ಕರಾವಳಿ ಭಾಗದ ಕೋಮು ಗಲಭೆಗಳಲ್ಲಿ ಭಾಗಿಯಾದರ ವಿರುದ್ಧ ಕಠಿಣ ಕ್ರಮ- ಗೃಹ ಸಚಿವ ಪರಮೇಶ್ವರ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕರಾವಳಿ ಭಾಗದಲ್ಲಿ ನಡೆಯುತ್ತಿರುವ ಕೋಮುಗಲಭೆಗಳನ್ನು ಮುಲಾಜಿಲ್ಲದೇ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಗೃಹ ಸಚಿವ ಜಿ.ಪರಮೇಶ್ವರ್​ ತಿಳಿಸಿದ್ದಾರೆ.

- Advertisement - 

ಸದಾಶಿವನಗರ ನಿವಾಸದಲ್ಲಿ ಮಾತನಾಡಿದ ಅವರು, ಆ್ಯಂಟಿ ಕಮ್ಯೂನಲ್ ಫೋರ್ಸ್​ಗೆ ಯಾವ ರೀತಿ ಪವರ್ ಕೊಡಬೇಕು ಎಂಬುದನ್ನು ಚರ್ಚೆ ಮಾಡಿದ್ದೇವೆ. ಅಲ್ಲದೆ ತಕ್ಷಣ ಜಾರಿಯಾಗುವಂತೆ ಆದೇಶ‌ ಮಾಡಲಾಗಿದೆ. ಇಂಥಹ ಗಲಬೆಗಳ ವಿರುದ್ಧ ಕ್ರಮ ತಗೆದುಕೊಳ್ಳುತ್ತಾರೆ ಎಂದು ಡಾ ಪರಮೇಶ್ವರ್ ತಿಳಿಸಿದರು.

- Advertisement - 

ಕರಾವಳಿ ಭಾಗವನ್ನು ಬಹಳ ಸೂಕ್ಷ್ಮವಾಗಿ ತೆಗೆದುಕೊಂಡಿದ್ದೇವೆ. ಉಡುಪಿ, ಶಿವಮೊಗ್ಗ, ಮಂಗಳೂರು ಸೇರಿ ಕಮ್ಯೂನಲ್ ಚಟುವಟಿಕೆ ಆಗುವ ಸ್ಥಳಗಳನ್ನು ಸೂಕ್ಷ್ಮ ಪ್ರದೇಶಗಳಾಗಿ ಪರಿಗಣಿಸಿದ್ದೇವೆ ಎಂದರು.

ಆ ಭಾಗದ ವಾತಾವರಣ ಕೆಟ್ಟು ಹೋಗಿದೆ ಎನ್ನುವುದಕ್ಕಿಂತ ಕೆಡಿಸಿಬಿಟ್ಟಿದ್ದಾರೆ. ದ್ವೇಷ ಭಾವನೆ‌ ಮನೆ ಮಾಡಿದೆ. ಇದನ್ನು ತೊಡೆದು ಹಾಕಬೇಕಿದೆ. ಎಲ್ಲವೂ ಕೊನೆಯಾಗುತ್ತದೆ ಎಂಬ ವಿಶ್ವಾಸ ಇಟ್ಟುಕೊಂಡು ಆ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇವೆ ಎಂದು ಪರಮೇಶ್ವರ್​ ಹೇಳಿದರು.

- Advertisement - 

ರಾಜಕೀಯ ನಾಯಕರು ಘಟನೆಗಳ ಹಿಂದೆ ಇದ್ದಾರಾ? ಎನ್ನುವುದರ ಕುರಿತು  ಪರಿಶೀಲನೆ ಮಾಡಿತ್ತೇವೆ. ಹತ್ಯೆ ಆದ ತಕ್ಷಣ ನಾಲ್ವರನ್ನು ಬಂಧಿಸಿದ್ದು ಆರೋಪಿತರ ಹೇಳಿಕೆಗಳಲ್ಲಿ ಗಂಭೀರವಾದ ಮಾಹಿತಿಗಳು ಸಿಕ್ಕಿದ್ದು ಅಗತ್ಯ ಕ್ರಮ ಜರುಗಿಸಲಾಗುತ್ತದೆ ಎಂದರು.

 

 

Share This Article
error: Content is protected !!
";