ಚಂದ್ರವಳ್ಳಿ ನ್ಯೂಸ್, ಶಿರಾ:
ಯಾವುದೇ ಸೈಕ್ಲೋನ್ ಎಫೆಕ್ಟ್ ಅಥವಾ ಭಾರಿ ಪ್ರಮಾಣದಲ್ಲಿ ಮಳೆ ಬೀಳದಿದ್ದರೂ ಕುಗ್ರಾಮದ ಕೆರೆಯೊಂದು ಬೇಸಿಗೆ ಸಂದರ್ಭದಲ್ಲಿ ಸಂಪೂರ್ಣ ಭರ್ತಿಯಾಗಿ ಕೋಡಿ ಹರಿದಿದೆ.
ಕೆರೆ ಭರ್ತಿಯಾಗಿ ಕೋಡಿ ಹರಿದ ಹಿನ್ನೆಲೆಯಲ್ಲಿ ಆ ಕ್ಷೇತ್ರದ ಜನಪ್ರತಿ ನೇತೃತ್ವದಲ್ಲಿ ಇಡೀ ಗ್ರಾಮಸ್ಥರು ಕೆರೆ ಬಾಗಿನ ಅರ್ಪಿಸಿ ಸಂಭ್ರಮಿಸಿದ ಘಟನೆ ಜರುಗಿದೆ.
ಶಿರಾ ತಾಲ್ಲೂಕಿನ ಪ್ರಸಿದ್ಧ ಮಾಗೋಡು ಕೆರೆ ಭರ್ತಿಯಾಗಿ ಕೋಡಿ ಹರಿದಿದೆ. ಹೇಮಾವತಿ ಡ್ಯಾಂ ನೀರಿನಿಂದ ಪ್ರಸಿದ್ಧ ಮಾಗೋಡು ಕೆರೆಗೆ ನೀರನ್ನು ಜಲ ಭಗೀರಥ, ಶಿರಾ ಕ್ಷೇತ್ರದ ಶಾಸಕರು ಹಾಗೂ ರಾಜ್ಯ ಸರ್ಕಾರದ ದೆಹಲಿ ಪ್ರತಿನಿಧಿ ಟಿ.ಬಿ.ಜಯಚಂದ್ರ ಅವರ ಪರಿಶ್ರಮದಿಂದಾಗಿ ಕೆರೆಗೆ ನೀರು ಹರಿಸಿದ್ದರಿಂದಾಗಿ ಕೆರೆ ತುಂಬಿರುವ ಹಿನ್ನೆಲೆಯಲ್ಲಿ ಜಯಚಂದ್ರ ಮತ್ತು ಅವರ ಪತ್ನಿ ಸೇರಿದಂತೆ ಗ್ರಾಮದ ಜನತೆ ಅದ್ಧೂರಿಯಾಗಿ ಭಾನುವಾರ ಗಂಗಾಪೂಜೆ ನೆರವೇರಿಸಿ ಬಾಗಿನ ಅರ್ಪಣೆ ಮಾಡಿ ಸಂಭ್ರಮಿಸಿದರು.
ಈ ವೇಳೆ ಶಾಸಕ ಟಿ.ಬಿ.ಜಯಚಂದ್ರ ಅವರ ಪರಿಶ್ರಮಕ್ಕೆ ಮಾಗೋಡು ಮತ್ತು ಸುತ್ತಮುತ್ತಲಿನ ಮುಖಂಡರು ಗ್ರಾಮಸ್ಥರು ಜಯಚಂದ್ರ ಮತ್ತು ಅವರ ಪತ್ನಿ ಅವರಿಗೆ ಅಭಿನಂದನೆ ಮತ್ತು ಗೌರವ ಸಮರ್ಪಣೆ ಮಾಡಿದರು.