು, ಒಳ ಚರಂಡಿ ವ್ಯವಸ್ಥೆ ಸೇರಿ ಅಗತ್ಯ ಮೂಲಭೂತ ಸೌಕರ್ಯಗಳೇ ಇಲ್ಲದಿದ್ದರೇ ರಾಜ್ಯಕ್ಕೆ ಹೊಸ ಕೈಗಾರಿಕೆಗಳು ಹೇಗೆ ಬರಲು ಸಾಧ್ಯ? ಬಂಡವಾಳ ಹೂಡಲು ಕೈಗಾರಿಕೋದ್ಯಮಿಗಳು ಆಸಕ್ತಿ ತೋರುತ್ತಾರೆಯೇ?

70 ವರ್ಷಗಳಿಂದಲೂ ಬಾಯಿಮಾತಿನಲ್ಲಿ “ಗರೀಬಿ ಹಠಾವೋ” ಎನ್ನುತ್ತೀದ್ದೀರಿ, ಕಾಂಗ್ರೆಸ್‌ನಾಯಕರು ಮಾತ್ರ ಉದ್ಧಾರವಾಗಿದ್ದಾರೆ ಹೊರತು, ಬಡವರು ಬಡವರಾಗಿಯೇ ಇದ್ದಾರೆ ಎಂದು ಜೆಡಿಎಸ್ ಆತಂಕ ವ್ಯಕ್ತಪಡಿಸಿದೆ.

- Advertisement - 

 

Share This Article
error: Content is protected !!
";