ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ದೂರದೃಷ್ಟಿಯ ನೇತೃತ್ವದಲ್ಲಿ, ಗರ್ಭಕಂಠದ ಕ್ಯಾನ್ಸರ್ ತಡೆಗಟ್ಟಲು 14 ವರ್ಷ ವಯಸ್ಸಿನ ಬಾಲಕಿಯರಿಗೆ ದೇಶಾದ್ಯಂತ HPV ಲಸಿಕೆ ಹಾಕುವ ಮೂಲಕ ಭಾರತ ಒಂದು ಪ್ರಮುಖ ಮೈಲಿಗಲ್ಲನ್ನು ಕ್ರಮಿಸುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಭಾರತದಲ್ಲಿ, ಗರ್ಭಕಂಠದ ಕ್ಯಾನ್ಸರ್ ಮಹಿಳೆಯರಲ್ಲಿ ಎರಡನೇ ಸಾಮಾನ್ಯ ಕ್ಯಾನ್ಸರ್ ಆಗಿದ್ದು, 1,27,526 ಹೊಸ ಪ್ರಕರಣಗಳು ಮತ್ತು 79,906 ಸಾವುಗಳು (2022ರಲ್ಲಿ) ಸಂಭವಿಸಿವೆ.
ಶೇ 80% ಕ್ಕಿಂತ ಹೆಚ್ಚು ಪ್ರಕರಣಗಳಿಗೆ ಹೆಚ್ಚಿನ ಅಪಾಯದ HPV 16 ಮತ್ತು 18 ವಿಧ ಕಾರಣವಾಗಿದ್ದು ವಿಶ್ವ ಆರೋಗ್ಯ ಸಂಸ್ಥೆ (WHO) ಶಿಫಾರಸು ಮಾಡಿರುವ ಈ ಒಂದು-ಡೋಸ್ ಲಸಿಕೆ ನಮ್ಮ ಬಾಲಕಿಯರನ್ನು ರೋಗ ಬರದಂತೆ ತಡೆದು ರಕ್ಷಿಸುತ್ತದೆ ಎಂದರು.
ಅರ್ಹ ಬಾಲಕಿಯರು ನಿಗದಿತ ಸರ್ಕಾರಿ ಆರೋಗ್ಯ ಸೌಲಭ್ಯ ಕೇಂದ್ರಗಳಲ್ಲಿ ಲಸಿಕೆ ತೆಗೆದುಕೊಳ್ಳಬೇಕು ಮತ್ತು ಅವರ ಭವಿಷ್ಯದ ರಕ್ಷಣೆಯನ್ನು ಖಚಿತಪಡಿಸಿಕೊಳ್ಳಬೇಕು ನಾನು ರಾಜ್ಯದ ಪ್ರತಿ ಕುಟುಂಬವನ್ನೂ ಸಿಎಂ ಸಿದ್ದರಾಮಯ್ಯ ಅವರು ಒತ್ತಾಯಿಸಿದ್ದಾರೆ.

