ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಗೃಹ ಸಚಿವ ಡಾ.ಜಿ ಪರಮೇಶ್ವರ್ ಅವರೇ ನಿಮಗೆ ನಾಚಿಕೆಯಾಗಬೇಕು ಎಂದು ಜೆಡಿಎಸ್ ವಾಗ್ದಾಳಿ ಮಾಡಿದೆ.
ಈ ರೀತಿ ಉಡಾಫೆಯಾಗಿ ಮಾತನಾಡಲು. ನೀವೊಬ್ಬ ಗೃಹ ಮಂತ್ರಿಯಾಗಿ, ಮಹಿಳಾ ಅಧಿಕಾರಿಗೆ ಪ್ರಾಣ ಬೆದರಿಕೆ ಹಾಕಿರುವ ಕಾಂಗ್ರೆಸ್ ಮುಖಂಡ ತಪ್ಪಿಸಿಕೊಂಡು ಹೋಗಿದ್ದಾನೆ ಎನ್ನಲು. ಸ್ವಲ್ಪವಾದರೂ ಲಜ್ಜೆ ಬೇಡವೇ! ಆ ಪುಡಿ ರೌಡಿ ತಪ್ಪಿಸಿಕೊಂಡು ಹೋಗುವವರೆಗೂ ಪೊಲೀಸರು ಮತ್ತು ನೀವು ಕಡೆಲೆಪುರಿ ತಿನ್ನುತ್ತಾ ಕಾಲ ಕಳೆಯುತ್ತಿದ್ದೀರಾ ?
ಕರ್ನಾಟಕ ಕಾಂಗ್ರೆಸ್ ಸರ್ಕಾರದಲ್ಲಿ ಕುಸಿದಿರುವ ಕಾನೂನು ಸುವ್ಯವಸ್ಥೆ ಬಗ್ಗೆ ರಾಜ್ಯದ ಜನ ಪ್ರತಿ ನಿತ್ಯ ಛೀ… ಥೂ…ಎಂದು ಉಗಿಯುತ್ತಿದ್ದಾರೆ. ರಾಜ್ಯದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆದಾಗಲೂ ಬೇಜವಾಬ್ದಾರಿ ಹೇಳಿಕೆಗಳನ್ನು ನೀಡುತ್ತಾ ತಾವೊಬ್ಬ ಅಸಮರ್ಥ ಗೃಹ ಸಚಿವ ಎಂಬುದನ್ನು ಪದೇ ಪದೇ ಸಾಬೀತುಪಡಿಸಿದ್ದೀರಿ. ಗೃಹ ಇಲಾಖೆಯಲ್ಲಿ ನಿಮ್ಮ ಸಾಧನೆ ಶೂನ್ಯ.
ನಿಮ್ಮ ಕಾಂಗ್ರೆಸ್ ಪಕ್ಷದ ಓರ್ವ ಗೂಂಡಾನನ್ನು ಹಿಡಿಯಲು ಸಾಧ್ಯವಾಗದ ಮೇಲೆ ನೀವು ಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಡುವುದು ರಾಜ್ಯದ ಜನರ ಹಿತದೃಷ್ಟಿಯಿಂದ ಒಳಿತು ಎಂದು ಜೆಡಿಎಸ್ ಸಲಹೆ ನೀಡಿದೆ.

