ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಹಿರಿಯೂರು ತೋಟಗಾರಿಕೆ ಮಹಾವಿದ್ಯಾಲಯ ಮತ್ತು ಬಬ್ಬೂರು ಫಾರಂ ಕೃಷಿ ವಿಜ್ಞಾನ ಕೇಂದ್ರ ವತಿಯಿಂದ ತೋಟಗಾರಿಕಾ ಬೆಳೆಗಳಲ್ಲಿ ನರ್ಸರಿ ನಿರ್ವಹಣೆ ಕುರಿತು ಇದೇ ಸೆಪ್ಟೆಂಬರ್ 30 ರಿಂದ ಡಿಸೆಂಬರ್ 30 ರವರೆಗೆ ಕೌಶಲ್ಯಾಧಾರಿತ ತರಬೇತಿ ನೀಡಲಾಗುತ್ತಿದ್ದು, ಆಸಕ್ತರಿಂದ ಅರ್ಜಿ ಅಹ್ವಾನಿಸಲಾಗಿದೆ.
ತರಬೇತಿಯಲ್ಲಿ ತೋಟಗಾರಿಕಾ ಬೆಳೆಗಳಲ್ಲಿ ಸಸ್ಯೋತ್ಪಾದನೆ ವಿಧಗಳಾದ ಕಸಿ, ಗೂಟಿ, ಕಾಂಡದ ತುಂಡುಗಳಿಂದ ಸಸ್ಯೋತ್ಪಾದನೆ ಮಾಡುವುದು ಹಾಗೂ ಇನ್ನಿತರೆ ಸಸ್ಯೋತ್ಪಾದನೆ ವಿಧಾನಗಳು ಮತ್ತು ಸಸ್ಯಾಗಾರದ ನಿರ್ವಹಣೆ ಕುರಿತು ಮಾಹಿತಿ ನೀಡಲಾಗುವುದು.
ಈ ತರಬೇತಿಯಲ್ಲಿ ಭಾಗವಹಿಸಲು ಇಚ್ಛೆಯುಳ್ಳವರು ತರಬೇತಿ ಶುಲ್ಕ ಒಟ್ಟು ರೂ.9,000 ಗಳನ್ನು ಪಾವತಿಸಿ ಸೆ. 29 ರೊಳಗೆ ದೂರವಾಣಿ ಮುಖಾಂತರ ಅಥವಾ ಖುದ್ದಾಗಿ ಈ ಕೆಳಕಂಡ ವಿಳಾಸಕ್ಕೆ ಸಂಪರ್ಕಿಸಿ ತಮ್ಮ ಹೆಸರು ನೋಂದಾಯಿಸ ಬಹುದಾಗಿದೆ. ಮೊದಲು ನೋಂದಾಯಿಸಿದವರಿಗೆ ಮೊದಲ ಆದ್ಯತೆ ನೀಡಲಾಗುವುದು.
ಹೆಚ್ಚಿನ ಮಾಹಿತಿಗಾಗಿ ಡಾ. ಶ್ರೀಧರ ಆರ್ (ಸಹಾಯಕ ಪ್ರಾದ್ಯಾಪಕರು), ತೋಟಗಾರಿಕೆ ಮಹಾವಿದ್ಯಾಲಯ, ಹಿರಿಯೂರು, ಮೊಬೈಲ್ ಸಂಖ್ಯೆ 9449983747, ಡಾ. ಮಹಾಂತೇಶ ಪಿ.ಎಸ್ (ತೋಟಗಾರಿಕೆ ವಿಜ್ಞಾನಿ), ಕೃಷಿ ವಿಜ್ಞಾನ ಕೇಂದ್ರ, ಬಬ್ಬೂರು ಫಾರಂ, ಹಿರಿಯೂರು. ಮೊಬೈಲ್ ಸಂಖ್ಯೆ 8088948308 ಹಾಗೂ ಡಾ. ಲತಾ ಎಸ್ (ಸಹಾಯಕ ಪ್ರಾದ್ಯಾಪಕರು), ತೋಟಗಾರಿಕೆ ಮಹಾವಿದ್ಯಾಲಯ, ಮೊಬೈಲ್ ಸಂಖ್ಯೆ 8095836162 ಗೆ ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.