ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ನನ್ನ ಮನೆ ಆಗಿರಬೇಕು ಹೀಗಿರಬೇಕು ಎಂದು ಏನೇನೋ ಕನಸು ಕಟ್ಟಿಕೊಂಡು ಮನೆ ನಿರ್ಮಿಸಲು ಹೋಗಿ ಇಕ್ಕಟ್ಟಿಗೆ ಸಿಲುಕಿರುವ ಘಟನೆ ದೊಡ್ಡಬಳ್ಳಾಪುರದ ಶಾಂತಿನಗರದಲ್ಲಿ ನಡೆದಿದೆ.
ದೊಡ್ಡಬಳ್ಳಾಪುರ ನಗರದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಯುವಕ ಪುಷ್ಪಕ್ ರಾಜ್ ತಮ್ಮ ನೋವನ್ನು ತೋಡಿಕೊಂಡಿದ್ದಾರೆ. ನಾನು ದೊಡ್ಡಬಳ್ಳಾಪುರದಲ್ಲಿ ಓದಿದೆ, ಬೆಂಗಳೂರಿನಲ್ಲಿ ಇಂಜಿನಿಯರಿಂಗ್ ಮಾಡಿ ಜರ್ಮನಿಯಲ್ಲಿ ಮಾಸ್ಟರ್ ಡಿಗ್ರಿ ಮಾಡಿ 2018ರಿಂದ ಇಲ್ಲಿವರೆಗೂ ಜರ್ಮನಿಯಲ್ಲೇ ಇದ್ದೀನಿ. ಹಾಗಾಗಿ ದೊಡ್ಡಬಳ್ಳಾಪುರಕ್ಕೆ ಬಂದು ಹೋಗುತ್ತೇನೆ. ನನ್ನ ತಂದೆ ದೊಡ್ಡಬಳ್ಳಾಪುರದ ಶಾಂತಿನಗರದಲ್ಲಿ ವಾಸವಾಗಿದ್ದರು. 2022ರಲ್ಲಿ ನನ್ನ ತಂದೆ ಮರಣ ಹೊಂದಿದರು. ಅನಂತರ ಆ ಮನೆಯನ್ನು ಕೆಡವಿ ಹೊಸ ಮನೆ ಕಟ್ಟಿಸಬೇಕೆಂದು ಆಸೆಪಟ್ಟು ಗಾರೆ ಮೇಸ್ತ್ರಿ ಭದ್ರಾವತಿ ಮಂಜುನಾಥ್ ಆರ್ ಅವರಿಗೇ ನಂಬಿಕೆ ಇಟ್ಟು ಮನೆ ಕಟ್ಟಲು ಒಪ್ಪಿಸಿದೆ. ಆದರೆ, ಅವರು ನಂಬಿಕೆ ದ್ರೋಹ ಮಾಡಿದ್ದಾರೆ ಎಂದು ಆಕ್ರೊಶ ಹೊರಹಾಕಿದ್ದಾರೆ.
ಇದು ನನ್ನ ನೋವಿನ ಮಾತು. ಇಂಥ ಗಾರೆ ಮೇಸ್ತ್ರಿಗಳಿಗೆ ಯಾರೂ ಮನೆ ಕಟ್ಟಿಕೊಡಲು ಒಪ್ಪಿಸಬೇಡಿ. ನನ್ನ ಡ್ರಿಮ್ ಹೌಸ್ ಹಾಳಾಯ್ತು. ನಾವು ಕೊಟ್ಟ ಹಣದ ಮೌಲ್ಯಕ್ಕೆ ತಕ್ಕಂತೆ ಅವರು ನಮಗೆ ಮನೆ ಕಟ್ಟಿಕೊಡಲಿಲ್ಲ. ಅಷ್ಟು ಆಸೆಪಟ್ಟು ತಂದೆ ಹೋದಮೇಲೆ ಕಟ್ಟಿಸಿದ ಮನೆ ಆ ಮನಗೆ ನನ್ನ ತಂದೆಯ ಹೆಸರನ್ನೇ ಇಟ್ಟಿದ್ದೇವೆ. ವಿದೇಶದಲ್ಲಿ ದುಡಿದು ಮನೆಗೆ ಬಂಡವಾಳ ಹಾಕಿದ್ದೇನೆ. ಎಲ್ಲವೂ ವ್ಯರ್ಥ ಆಯ್ತು. ದೊಡ್ಡಬಳ್ಳಾಪುರದಲ್ಲಿ ಇಂಥ ಮೇಸ್ತ್ರಿಗಳಿಗೆ ಯಾವ ಬಿಲ್ಡಿಂಗ್ ಗಳನ್ನು ಕೊಡಬೇಡಿ. ಯಾವುದೇ ಕಾರಣಕ್ಕೂ ಕ್ಯಾಶ್ ವ್ಯವಹಾರ ಮಾಡಬೇಡಿ ಎಂದು ಹೇಳಿದರು.
