ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
“ಹ್ಯುಬ್ಲೋಟ್ ವಾಚ್ ದರ 70 ಲಕ್ಷ – ಶಾಸಕರಿಗೆ ಸಿಗುವ ಅನುದಾನ 40 ಲಕ್ಷ!!” ಎಂದು ಬಿಜೆಪಿ ವ್ಯಂಗ್ಯವಾಡಿದೆ.
ದಿವಾಳಿ ಕರ್ನಾಟಕ ಕಾಂಗ್ರೆಸ್ ಸರ್ಕಾರ ಒಬ್ಬ ಶಾಸಕರಿಗೆ ನೀಡುತ್ತಿರುವ ಅನುದಾನ ಕೇವಲ 40 ಲಕ್ಷ!! ಎಂದು ಕಾಂಗ್ರೆಸ್ ಹರಿಹಾಯ್ದಿದೆ.
ಇದನ್ನು ಮೊಳಕಾಲ್ಮೂರು ಕಾಂಗ್ರೆಸ್ ಶಾಸಕ ಎನ್.ವೈ.ಗೋಪಾಲಕೃಷ್ಣ ಅವರೆ ತುಂಬಿದ ಸಭೆಯಲ್ಲಿ ಬಹಿರಂಗಪಡಿಸಿದ್ದಾರೆ!! ಎಂದು ಬಿಜೆಪಿ ತಿಳಿಸಿದೆ.
ಸಿಎಂ ಸಿದ್ದರಾಮಯ್ಯ ಅವರೆ, ಕರ್ನಾಟಕದ ಬೊಕ್ಕಸ ಖಾಲಿಯಾಗದೆ ತುಂಬಿ ತುಳುಕುತ್ತಿದೆ ಎಂದ ಮೇಲೆ ಶಾಸಕರೊಬ್ಬರ ಕ್ಷೇತ್ರಕ್ಕೆ ಕೇವಲ 40 ಲಕ್ಷ ಅನುದಾನ ನೀಡುತ್ತಿರುವುದೇಕೆ ಎಂಬುದನ್ನು ತಿಳಿಸಿ ಎಂದು ಬಿಜೆಪಿ ತಾಕೀತು ಮಾಡಿದೆ.