ಬೆಂಗಳೂರಿಗೆ ಪರ್ಯಾಯವಾಗಿ ತುಮಕೂರು ಅಭಿವೃದ್ಧಿ: ಗೃಹಮಂತ್ರಿ ಡಾ.ಜಿ .ಪರಮೇಶ್ವರ್

News Desk

 ಚಂದ್ರವಳ್ಳಿ ನ್ಯೂಸ್, ತುಮಕೂರು:
ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘ
, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಮತ್ತು ಮಹಾನಗರ ಪಾಲಿಕೆ ಸಹಯೋಗದಲ್ಲಿ ಕರ್ನಾಟಕ ರಾಜ್ಯ ಸುವರ್ಣ ಸಂಭ್ರಮ ೫೦ ಈ ಸುಸಂದರ್ಭದಲ್ಲಿ  ಇದೇ ತಿಂಗಳ ೨೩, ೨೪ರಂದು ರಾಜ್ಯಮಟ್ಟದ  ಕ್ರೀಡಾಕೂಟವನ್ನು ಪ್ರಥಮ ಬಾರಿಗೆ ಕಲ್ಪತರು ನಗರಿ ತುಮಕೂರಿನಲ್ಲಿ ಆಯೋಜನೆ ಮಾಡುತ್ತಿರುವುದು  ಶ್ಲಾಘನೀಯವಾಗಿದ್ದು ಕ್ರೀಡಾಕೂಟದ ಪ್ರಯುಕ್ತ ಜಿಲ್ಲಾದ್ಯಾಂತ ಸುಮಾರು ಮೂರು ದಿನಗಳ ಕಾಲ  ಕ್ರೀಡಾ ಜ್ಯೋತಿ ಸಂಚಾರ ಮಾಡಲಿದ್ದು ಈ ಕ್ರೀಡಾ ಜ್ಯೋತಿಯು ಪತ್ರಕರ್ತರು ಮತ್ತು ಸಮಾಜದಲ್ಲಿ ಶಾಂತಿ ಮತ್ತು ಭ್ರಾತೃತ್ವ ಹಾಗೂ ಸಹೋದರತೆಯ ಭಾವನೆಯನ್ನು ಬಿಂಬಿಸಿ ಶಾಂತಿಯ ಸಂದೇಶ ಸಾರಲಿದ್ದು ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ನಡೆಯುತ್ತಿರುವ ಈ ಕ್ರೀಡಾಕೂಟ ಮಹತ್ವದ್ದಾಗಿದೆ  ಎಂದು ಗೃಹ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ ಪರಮೇಶ್ವರ್ ಅವರು ತಿಳಿಸಿದರು.

 ನಗರದ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಕುಣಿಗಲ್, ತುರುವೇಕೆರೆ, ತಿಪಟೂರು ಸೇರಿದಂತೆ ಇತರೆ ತಾಲೂಕುಗಳಿಗೆ ಸಂಚಾರ ಮಾಡಲು ಹೊರಟ ಪತ್ರಕರ್ತರ ರಾಜ್ಯ ಮಟ್ಟದ ಕ್ರೀಡಾ ಜ್ಯೋತಿಗೆ ಚಾಲನೆ ನೀಡಿ ಮಾತನಾಡಿದ ಸಚಿವರು  ಕ್ರೀಡಾ ಮನೋಭಾವನೆ  ಎಲ್ಲರಲ್ಲಿಯೂ ಉಂಟಾಗುವುದರ ಜೊತೆಗೆ  ಭ್ರಾತೃತ್ವದ ಭಾವನೆ ಸಮಾಜದಲ್ಲಿ ಮೂಡಿಸುವುದು ಪತ್ರಕರ್ತರ ಗುರಿಯಾಗಿದ್ದು  ಈ ಕ್ರೀಡಾ ಜ್ಯೋತಿಯ ಸಂಚಾರದಿಂದ  ಶಾಂತಿ ಸ್ಥಾಪನೆ ಮಾಡಲು ಹೊರಟಿದ್ದಾರೆ ಎಂದರು.