ಭದ್ರಾವತಿ ಮಂಜುನಾಥ್. ಆರ್ ಅಂತ ಗಾರೆ ಮೇಸ್ತ್ರಿಗೆ ಒಪ್ಪಂದ ಕೊಟ್ಟು ಮೋಸ ಹೋದೆವು. ಸಾಕಷ್ಟು ನೊಂದು ನಾವು ಕೋರ್ಟ್ ಮೆಟ್ಟಿಲೇರಿದೆವು. ಅಲ್ಲಿ ನಮಗೆ ನ್ಯಾಯ ಸಿಕ್ಕಿದೆ. ಕೇಸ್ ನಮ್ಮಂತೆ ಆಗಿದೆ. ಬಿಲ್ಡಿಂಗ್ ಕಾಮಗಾರಿ ಕಳಪೆ ಎಂದು ಕೋರ್ಟ್ ಗೆ ಮನವರಿಕೆ ಆಗಿದೆ. 10ರಿಂದ 12 ಲಕ್ಷ ಪರಿಹಾರ ಕೊಡುವಂತೆ ಗಾರೆ ಮೇಸ್ತ್ರಿ ಭದ್ರಾವತಿ ಮಂಜುನಾಥ್ ಗೆ ಕೋರ್ಟ್ ಆದೇಶ ನೀಡಿದೆ ಎಂದು ತಿಳಿಸಿದರು.
ಇಷ್ಟಾದರೂ ಗಾರೆ ಮೇಸ್ತ್ರಿ ಮಂಜುನಾಥ್ ನಮಗೆ ಹಣನೂ ಕೊಟ್ಟಿಲ್ಲ ಜೊತೆಗೆ ಮನೆ 2 ಕೀ ಕೂಡ ಅವರೇ ಇಟ್ಟುಕೊಂಡಿದ್ದಾರೆ. ಮನೆ ನಿರ್ಮಾಣಕ್ಕೆ 40 ಲಕ್ಷ ಹಣ ನೀಡಿದ್ದೇವೆ. ಬ್ಯಾಂಕ್ ಖಾತೆ ಮೂಲಕ ಹಣ ವರ್ಗಾವಣೆ ಮಾಡಿದ್ದೇವೆ. ಹಾಗಾಗಿ ನಮಗೆ ಕೋರ್ಟ್ ನಲ್ಲಿ ನ್ಯಾಯ ಸಿಕ್ಕಿದೆ. ಇಲ್ಲದಿದ್ದರೆ ನಮಗೆ ನ್ಯಾಯ ಸಿಗುತ್ತಿರಲಿಲ್ಲ. ಮನೆ ಪೂರ್ಣಗೊಂಡು ಒಂದು ವರ್ಷ ಕಳೆದರೂ ನಮಗೆ ಇನ್ನೂ ಮನೆ ಸಿಕ್ಕಿಲ್ಲ. ಅಷ್ಟೊಂದು ದುಡ್ಡು ಕೊಟ್ಟು ನೆಮ್ಮದಿಯೂ ಇಲ್ಲ, 40 ಲಕ್ಷ ಹಾಕಿ ಕಟ್ಟಿರುವ ಬಿಲ್ಡಿಂಗ್ ಗೆ 40 ಲಕ್ಷ ವ್ಯಾಲ್ಯೂ ಇಲ್ಲ. ಅಷ್ಟು ದುಡ್ಡು ಪಡೆದು ಮನೆ ಕ್ವಾಲಿಟಿ ಬರಲಿಲ್ಲ.
ಜೀವನದಲ್ಲಿ ಒಂದೇ ಸಲ ಮನೆ ಕಟ್ಟಲು ಆಗೋದು. ನಾವು ಮೋಸ ಹೋದೇವು. ಇತ್ತ ಹಣವೂ ಹೋಯ್ತು ಅತ್ತ ಮನೆಯ ಸಾಮರ್ಥ್ಯವೂ ಹೋಯ್ತು. ಮನೆ ಬಿರುಕು ಬಿಟ್ಟಿದೆ, ಯಾವಾಗ ಬೇಕಾದರೂ ಬಿದ್ದುಹೋಗಬಹುದು. ಹಾಗಾಗಿ ಮನನೊಂದು ನನಗೆ ಆದ ರೀತಿ ಬೇರೆ ಯಾರಿಗೂ ಆಗಬಾರದು ಎಂದು ಈ ಮೂಲಕ ತಿಳಿಸಲು ಇಚ್ಛೆಪಡುತ್ತೇನೆ ಎಂದು ಮಾಧ್ಯಮದವರ ಮುಂದೆ ಅಳಲು ತೋಡಿಕೊಂಡರು.

