ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಹುತಾತ್ಮ ದಿನದ ಅಂಗವಾಗಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಕೇಂದ್ರ ಕಚೇರಿಯಲ್ಲಿ ಇಂದು ಸರ್ವೋದಯ ದಿನ ಆಚರಿಸಲಾಯಿತು.
ಗಾಂಧಿ ಅಂಗಳದಲ್ಲಿ ಇರುವ ಪ್ರತಿಮೆಗೆ ಗೌರವ ಅರ್ಪಿಸಿ, ಮೌನ ಆಚರಿಸಲಾಯಿತು. ಇಲಾಖೆಯ ಜಂಟಿ ನಿರ್ದೇಶಕರಾದ ಮಂಜುನಾಥ ಡಿ.ಡೊಳ್ಳಿನ, ಪಲ್ಲವಿ ಹೊನ್ನಾಪುರ, ಸಿದ್ಧೇಶ್ವರಪ್ಪ ಜಿ.ಬಿ. ಸಿ.ಆರ್.ನವೀನ್, ಉಪನಿರ್ದೇಶಕ ಬಿ.ಕೆ.ರಾಮಲಿಂಗಪ್ಪ,
ಚಲನಚಿತ್ರ ನಟಿಯರಾದ ವನಿತಾವಾಸು, ಪದ್ಮಾ ವಾಸಂತಿ, ಚಲನಚಿತ್ರ ನಿರ್ದೇಶಕ ಲಿಂಗದೇವರು, ಕಲಾವಿದ ಗುರುರಾಜ್ ಕಲಾಲಬಂಡಿ ಸೇರಿದಂತೆ ಅನೇಕ ಗಣ್ಯರು, ಅಧಿಕಾರಿಗಳು, ಸಿಬ್ಬಂದಿ ಉಪಸ್ಥಿತರಿದ್ದರು.