ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ತಮ್ಮ ಹಾಗೂ ತಮ್ಮ ಕುಟುಂಬದ ಮೇಲೆ ಹನಿ ಟ್ರ್ಯಾಪ್ ಪ್ರಯತ್ನ ಆಗಿದೆ ಎಂದು ಸದನದ ಒಳಗೆ ಆರೋಪ ಮಾಡಿ ತಮ್ಮ ಬಳಿ ಇದಕ್ಕೆ ಸಾಕ್ಷ್ಯಾಧಾರಗಳೂ ಇದೆ ಎಂದು ತನಿಖೆಗೆ ಒತ್ತಾಯಿಸಿದ್ದ ಸಚಿವ ಕೆ.ಎನ್.ರಾಜಣ್ಣ ಅವರ
ಪ್ರಕರಣ ಕೂಡಾ ಕಾಂಗ್ರೆಸ್ ಸರ್ಕಾರ ಬಂದಾಗಿನಿಂದ ಜರುಗಿದ ಇತರೆ ಪ್ರಕರಣಗಳ ತನಿಖೆಯಂತೆ ಹಳ್ಳ ಹಿಡಿದಿದೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಆರೋಪಿಸಿದ್ದಾರೆ.
ಸಚಿವ ರಾಜಣ್ಣನವರೇ, ಒಂದು ವೇಳೆ ನಿಮ್ಮ ಆರೋಪ ನಿಜ ಆಗಿದ್ದರೆ, ತಮ್ಮ ಬಳಿ ಬಲವಾದ ಸಾಕ್ಷಿ ಇದ್ದರೆ, ಪ್ರಕರಣವನ್ನ ಸಿಬಿಐ ತನಿಖೆಗೆ ಹಸ್ತಾಂತರ ಮಾಡುವಂತೆ ಸಿಎಂ ಸಿದ್ದರಾಮಯ್ಯ ಹಾಗೂ ಗೃಹ ಸಚಿವ ಡಾ.ಜಿ.ಪರಮೇಶ್ವರ ಅವರನ್ನು ಒತ್ತಾಯಿಸುವೆ.
ಅಥವಾ ತಮ್ಮ ಆರೋಪ ಸುಳ್ಳು ಅಂತಾದರೆ, ಪ್ರಜಾಪ್ರಭುತ್ವದ ದೇಗುಲವಾದ ಸದನದ ಒಳಗೆ ಸುಳ್ಳು ಹೇಳಿದ್ದಕ್ಕೆ ರಾಜ್ಯದ ಜನರ ಕ್ಷಮೆ ಕೇಳಿ ಎಂದು ಅಶೋಕ್ ಆಗ್ರಹ ಮಾಡಿದ್ದಾರೆ.

