ನೆಟ್‍ಬಾಲ್ ಪಂದ್ಯಾವಳಿ ಹೊನ್ನಾಳಿ ಎಸ್‍ಎಂಎಸ್ ಕಾಲೇಜು ಪ್ರಥಮ

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ :
ಚಿತ್ರದುರ್ಗ ನಗರದ ಸರ್ಕಾರಿ ಕಲಾ ಕಾಲೇಜು ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ದಾವಣಗೆರೆ ವಿಶ್ವವಿದ್ಯಾನಿಲಯ ಅಂತರ ಕಾಲೇಜು ನೆಟ್ ಬಾಲ್ ಪಂದ್ಯಾವಳಿ ಮತ್ತು ಆಯ್ಕೆಯಲ್ಲಿ ಪುರುಷರು ಹಾಗೂ ಮಹಿಳಾ ವಿಭಾಗದಲ್ಲಿ ದಾವಣಗೆರೆ ಜಿಲ್ಲೆಯ ಹೊನ್ನಾಳಿಯ ಶ್ರೀ ಮೃತ್ಯುಂಜಯ ಶಿವಾಚಾರ್ಯ (ಎಸ್‍ಎಂಎಸ್) ಪ್ರಥಮ ದರ್ಜೆ ಕಾಲೇಜು
 ಪ್ರಥಮ ಸ್ಥಾನ ಪಡೆದಿದೆ.

ಪುರಷರ ವಿಭಾಗದಲ್ಲಿ ದಾವಣಗೆರೆ ಜಿಎಂಎಸ್ ಅಕಾಡೆಮಿ ದ್ವೀತಿಯ ಸ್ಥಾನ, ಚಿತ್ರದುರ್ಗ ಸರ್ಕಾರಿ ವಿಜ್ಞಾನ ಕಾಲೇಜು ತೃತೀಯ ಸ್ಥಾನ ಹಾಗೂ ನ್ಯಾಮತಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ನಾಲ್ಕನೇ ಸ್ಥಾನ ಪಡೆದಿದೆ.

- Advertisement - 

ಮಹಿಳಾ ವಿಭಾಗದಲ್ಲಿ ಚಿತ್ರದುರ್ಗ ಸರ್ಕಾರಿ ವಿಜ್ಞಾನ ಕಾಲೇಜು ದ್ವಿತೀಯ ಸ್ಥಾನ, ದಾವಣಗೆರೆಯ ಜಿಎಂಎಸ್ ಅಕಾಡೆಮಿ ತೃತೀಯ ಸ್ಥಾನ ಹಾಗೂ ನ್ಯಾಮತಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ನಾಲ್ಕನೇ ಸ್ಥಾನ ಪಡೆದಿದೆ.
ದಾವಣಗೆರೆ ವಿಶ್ವವಿದ್ಯಾನಿಲಯ ಅಂತರ ಕಾಲೇಜು ನೆಟ್‍ಬಾಲ್ ಪಂದ್ಯಾವಳಿಯಲ್ಲಿ ವಿಜೇತರಾದ ತಂಡಗಳಿಗೆ ಚಿತ್ರದುರ್ಗ ಅಹೋಬಲ ಟಿವಿಎಸ್ ಶೋರೂಮ್ ಮಾಲೀಕ ಅರುಣ್ ಬಹುಮಾನ ವಿತರಿಸಿದರು.

ವಿಶ್ವವಿದ್ಯಾನಿಲಯದ ಅಂತರ ಕಾಲೇಜು ಪಂದ್ಯಾವಳಿಯಲ್ಲಿ ಅತ್ಯುತ್ತಮವಾಗಿ ಪ್ರದರ್ಶನ ನೀಡಿದ ಕ್ರೀಡಾ ಸಾಮಾಥ್ರ್ಯ ಮೆರೆದ ತಂಡಗಳನ್ನು ರಾಜ್ಯಮಟ್ಟಕ್ಕೆ ಆಯ್ಕೆ ಮಾಡಲಾಗುವುದು.

- Advertisement - 

ಈ ಸಂದರ್ಭದಲ್ಲಿ ಸರ್ಕಾರಿ ಕಲಾ ಕಾಲೇಜು ಪ್ರಾಂಶುಪಾಲ ಡಾ.ಜೆ.ಕರಿಯಪ್ಪ ಮಾಳಿಗೆ, ಕಾಲೇಜು ಅಧ್ಯಾಪಕರ ಸಂಘದ ಜಂಟಿ ಕಾರ್ಯದರ್ಶಿ ಡಾ.ಪಿ.ಎಸ್.ಮೇಘನಾ, ದೈಹಿಕ ಶಿಕ್ಷಣ ನಿರ್ದೇಶಕ ಡಾ.ಡಿ.ಆರ್.ಪ್ರಸನ್ನ ಕುಮಾರ್, ಅರ್ಥಶಾಸ್ತ್ರ ಪ್ರಾಧ್ಯಾಪಕ ಭಾನುಪ್ರಕಾಶ್,  ಪತ್ರಾಂಕಿತ ವ್ಯವಸ್ಥಾಪಕ ಮಾರ್ಟಿನ್ ಸ್ಯಾಮುಯೆಲ್ ಡಬ್ಲ್ಯೂ, ಗ್ರಂಥಾಲಯಾಧಿಕಾರಿ ಡಾ.ತಿಪ್ಪೇಸ್ವಾಮಿ ಸೇರಿದಂತೆ ಮತ್ತಿತರರು ಇದ್ದರು.

 

 

Share This Article
error: Content is protected !!
";