 ನಾನು ಕೂಡ ಒಬ್ಬ ಕ್ರೀಡಾಪಟುವಾಗಿ ನಮ್ಮ ಜಿಲ್ಲೆಯಲ್ಲಿ ಪತ್ರಕರ್ತರ ರಾಜ್ಯಮಟ್ಟದ ಕ್ರೀಡಾಕೂಟ ನಡೆಯುತ್ತಿರುವುದು ನನಗೆ ಸಂತೋ?ವೆನಿಸುತ್ತಿದೆಈಗಾಗಲೇ ರಾಜ್ಯದಲ್ಲಿ ಮೂರನೇ ಬಾರಿಗೆ  ಮಿನಿ ಒಲಂಪಿಕ್ ನಡೆಸುವುದರ ಜೊತೆಗೆ ಸರ್ಕಾರವು ಕಲೆ ಮತ್ತು ಕ್ರೀಡೆಗಳನ್ನು ಪಕ್ಷಾತೀತವಾಗಿ ಪ್ರೋತ್ಸಾಹಿಸುತ್ತಿದೆ  ಬಹಳ ಒತ್ತಡ ಹಾಗೂ ಪ್ರತಿನಿತ್ಯ ತುರ್ತು ಸಂದರ್ಭಗಳನ್ನ ಎದುರಿಸುತ್ತಿರುವ ಪತ್ರಕರ್ತರು ತಮ್ಮ ಮನಸ್ಸನ್ನು ಉಲ್ಲಾಸ ಗೊಳಿಸುವ ಸಲುವಾಗಿ ಕ್ರೀಡೆಗಳಲ್ಲಿ ಭಾಗವಹಿಸಲು ಆಯೋಜನೆ ಮಾಡಿಕೊಂಡಿರುವ ಕ್ರೀಡಾಕೂಟ ನಮ್ಮ ಜಿಲ್ಲೆಗೆ ಎಮ್ಮೆ ಎನಿಸುತ್ತಿದೆ ಎಂದರು.

ಬೆಂಗಳೂರಿಗೆ ಪರ್ಯಾಯವಾಗಿ ತುಮಕೂರು ಅಭಿವೃದ್ಧಿ-ನನ್ನ  ಗುರಿ ತುಮಕೂರು ಜಿಲ್ಲೆಯು ಬೆಂಗಳೂರಿಗೆ ಕೇವಲ ೬೦ ಕಿಲೋಮೀಟರ್ ದೂರವಿದ್ದು ಬೆಂಗಳೂರು ನಗರಕ್ಕೆ ಪರ್ಯಾಯವಾಗಿ ಬೆಳೆಯುತ್ತಿರುವ ನಗರವಾಗಿದೆ ಈ ಹಿನ್ನೆಲೆಯಲ್ಲಿ ತುಮಕೂರು ನಗರವನ್ನ ಗ್ರೇಟರ್ ಬೆಂಗಳೂರು ಎಂದು ಕರೆಯಬೇಕಾಗುತ್ತದೆ ಈ ಕಾರಣಕ್ಕಾಗಿ ಡಿ. ೨ರಂದು ತುಮಕೂರು ನಗರದಲ್ಲಿ ನಡೆಯುವ ಸರ್ಕಾರ ಮಟ್ಟದ  ಮುಖ್ಯಮಂತ್ರಿಗಳ ಕಾರ್ಯಕ್ರಮದಲ್ಲಿ ತುಮಕೂರು ಜಿಲ್ಲೆಗೆ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ನೀಡುವಂತೆ ನಾನು ಮನವಿ ಮಾಡುತ್ತೇನೆ ಎಂದು ತಿಳಿಸಿದರು.

