ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಮಧ್ಯ ಕರ್ನಾಟಕದ ಏಕೈಕ ರೈತರ ಜೀವನಾಡಿ ವಾಣಿವಿಲಾಸ ಜಲಾಶಯದ ನೀರಿನ ಮಟ್ಟ ಮಾರ್ಚ್-17ರಂದು ಸೋಮವಾರ ಬೆಳಿಗ್ಗೆ 8 ಗಂಟೆ ವೇಳೆಗೆ 127.50 ಅಡಿ ಇದೆ.
2025ರ ಜನವರಿ-11ರಂದು ಶನಿವಾರ ವಿವಿ ಸಾಗರ ಭರ್ತಿಯಾಗಿ ಕೋಡಿ ಹರಿಯುವ ಮೂಲಕ 3ನೇ ಬಾರಿಗೆ ಭರ್ತಿಯಾಗಿತ್ತು. ಇತ್ತೀಚೆಗೆ ಅಚ್ಚುಕಟ್ಟು ಪ್ರದೇಶದ ರೈತರಿಗೆ ನೀರು ಹರಿಸಿದ್ದರಿಂದಾಗಿ ಸುಮಾರು 2.50 ಅಡಿಗೂ ಹೆಚ್ಚಿನ ನೀರು ಖಾಲಿ ಆಗಿದೆ.
ವಾಣಿ ವಿಲಾಸ ಸಾಗರ ಜಲಾಶಯದಿಂದ ಪ್ರತಿ ದಿನ 280 ಕ್ಯೂಸೆಕ್ ನೀರಿನ ಹೊರ ಹರಿವು ಇದೆ. ಬಹುತೇಕ ಅಚ್ಚುಕಟ್ಟು ಪ್ರದೇಶಕ್ಕೆ ನೀರನ್ನು ನಿಲುಗಡೆ ಮಾಡಲಾಗಿದೆ.