ಹೋಟೆಲ್, ಬೇಕರಿ ಹಾಗೂ ಅಂಗಡಿಗಳ ಮೇಲೆ ದಿಢೀರ್ ದಾಳಿ

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ನಗರದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಲ್ಲಿನ ಹೋಟೆಲ್, ಬೇಕರಿ ಹಾಗೂ ಅಂಗಡಿಗಳ ಮೇಲೆ ನಗರ ಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ನಸರುಲ್ಲಾ ಹಾಗೂ ಅಧಿಕಾರಿಗಳ ತಂಡ ಬುಧವಾರ ದಾಳಿ ನಡೆಸಿ ಪರಿಶೀಲಿಸಿತು.
ವೇಳೆ ಅಂಗಡಿಗಳಲ್ಲಿ ಸ್ವಚ್ಛತೆ ಇಲ್ಲದಿರುವುದು. ಅಸುರಕ್ಷತವಾಗಿ ತೆರೆದಿಟ್ಟ ಹಾಗೂ ಅವಧಿ ಮೀರಿದ ಆಹಾರ ಪದಾರ್ಥಗಳನ್ನು ಮಾರಾಟ ಮಾಡುತ್ತಿರುವುದು ಕಂಡುಬಂದಿತು.

ಅಂಗಡಿಗಳಿಂದ ಕಟ್ಟುಹೋದ ಆಹಾರ ಪದಾರ್ಥಗಳು ಹಾಗೂ ನಿಷೇಧಿಸಿದ ಪಾಸ್ಟಿಕ್ಗಳನ್ನು ನಗರ ಸಭೆ ಅಧಿಕಾರಿಗಳು ವಶಪಡಿಸಿಕೊಂಡರು. ಮಾಲಿಕರಿಗೆ ದಂಡ ವಿಧಿಸಿ ತಾಜಾ ಆಹಾರ ಪದಾರ್ಥಗಳನ್ನು ಮಾರಾಟ ಮಾಡುವಂತೆ ಅಧಿಕಾರಿಗಳು ತಿಳಿ ಹೇಳಿದರು.

ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಡಾ.ಶಾಮ್ಭಟ್ ಅವರ ತಂಡ ಮಾರ್ಚ್ 27 ರಂದು ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಅಂಗಡಿ ಬೇಕರಿಗಳಲ್ಲಿ ಅವಧಿ ಮುಗಿದ ತಂಪುಪಾನೀಯಗಳನ್ನು ಮಾರಾಟ ಮಾಡುತ್ತಿರುವುದು ಗಮನಕ್ಕೆ ಬಂದಿದ್ದನ್ನು ಸ್ಮರಿಸಬಹುದು.

ಬಸ್ ನಿಲ್ದಾಣದ ಕೆಲವು ಅಂಗಡಿಗಳಲ್ಲಿ ಪ್ರಯಾಣಿಕರಿಗೆ ಕಳೆಪೆ ಗುಣಮಟ್ಟ ಕುಡಿಯುವ ನೀರಿನ ಬಾಟೆಲ್ಗಳನ್ನು ಮಾರಾಟ ಮಾಡುತ್ತಿದ್ದಾರೆ. ಬಸ್ ನಿಲ್ದಾಣ ಸಾರ್ವಜನಿಕ ಸ್ಥಳವಾಗಿದ್ದು, ತಂಬಾಕು ನಿಷೇಧಿತ ಪ್ರದೇಶವಾಗಿದೆ. ಆದಾಗ್ಯೂ ಕೆಲ ಅಂಗಡಿಗಳಲ್ಲಿ ಬಿಡಿ, ಸಿಗರೇಟು ಸೇರಿದಂತೆ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುತ್ತಾರೆ. ಬಗ್ಗೆ ಕೆ.ಎಸ್.ಆರ್.ಟಿ.ಸಿ ಅಧಿಕಾರಿಗಳ ಗಮನಕ್ಕೆ ತಂದರು ಅಧಿಕಾರಿಗಳು ಬೇಜಬ್ದಾರಿ ತೋರುತ್ತಾರೆಎಂದು ಪ್ರಯಾಣಿಕ ಎಸ್.ಪ್ರದೀಪ್ ಬೇಸರ ವ್ಯಕ್ತಪಡಿಸಿದ್ದಾರೆ.

ಉಪ ಲೋಕಾಯುಕ್ತ ನ್ಯಾಯಮೂರ್ತಿ ಕೆ.ಎನ್.ಫಣೀಂದ್ರ ಅವರ ಭೇಟಿ ನೀಡಿದ ನಂತರ ಬಸ್ ನಿಲ್ದಾಣದಲ್ಲಿ ಸ್ಪಲ್ಪ ಮಟ್ಟಿನ ಸ್ವಚ್ಚತೆ ಕಾಪಾಡಿಕೊಳ್ಳಲಾಗುತ್ತಿದೆ. ಆದರೆ ಅಂಗಡಿ, ಬೇಕರಿ ಹಾಗೂ ಹೋಟೆಲ್ಗಳಲ್ಲಿ ಸ್ವಚ್ಛತೆ ಹಾಗೂ ಗುಣಮಟ್ಟ ಕಾಪಾಡಿಕೊಳ್ಳುತ್ತಿಲ್ಲ ಎಂದು ಸಾರ್ವಜನಿಕರು ದೂರುವುದು ಸಾಮಾನ್ಯವಾಗಿದೆ.

ದಾಳಿಯ ವೇಳೆ ನಗರ ಸಭೆಯ ಪರಿಸರ ಇಂಜಿನಿಯರ್ ಜಾಫರ್, ಆರೋಗ್ಯ ನಿರೀಕ್ಷರಾದ ಹೀನಾ ಕೌಸರ್, ಭಾರತಿ, ನಾಗರಾಜ್, ಜಯಪ್ರಕಾಶ್, ರುಕ್ಮಿಣಿ, ಸೇರಿದಂತೆ ಮತ್ತಿರರು ಉಪಸ್ಥಿತರಿದ್ದರು.

 

Share This Article
error: Content is protected !!
";