ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ತೋಟಗಾರಿಕೆ ಇಲಾಖಾ ಅಧೀನದ ತೋಟಗಾರಿಕೆ ತರಬೇತಿ ಕೇಂದ್ರಕ್ಕೆ ರೈತ ಮಕ್ಕಳಿಗೆ 10 ತಿಂಗಳ ತೋಟಗಾರಿಕೆ ತರಬೇತಿಗಾಗಿ ಅರ್ಜಿ ಸ್ವೀಕೃತಿ ದಿನಾಂಕವನ್ನು ಏಪ್ರಿಲ್ 28 ಮಧ್ಯಾಹ್ನ 12 ಗಂಟೆಯವರೆಗೆ ವಿಸ್ತರಿಸಲಾಗಿದೆ.
ತೋಟಗಾರಿಕೆ ತರಬೇತಿಗೆ ಸಂದರ್ಶನವು ಏಪ್ರಿಲ್ 28ರ ಮಧ್ಯಾಹ್ನ 3 ಗಂಟೆಗೆ ಚಿತ್ರದುರ್ಗ ನಗರದ ತೋಟಗಾರಿಕೆ ಉಪನಿರ್ದೇಶಕರ ಕಚೇರಿಯ ತೋಟಗಾರಿಕೆ ಇಲಾಖಾ ಸಭಾಂಗಣದಲ್ಲಿ ನಿಗಧಿಯಾಗಿದೆ.
ತರಬೇತಿಗೆ ಆಯ್ಕೆಯಾದವರಿಗೆ ಐಯ್ಯನಹಳ್ಳಿ ತೋಟಗಾರಿಕೆ ತರಬೇತಿ ಕೇಂದ್ರದಲ್ಲಿ 2025 ರ ಮೇ 02 ರಿಂದ 2026 ರ ಫೆ.28 ರವರೆಗೆ 10 ತಿಂಗಳ ಕಾಲ ತೋಟಗಾರಿಕೆ ತರಬೇತಿ ನೀಡಲಾಗುವುದು ಎಂದು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ತಿಳಿಸಿದ್ದಾರೆ.