 26 ಜಿಲ್ಲೆಗಳಿಗೆ ತುಮಕೂರು ಜಿಲ್ಲೆ ಹೆಬ್ಬಾಗಿಲುನಂತಿದ್ದು ಮಧುಗಿರಿ, ಶಿರಾ, ಕೊರಟಗೆರೆ ಭಾಗದಲ್ಲಿ ವಿಮಾನ ನಿಲ್ದಾಣಕ್ಕೆ ಸೂಕ್ತ ಸ್ಥಳವಿದ್ದು ಹತ್ತು ಹಲವು ವೈಶಿ?ತೆ ವಿಶೇ?ತೆಗಳನ್ನ ಹೊಂದಿರುವ ತುಮಕೂರು ಜಿಲ್ಲೆಗೆ ಅಂತರಾಷ್ಟ್ರೀಯ ಮಟ್ಟದ ವಿಮಾನ ನಿಲ್ದಾಣ ನೀಡಿದರೆ ಬೆಂಗಳೂರಿಗೆ ಇರುವ  ಒತ್ತಡವನ್ನು ತಗ್ಗಿಸುವಂತಹಾಗುತ್ತದೆ ಮೊದಲಿನಿಂದಲೂ ತುಮಕೂರು ಜಿಲ್ಲೆ ವ್ಯವಹಾರಿಕವಾಗಿ ಇರುವ ಸ್ಥಳವಾಗಿದ್ದು ಇಲ್ಲಿ ಶೈಕ್ಷಣಿಕ ಸಂಸ್ಥೆಗಳು ಲಕ್ಷಾಂತರ ವಿದ್ಯಾರ್ಥಿಗಳು ಅತ್ಯಧುನಿಕ ಕೈಗಾರಿಕೆಗಳು ಕಾರ್ಮಿಕರು ಇದ್ದಾರೆ ರೀತಿಯಾಗಿ ಅನೇಕ ಮೊದಲುಗಳಿಗೆ ಕಾರಣವಾಗಿರುವ ತುಮಕೂರಿನ ಅಭಿವೃದ್ಧಿ ಪಡಿಸುವುದು ನನ್ನ ಧ್ಯೇಯವಾಗಿದೆ, ಗುರಿಯಾಗಿದೆ ಎಂದು ತಿಳಿಸಿದರು.

 ನವಂಬರ್-೨೩, ೨೪ರಂದು ನಡೆಯುವ ಪತ್ರಕರ್ತರ ರಾಜ್ಯಮಟ್ಟದ ಕ್ರೀಡಾಕೂಟ ಹಿನ್ನೆಲೆಯಲ್ಲಿ ತುಮಕೂರು ಜಿಲ್ಲೆಯ ಹತ್ತು ತಾಲೂಕುಗಳಲ್ಲಿ ಸಂಚಾರ ಮಾಡಲಿರುವ ಕ್ರೀಡಾ ಜ್ಯೋತಿ ಹಾಗೂ ಟ್ಯಾಬ್ಲೋವನ್ನ ಉದ್ಘಾಟಿಸಿದ ಗೃಹ ಸಚಿವರು ಟ್ಯಾಬ್ಲೋ ವಾಹನ ಓಡಿಸುವ ಮೂಲಕ ಎಲ್ಲರ ಗಮನ ಸೆಳೆದರು ಈ ಸಂದರ್ಭದಲ್ಲಿ ಗೃಹಮಂತ್ರಿ ಜಿ ಪರಮೇಶ್ವರ್ ಅವರ ಧರ್ಮಪತ್ನಿ ಕನಿಕಾ ಪರಮೇಶ್ವರ್  ಅವರು  ಟ್ಯಾಬ್ಲೋಗಿ ಹಸಿರು ನಿಶಾನೆ ತೋರಿದರು.

 ಈ ಸಂದರ್ಭದಲ್ಲಿ ನಗರ ಶಾಸಕ ಜ್ಯೋತಿ ಗಣೇಶ್, ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು, ಜಿಲ್ಲಾಧ್ಯಕ್ಷ ಚೀನಿ ಪುರುಷೋತ್ತಮ್, ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್, ಮಹಾನಗರ ಪಾಲಿಕೆ ಆಯುಕ್ತೆ ಬಿ.ಅಶ್ವಿಜಾ ಸೇರಿದಂತೆ ಅಪರ ಜಿಲ್ಲಾಧಿಕಾರಿ ಡಾ. ತಿಪ್ಪೇಸ್ವಾಮಿ ಪತ್ರಕರ್ತ ಸಂಘದ ಪದಾಧಿಕಾರಿಗಳು, ವಿವಿಧ ಪತ್ರಕರ್ತರು, ಸದಸ್ಯರುಗಳು ಇತರರು ಉಪಸ್ಥಿತರಿದ್ದರು.

- Advertisement -  - Advertisement -  - Advertisement - 
Share This Article
error: Content is protected !!
";