ಚಂದ್ರವಳ್ಳಿ ನ್ಯೂಸ್, ಚಳ್ಳಕೆರೆ:
ಹಿರಿಯರನ್ನು ಗೌರವಿಸುವ ಮೂಲಕ ಅವರ ಸೇವೆಯನ್ನು ಸದಾಸ್ಮರಿಸಬೇಕೆಂದು ಪ್ರಧಾನಸಿವಿಲ್ ನ್ಯಾಯಾಧೀಶೆ ಎಚ್.ಆರ್.ಹೇಮಾ ತಿಳಿಸಿದರು.
ಅವರು, ನಗರದ ತಾಲೂಕು ಕಚೇರಿ ಸಭಾಂಗಣದಲ್ಲಿ ಹಿರಿಯ ನಾಗರೀಕರ ದಿನಾಚರಣೆ ಕಾರ್ಯಕ್ರಮವನ್ನು ಗಿಡಕ್ಕೆ ನೀರು ಎರೆಯುವ ಮೂಲಕ ಚಾಲನೆ ನೀಡಿ ಮಾತನಾಡಿದರು.
ಪ್ರತಿಯೊಬ್ಬರೂ ತಮ್ಮ ಮನೆಯಲ್ಲಿ ಹಿರಿಯರಿಗೆ ಗೌರವ ಕೊಡಬೇಕು. ಯಾವ ವ್ಯಕ್ತಿ ಹಿರಿಯರಿಗೆ ಅಗೌರವ ಉಂಟು ಮಾಡುತ್ತಾನೋ ಅಂತಹ ವ್ಯಕ್ತಿಯನ್ನು ಎಲ್ಲರೂ ಸೇರಿ ದೂರವಿಡಬೇಕಾಗುತ್ತದೆ. ಹಿರಿಯ ನಾಗರೀಕರು ನಮ್ಮ ಸಮಾಜದ ಆಸ್ತಿ ಎಂದರು.
ಕಂದಾಯ ಇಲಾಖೆಯಿಂದ ಗ್ರಾಮೀಣ ಭಾಗದ ಅನೇಕ ಹಿರಿಯರಿಗೆ ಮಂಜೂರಾದ ವಿಧಾನವೇತನ, ವೃದ್ದಾಪ್ಯವೇತನ ಮುಂತಾದ ಯೋಜನೆಗಳ ಮಂಜೂರಾತಿ ಪತ್ರವನ್ನು ವಿತರಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ತಳಕು ನಾಡಕಚೇರಿ ಉಪತಹಶೀಲ್ದಾರ್ ಮಹಮ್ಮದ್‌ರಫೀ ಪ್ರತಿವರ್ಷ ಕಂದಾಯ ಇಲಾಖೆಇಂತಹ ಕಾರ್ಯಕ್ರಮಗಳ ಮೂಲಕ ಸರ್ಕಾರದಿಂದ ಮಂಜೂರಾದ ವಿವಿಧ ಯೋಜನೆಗಳ ಆದೇಶ ಪ್ರತಿಯನ್ನು ವಿತರಣೆ ಮಾಡಲಾಗುತ್ತಿದೆ. ಹಿರಿಯರ ಸೇವೆಯ ಬಗ್ಗೆ ಕಂದಾಯ ಇಲಾಖೆಗೆ ಅಪಾರವಾದ ಗೌರವವಿದೆ ಎಂದರು.
ಕಾರ್ಯಕ್ರಮದಲ್ಲಿ ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ಕೆ.ಎಂ.ನಾಗರಾಜು, ಉಪಾಧ್ಯಕ್ಷ ಬಿ.ಪಾಲಯ್ಯ, ಪ್ರಧಾನ ಕಾರ್ಯದರ್ಶಿ ಎಂ.ಸಿದ್ದರಾಜು, ಖಜಾಂಚಿ ಟಿ.ರುದ್ರಯ್ಯ, ಮಧುಮತಿ, ಗಿರೀಶ್ ನಾಯಕನಹಟ್ಟಿ ನಾಡಕಚೇರಿ ಉಪತಹಶೀಲ್ದಾರ್ ಶಕುಂತಲ, ಪರಶುರಾಮಪುರ ನಾಡಕಚೇರಿ ಉಪತಹಶೀಲ್ದಾರ್ ಅನ್ನಪೂರ್ಣಮ್ಮ ಮುಂತಾದವರು ಉಪಸ್ಥಿತರಿದ್ದರು.